ನಾಳೆ ಉದ್ಘಾಟನೆ
ಗಜೇಂದ್ರಗಡ: ಸ್ಥಳೀಯ ಬಿ.ಎಸ್.ಎಸ್. ಸರ್ಕಾರಿ ಪ್ರಥಮ ದರ್ಜೆ ಮಹಾ ವಿದ್ಯಾಲಯದ ಸಾಂಸ್ಕೃತಿಕ, ಕ್ರೀಡಾ ಹಾಗೂ ಎನ್ನೆಸ್ಸೆಸ್ ಚಟುವಟಿಕೆಗಳ ಮತ್ತು ವಿಸ್ತೃತ ಕಟ್ಟಡ ಉದ್ಘಾಟನಾ ಸಮಾರಂಭವು ಸೆ. 17ರಂದು ಬೆಳಗ್ಗೆ 10.30 ಗಂಟೆಗೆ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಶಾಸಕ ಜಿ.ಎಸ್.ಪಾಟೀಲ ನೆರವೇರಿಸುವರು. ಕಾಲೇಜು ಶಿಕ್ಷಣ ಜಂಟಿ ನಿರ್ದೇಶಕ ಡಾ. ದೇವಾನಂದ ಗಾಂವಕರ, ಮಹಾವಿದ್ಯಾಲಯದ ಪ್ರಾಚಾರ್ಯ ಪಿ.ಎಚ್. ಕ್ಯಾರಕೊಪ್ಪ, ಎನ್ನೆಸ್ಸೆಸ್ ಘಟಕ ಯೋಜನಾಧಿಕಾರಿ ವಿ.ಪಿ. ಹಿತ್ತಲಮನಿ, ಕ್ರೀಡಾ ಸಂಚಾಲಕ ಐ.ಎಂ. ದಾವಣಗೆರೆ, ಜೆ.ಬಿ. ಹುಲ್ಲೂರ, ವಿದ್ಯಾರ್ಥಿ ವಿಭಾಗದ ಶರಣಪ್ಪ ರಾಜೂರ, ಪ್ರೇಮಾ ಹುನಗುಂದ, ರಾಮಪ್ಪ ಭಜಂತ್ರಿ, ಕಳಕಪ್ಪ ವದೆಗೋಳ, ಮಂಜುನಾಥ ಹದ್ದನ್ನವರ, ರಾಜು ಮಿಸ್ಕಿನ್, ಲಕ್ಷ್ಮಿ ಪಿ, ಗಂಗಮ್ಮ ಎಂ, ಪಿ.ಎಂ. ದಿವಾಣದ, ಬಿ.ವಿ. ಮುನವಳ್ಳಿ, ಡಾ. ಎಂ.ವಿ.ಕುಂಬಾರ, ಎಸ್.ಎಚ್. ಪವಾರ ಮುಂತಾದವರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲೆಯ ಅಲ್ಲಲ್ಲಿ ಮಳೆ
ಗದಗ: ಜಿಲ್ಲೆಯಾದ್ಯಂತ ಭಾನುವಾರವೂ ಮಳೆ ಪ್ರಭಾವ ಮುಂದುವರಿದಿದ್ದು ಗದಗ, ಬೆಟಗೇರಿ ಅವಳಿ ನಗರ, ಮುಳಗುಂದ ಪಟ್ಟಣ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ, ರೋಣ ಪಟ್ಟಣ ಹಾಗೂ ಕೆಲ ಗ್ರಾಮಗಳಲ್ಲಿ ಹಾಗೂ ಹೊಳೆಆಲೂರ ಮತ್ತು ಕೆಲ ಗ್ರಾಮಗಳಲ್ಲಿಯೂ 15 ನಿಮಿಷಕ್ಕೂ ಹೆಚ್ಚು ಕಾಲ ಮಳೆಯಾದ ಬಗ್ಗೆ ವರದಿಯಾಗಿದೆ. ಬೆಳಗ್ಗೆ ತೀವ್ರ ಬಿಸಿಲಿನ ವಾತಾವರಣ ಸಂಜೆಯ ವೇಳೆಗೆ ಸುರಿಯುವ ಮಳೆಯಿಂದ ರೈತಾಪಿ ವರ್ಗದಲ್ಲಿ ಹರ್ಷ ಮನೆ ಮಾಡಿದ್ದು, ಹಿಂಗಾರು ಬಿತ್ತನೆ ಕಾರ್ಯಕ್ಕೆ ಜಿಲ್ಲೆಯಾದ್ಯಂತ ಭರತ ಸಿದ್ಧತೆ ನಡೆಯುತ್ತಿದೆ.
ಪ್ರಾಥಮಿಕ, ಪ್ರೌಢಶಾಲೆ ಕ್ರೀಡಾಕೂಟ ಇಂದು
ನರಗುಂದ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಸೆ. 16ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ನರಗುಂದ ಹಾಗೂ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘ ತಾಲೂಕು ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಶಾಸಕ ಬಿ.ಆರ್.ಯಾವಗಲ್ಲ ಉದ್ಘಾಟಿಸುವರು. ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಉಪಾಧ್ಯಕ್ಷೆ ಗುರುದೇವಿ ಶಾನವಾಡಮಠ, ಜಿಪಂ ಸದಸ್ಯ ಶಾಂತಾ ದಂಡಿನ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಎಂ.ಬಿ.ಅರಹುಣಸಿ, ಎಸ್.ಡಿ. ಕೊಳ್ಳಿಯವರ, ಎಂ.ಎಂ. ಮುಳ್ಳೂರ, ಎಫ್.ವೈ. ದೊಡ್ಡಮನಿ, ತಾಪಂ ಅಧಿಕಾರಿ ನಂದಕುಮಾರ ಗುಂಡಾ, ಗದಗ ಸಾ.ಶಿ.ಇ. ಉಪನಿರ್ದೇಶಕ ರಾಜೀವ ನಾಯಕ, ಎಂ.ಎಂ. ಕಲಹಾಳ, ಪಿ.ಎಫ್. ಸೋಲಾಪುರಿ, ಪ್ರಶಾಂತ ರಾಠೋಡ, ವಿ.ಎನ್. ಭೋಸಲೆ, ಸುರೇಶ ಉಕ್ಕಲಿ, ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

