ಕ್ರೀಡಾಕೂಟದಲ್ಲಿ ಯಶಸ್ಸು
ಗದಗ: ಈಚೆಗೆ ಜಿಲ್ಲೆಯ ರೋಣ ತಾಲೂಕಿನ ಸೂಡಿ ಗ್ರಾಮದಲ್ಲಿ ಜರುಗಿದ ರೋಣ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಜಿಲ್ಲೆಯ ರೋಣ ತಾಲೂಕಿನ ಗೋಗೇರಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅದ್ವಿತೀಯ ಸಾಧನೆ ಮಾಡಿದ್ದಾರೆ. 12 ವಿಭಾಗಗಳಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಯಲ್ಲವ್ವ ಯಗರಿ 800 ಮೀ. ಓಟದಲ್ಲಿ ಪ್ರಥಮ, ಭಾಗ್ಯ ಪೂಜಾರ 1500 ಮೀ. ಓಟದಲ್ಲಿ ಪ್ರಥಮ, ಗಂಗಾ ಗಮಗೇರಿ 3000 ಸಾವಿರ ಮೀ. ಓಟದಲ್ಲಿ ಪ್ರಥಮ, ನೀಲವ್ವ ಗಾಗರಿ 3000 ಮೀ. ಓಟದಲ್ಲಿ ದ್ವಿತೀಯ, ಯಲ್ಲವ್ವ ಯಗರಿ 3 ಸಾವಿರ ಮೀ. ನಡಿಗೆಯಲ್ಲಿ ಪ್ರಥಮ, ಶರಣಮ್ಮ ಗಾರಗಿ 200 ಮೀ. ಓಟದಲ್ಲಿ ದ್ವಿತೀಯ, ಯಲ್ಲವ್ವ ಯಗರಿ ಭಲ್ಲೆ ಎಸೆತದಲ್ಲಿ ತೃತೀಯ, ಅಳ್ಳನಗೌಡ ಪಾಟೀಲ 400 ಮೀ. ಓಟದಲ್ಲಿ ಪ್ರಥಮ, ನಾಗರಾಜ ಚವ್ಹಾಣ ಅಡೆತಡೆ ಓಟದಲ್ಲಿ ಪ್ರಥಮ, ನಾಗರಾಜ ಚವ್ಹಾಣ ಅಡೆತಡೆ ಓಟದಲ್ಲಿ ಪ್ರಥಮ, ಪ್ರಭು ಹೊರಪೇಟೆ 5 ಸಾವಿರ ಮೀ. ನಡಿಗೆಯಲ್ಲಿ ಪ್ರಥಮ, ಮಂಜುನಾಥ ಗುಂಡೆ 5 ಸಾವಿರ ಮೀ. ನಡಿಗೆಯಲ್ಲಿ ದ್ವಿತೀಯ, ನಾಗರಾಜ ಚವ್ಹಾಣ 200 ಮೀ. ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಅಲ್ಲದೇ ಸೆ. 13ರಂದು ಬಿ.ಆರ್.ಸಿ. ನಡೆಸಿದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಗೋಗೇರಿ ಸರ್ಕಾರಿ ಪ್ರೌಢಶಾಲೆಯ ಅಭಿಷೇಕ ಚವ್ವಣ್ಣವರ ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಿಜೇತರನ್ನು ಶಾಲಾ ಪ್ರಧಾನ ಗುರುಗಳು, ಸಿಬ್ಬಂದಿ, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

