25ರಂದು ಸಮಿತಿ ಸಭೆ
ಗದಗ: ಜಿಲ್ಲಾ ಮಟ್ಟದ ಜಾಗೃತ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಹಾಗೂ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದ ಶಿವಕುಮಾರ ಉದಾಸಿಯವರ ಅಧ್ಯಕ್ಷತೆಯಲ್ಲಿ ಸೆ. 25ರಂದು ಮಧ್ಯಾಹ್ನ 12.30 ಗಂಟೆಗೆ ಗದಗ ಜಿಪಂ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಜಾಗೃತ ಮತ್ತು ಮೇಲ್ಚಿಚಾರಣಾ ಸಮಿತಿ ಸಭೆಯನ್ನು ಏರ್ಪಡಿಸಲಾಗಿದೆ.
ಬಹಿರಂಗ ವಿಚಾರಣಾ ಸಭೆ
ಗದಗ: ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸೆ. 19 ಮತ್ತು 20ರಂದು ಬೆಳಗ್ಗೆ 11 ಗಂಟೆಗೆ ಆಯೋಗದ ಕಚೇರಿ ನಂ. 16 ದೇವರಾಜ ಅರಸು ಭವನದ ಆಡಿಟೋರಿಯಂ, ಮಿಲ್ಲರ್ಸ್ ಟ್ಯಾಂಕ್ ಏರಿಯಾ, ವಸಂತನಗರ, ಬೆಂಗಳೂರು-560052 ಇಲ್ಲಿ ವಿಚಾರಣಾ ಸಭೆ ಏರ್ಪಡಿಸಿದೆ. ಸೆ. 19ರಂದು ನಾಯರ್ ಜನಾಂಗ, ವೀರಶೈವ ಆದಿಬಣಜಿಗ ಜನಾಂಗ, ಶಿವಸಿಂಪಿ ಜನಾಂಗ, ಮೊದಲಿಯಾರ್ ಜನಾಂಗ, ಸೆ. 20ರಂದು ಆರ್ಯ ವೈಶ್ಯ ಬೇರಿ ಚೆಟ್ಟಿಯಾರ್ ಜನಾಂಗ, ಗೋಂದಳಿ ಜನಾಂಗ, ಯಲ್ಲಮ ಒಕ್ಕಲಿಗ ಜನಾಂಗ, ಮುಖಾರಿ ಜನಾಂಗಗಳ ಬಗ್ಗೆ ಬಹಿರಂಗ ವಿಚಾರಣಾ ಸಭೆಯನ್ನು ಏರ್ಪಡಿಸಲಾಗಿದೆ. ಈ ಎಲ್ಲ ಜಾತಿ, ಜನಾಂಗಗಳ ಬಗ್ಗೆ ಮಾಹಿತಿ ಹೊಂದಿರುವ ಸಂಘ-ಸಂಸ್ಥೆಗಳು, ವ್ಯಕ್ತಿಗಳು ಖುದ್ದಾಗಿ ಅಥವಾ ಅಧಿಕೃತವಾಗಿ ಸಂಘ ಸಂಸ್ಥೆಗಳಿಂದ ನೇಮಕಗೊಂಡ ನ್ಯಾಯವಾದಿಗಳು ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ಅಹವಾಲುಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಆಯೋಗದ ಮುಂದೆ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

