ಗದಗ

ಸಾಲ ಸದುಪಯೋಗ ಆಗಲಿ

Published On :

ಕನ್ನಡಪ್ರಭ ವಾರ್ತೆ, ಗದಗ, ಸೆ. 15
ರೈತರು ಬ್ಯಾಂಕಿನಿಂದ ಪಡೆದ ಬೆಳೆ ಸಾಲವನ್ನು ಸದ್ಬಳಕೆ ಮಾಡಿಕೊಂಡು ನಿಗದಿತ ಅವಧಿಯಲ್ಲಿ ಮರು ಪಾವತಿ ಮಾಡಬೇಕು ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನ ವಲಯ ಅಧಿಕಾರಿ ಆರ್.ಟಿ. ಬಾವಿ ಹೇಳಿದರು.
ಭಾನುವಾರ ತಾಲೂಕಿನ ಕೋಟುಮಚಗಿ ಗ್ರಾಮದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ನಲ್ಲಿ ಏರ್ಪಡಿಸಿದ್ದ ಗ್ರಾಹಕರ ಸಭೆ ಹಾಗೂ ಬೆಳೆ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬ್ಯಾಂಕ್ನಲ್ಲಿ ರೈತರಿಗಾಗಿ ಅನೇಕ ಯೋಜನೆಗಳಿವೆ. ಅವುಗಳ ಸದುಪಯೋಗಪಡೆದುಕೊಳ್ಳಬೇಕು. ಬ್ಯಾಂಕ್ ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು ಎಂದರು.
ಬ್ಯಾಂಕ್ ಶಾಖಾಧಿಕಾರಿ ಪಿ.ಎಂ. ಡಿಪೋ ಮಾತನಾಡಿ, ಗ್ರಾಮದಲ್ಲಿ ಬ್ಯಾಂಕ್ ಸ್ಥಾಪನೆಗೊಂಡು ಒಂದು ವರ್ಷದಲ್ಲಿ ಇಲ್ಲಿಯವರೆಗೆ # 1.67 ಕೋಟಿ ಠೇವಣಿ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಸದ್ಯ ನೂರಕ್ಕೂ ಹೆಚ್ಚು ರೈತ ಫಲಾನುವಭವಿಗಳಿಗೆ ಬೆಳೆಸಾಲ ಮಂಜೂರು ಮಾಡಿದೆ. ಪಡೆದ ಸಾಲ ಮರು ಪಾವತಿ ಹಾಗೂ ಠೇವಣಿ ಇಡಬೇಕು ಎಂದು ಸಲಹೆ ನೀಡಿದರು.
ಗ್ರಾಪಂ ಸದಸ್ಯ ಪ್ರಕಾಶ ಕುಲಕರ್ಣಿ ಮಾತನಾಡಿ, ರೈತರು ಬ್ಯಾಂಕ್ನಲ್ಲಿ ನಡೆಯುವ ಇಂತಹ ಜಾಗೃತಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಯೋಜನೆಗಳ ಮಾಹಿತಿ ಪಡೆಯಬೇಕು. ಬ್ಯಾಂಕ್ನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಬ್ಯಾಂಕ್ನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಸಹಕರಿಸಬೇಕು ಎಂದರು. ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಕಿತ್ತೂರು ಮಾತನಾಡಿ, ಕಳೆದ 1 ವರ್ಷದಲ್ಲಿ ಬ್ಯಾಂಕ್ ಉತ್ತಮ ವ್ಯವಹಾರ ಮಾಡುತ್ತ ಬಂದಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷೆ ಸುಮಂಗಲಾ ಜಗ್ಗಲ ಅರ್ಹ ಫಲಾನುಭವಿಗಳಿಗೆ ಬೆಳೆಸಾಲ ಪತ್ರ ವಿತರಿಸಿದರು. ಈ ಸಂದರ್ಭ ಮಾರ್ತಾಂಡಪ್ಪ ಗಡಗಿ, ಸಿ.ಜಿ. ಸೊನ್ನದ, ಶಿವಾನಂದ ಗೌಡ್ನವರ, ಶಂಕ್ರಪ್ಪ ಗಡ್ಡಿ, ಶೇಖರಪ್ಪ ಮುಧೋಳ, ಗೋವಿಂದಪ್ಪ ಹೊಸಮನಿ, ಶಂಕರ ಕುರಹಟ್ಟಿ, ಸೋಮಪ್ಪ ಜಗ್ಗಲ, ಶಿವಣ್ಣ ಗಂಗಪ್ಪನವರ, ರುದ್ರಗೌಡ ಸಂಕನಗೌಡ್ರ, ಬಾಬು ಗಾಣಿಗೇರ, ಮುನಿಯಪ್ಪ ಶಿಂಗ್ಟಾಲಕೇರಿ, ಅಮರೇಶ ಜಗ್ಗಲ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.