ಅರ್ಹರಿಗೆ ಮಾಸಾಶನ ಸಿಗಲಿ: ಡಿಸಿ
ರೋಣ: ವೃದ್ಧಾಪ್ಯ, ವಿಧವಾ, ಅಂಗವಿಕಲ ಸೇರಿದಂತೆ ವಿವಿಧ ಮಾಸಾಶನಗಳು ಅರ್ಹರಿಗೆ ತಲುಪುವಂತಾಗಬೇಕು. ಆ ದಿಶೆಯಲ್ಲಿ ಅಧಿಕಾರಿಗಳ ಕಾರ್ಯ ಪ್ರಮುಖವಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಹೇಳಿದರು.
ಅವರು ಶುಕ್ರವಾರ ಸಂಜೆ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಜರುಗಿದ ರೋಣ ಹೋಬಳಿಗೆ ಸಂಬಂಧಿಸಿದ ವಿವಿಧ ಮಾಸಾಶನ ಅರ್ಜಿ ಪರಿಶೀಲನೆ ಹಾಗೂ ಇತ್ಯರ್ಥ ಕುರಿತು ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಯೋಜನೆ ಅನರ್ಹರ ಪಾಲಾಗದಂತೆ ಅಧಿಕಾರಿಗಳ ಕರ್ತವ್ಯ ಮುಖ್ಯವಾಗಿದೆ. ಅರ್ಹರಿದ್ದಲ್ಲಿ ಅಂತವರನ್ನು ಪದೇ ಪದೇ ಕಚೇರಿಗಳಿಗೆ ಅಲೆಯದಂತೆ ನೋಡಿಕೊಳ್ಳಬೇಕು. ಸರ್ಕಾರದ ಯೋಜನೆ ಮಹತ್ವ ಮತ್ತು ಅದರ ಸದ್ಭಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಅಧಿಕಾರಿಗಳ ಗೈರು: ವಿವಿಧ ಮಾಸಾಶನಕ್ಕೆ ಸಂಬಂಧಿಸಿದಂತೆ 102 ಅರ್ಜಿಗಳು ಬಂದಿದ್ದವು. ಅರ್ಜಿಗಳನ್ನು ಪರಿಶೀಲಿಸುತ್ತಿದ್ದಾಗ ಆಯಾ ಯೋಜನೆಗೆ ಸಂಬಂಧಿಸಿದ ಕೆಲ ಅಧಿಕಾರಿಗಳು ಸಭೆಗೆ ಬಾರದೇ ಗೈರಾಗಿದ್ದರು. ಕೆಲವರು ಸಭೆಯ ಹೊರಗಡೆ ನಿಂತಿದ್ದರು. ಈ ಸಂದರ್ಭದಲ್ಲಿ ಪರಿಶೀಲನೆ ಮಾಡುವಲ್ಲಿ ವಿಳಂಬವಾಗುತ್ತಿತ್ತು. ಇದನ್ನು ಗಮನಿಸಿದ ಜಿಲ್ಲಾಧಿಕಾರಿಗಳು ನಾನು ಬರುವ ದಿನಾಂಕ ಮೊದಲೇ ಗೊತ್ತುಪಡಿಸಿದ್ದರೂ ಏಕೇ ಕೆಲ ಅಧಿಕಾರಿಗಳು ಸ್ಥಳದಲ್ಲಿಲ್ಲ. ಅನಾವಶ್ಯಕವಾಗಿ ಸಮಯ ವ್ಯರ್ಥವಾಗುತ್ತದೆ. ಮುಂದೆ ಈ ರೀತಿಯಾಗದಂತೆ ಜಾಗೃತಿ ವಹಿಸಬೇಕು ಎಂದು ತಾಕೀತು ಮಾಡಿದರು.
ನೋವು ತೋಡಿಕೊಂಡ ವೃದ್ದರು: ಕಣ್ಣು ಕಾಣಲ್ಲ, ಕೈ, ಕಾಲಲ್ಲಿ ಶಕ್ತಿಯಿಲ್ಲ ನಾವು ಅರ್ಹರಿದ್ದರೂ ನಮಗೆ ಮಾಸಾಶನ ಸಿಕ್ಕಿಲ್ಲ. ದಯವಿಟ್ಟು ನಮಗೆ ಮಾಸಾಶನ ಸಿಗುವಂತೆ ಮಾಡಿ ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಅವರಲ್ಲಿ ನೋವು ತೋಡಿಕೊಂಡರು. ಅವರಿಗೆ ಜಿಲ್ಲಾಧಿಕಾರಿ ನೀಡುವ ಭರವಸೆ ಕೊಟ್ಟರು. ತಹಸೀಲ್ದಾರ್ ಎ.ಬಿ. ಪಂಡೀತ, ಉಪತಹಸೀಲ್ದಾರ್ ಎನ್.ಎಸ್. ಕೂಡಲ, ಪಿ.ಬಿ. ಮೇಲಿನಮನಿ, ಕಂಬಳ್ಯಾಳ, ವಿ.ವಿ. ಅಡಗತ್ತಿ, ಡಾ. ಸಜ್ಜನರ, ಕಂದಾಯ ನಿರೀಕ್ಷಕ ಕೊಪ್ಪದ ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ತಹಸೀಲ್ದಾರ ಕಾರ್ಯಲಯ ಸಿಬ್ಬಂದಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

