ಸುದ್ದಿ ಸಂಕ್ಷೇಪ
ನಿಷ್ಪಕ್ಷಪಾತದಿಂದ ಕರ್ತವ್ಯ ನಿರ್ವಹಿಸಿ
ಗಜೇಂದ್ರಗಡ: ಅಧಿಕಾರಿಗಳು ನಿಷ್ಪಕ್ಷಪಾತದಿಂದ ಕರ್ತವ್ಯ ನಿರ್ವಹಿಸುವುದರ ಜತೆಗೆ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಪುರಸಭೆ ಕಚೇರಿಗೆ ಪದೇ ಪದೇ ಅಲೆದಾಡುವುದನ್ನು ತಪ್ಪಿಸಲು ಮುಂದಾಗಿ ಎಂದು ಪುರಸಭೆ ಅಧ್ಯಕ್ಷೆ ಕವಿತಾ ಜಾಲಿಹಾಳ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು. ಅವರು ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ ಗುರುವಾರ ಮೊದಲ ಬಾರಿ ಕಚೇರಿಯಲ್ಲಿ ಪೂಜೆ ಸಲ್ಲಿಸಿ ನಂತರ ಪುರಸಭೆಯ ಸಭಾ ಭವನದಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಪಟ್ಟಣದ ಎಲ್ಲ ಬಡಾವಣೆಗಳ ಸರ್ವಾಂಗೀಣ ಪ್ರಗತಿಗೆ ಜನ ಮೆಚ್ಚುವಂತೆ ಆಡಳಿತ ನಡೆಸಲು ಅಧಿಕಾರಿಗಳು ಸಹಕಾರ ನೀಡಬೇಕು. ಸರ್ಕಾರ ನೀಡಿರುವ ಅನುದಾನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಿ ಜನರ ನಿರೀಕ್ಷೆಗೆ ಚ್ಯುತಿ ಬಾರದಂತೆ ಪ್ರೀತಿ ವಿಶ್ವಾಸದೊಂದಿಗೆ ಆಡಳಿತ ನಡೆಸುವ ಮಹತ್ತರ ಜವಾಬ್ದಾರಿಕೆ ನಮ್ಮ ಮೇಲಿದೆ. ಪುರಸಭೆಯ ಸರ್ವ ಸದಸ್ಯರು ಪಕ್ಷಭೇದ ಮರೆತು ಜನರ ಕುಂದುಕೊರತೆಗಳ ನಿವಾರಣೆಗೆ ಹಾಗೂ ಪಟ್ಟಣದ ಅಭಿವೃದ್ಧಿಯತ್ತ ಚಿಂತಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕರ್ತವ್ಯ ಪ್ರಜ್ಞೆಯಿಂದ ಕಾರ್ಯನಿರ್ವಹಿಸಿ ಎಂದರು. ಪುರಸಭೆ ಉಪಾಧ್ಯಕ್ಷೆ ಅಕ್ಕಮ್ಮ ಜಾನಾಯಿ ಮಾತನಾಡಿದರು. ಪುರಸಭೆ ಸದಸ್ಯ ಸಿದ್ದಣ್ಣ ಬಂಡಿ, ಪ್ರಭು ಚವಡಿ, ಶರಣಪ್ಪ ರೇವಡಿ, ಅಶೋಕ ವನ್ನಾಲ, ಮಂಜು ಬಡಿಗೇರ, ರವಿ ಕಲಾಲ, ಸುಮಿತ್ರಾ ತೊಂಡಿಹಾಳ, ವಿಜಯಲಕ್ಷ್ಮಿ ಚಟ್ಟೇರ, ಕಳಕಪ್ಪ ಗುಳೇದ, ಷಣ್ಮುಖಪ್ಪ ಚಿಲಝರಿ, ಬುಡ್ಡಪ್ಪ ಮೂಲಿಮನಿ, ಅಧಿಕಾರಿಗಳಾದ ಸಿ.ಕೆ. ಕುಲಕರ್ಣಿ, ಕೆ.ಓ. ಮುಲ್ಲಾ, ಪೌರಸೇವಾ ನೌಕರರ ಸಂಘ ಅಧ್ಯಕ್ಷ ಎಂ.ಬಿ. ಒಂಟಿ, ಪಿ.ಎನ್. ದೊಡ್ಡಮನಿ, ಮಹೇಶ ನಿಡಶೇಶಿ, ಜಿ.ಎನ್. ಕಾಳೆ, ಉಮಾ ಕುರಹಟ್ಟಿ, ಅನ್ನಪೂರ್ಣಾ ಗದಗಿನ, ನಾಜೀಮ ಬೇಲೇರಿ ಮುಂತಾದವರು ಇದ್ದರು.
ನೀರು ಪೂರೈಕೆ ಮಾಹಿತಿ
ಗದಗ: ನಗರದ ವೀರೇಶ್ವರ ನಗರ, ಹುಡ್ಕೂ ಭಾಗ 1 ಮತ್ತು 2, ಡಾ. ಬೀರದಾರ ಲೈನ್, ಜಯಶ್ರೀ ಪವಾರ ಲೈನ್, ಬ್ಯಾಂಕರ್ಸ ಕಾಲೋನಿ, ಬಸಯ್ಯ ಡಾ. ಲೈನ್, ಬೂದಿಹಾಳ ಲೈನ್, ಅಪಾರ್ಟಮೆಂಟ್, ಎ.ಸಿ. ಕ್ವಾಟರ್ಸ್ ಲೈನ್, ಮಾನ್ವಿ ಪ್ಲಾಟ್, ಗಡ್ಡಿಲೈನ್, ಪುರದರ ಲೈನ್, ಸೂನಾಭಾಯಿ ಪವಾರ ಲೈನ್, ಗಾಯಕವಾಡ ಲೈನ್, ಜಾಕೀರ ಹುಸೇನ ಕಾಲೋನಿ 3ನೇ ಭಾಗ, ಮಸೂತಿ ಲೈನ್, ಬಾಕಳೆ ಲೈನ್, ಎಂ ಬಸಪ್ಪ ಲೈನ್, ರೇಣುಕಾಚಾರ್ಯ ಗುಡಿ ಲೈನ್, ಕೇಶವ ನಗರ ಭಾಗ 1 ಮತ್ತು2, ಕ್ವಾರಿ ಲೈನ್, ಕರಿಗೌಡ್ರ ಲೈನ್, ಮಂಗಳೂರ ಲೈನ್, ಹುಬ್ಳಿ ರೋಡ ಲೈನ್, ತಾಜ್ ನಗರ, ಡಿ.ಸಿ. ಆಫೀಸ್, ವಡ್ಡರಗೇರಿ ಭಾಗ 1 ಮತ್ತು 2, ಖಾಜಿ ಲೈನ್, ಕಳಸಾಪುರ ರಸ್ತೆ, ಲೂದಿ ಲೈನ್, ವರ್ಣೇಕರ ಲೈನ್, ಕುಲಕರ್ಣಿ ಲೈನ್, ಬಾಳಿಕಾಯಿ ಮಾಸ್ತರ ಲೈನ್, ಜಲಮಂಡಳಿ ಕ್ವಾಟರ್ಸ್, ಮಾನ್ವಿ ಕಾರ್ಖಾನೆ, ದಾಸರಗಲ್ಲಿ, ಕಿಲ್ಲಾ, ಹಳೇ ಕಚೇರಿ, ತ್ರಿಕೂಟೇಶ್ವರ ಗುಡಿ ಲೈನ್, ಕಟ್ಟಪಿಸ್ ಲೈನ್, ಸೂಣಗಾರ ಓಣಿ, ಕುದರಿ ಲೈನ್, ಡಂಬಳ ಲೈನ್ ಈ ಭಾಗಗಳಲ್ಲಿ ಶುಕ್ರವಾರ ತುಂಗಭದ್ರಾ ನದಿನೀರು ಪೂರೈಕೆ ಮಾಡಲಾಗುತ್ತದೆ.
ಟ್ರ್ಯಾಕ್ಟರ್-ಬೈಕ್ ಡಿಕ್ಕಿ: ಓರ್ವ ಸಾವು
ಗದಗ: ತಾಲೂಕಿನ ಕೋಟುಮಚಗಿ-ಅಬ್ಬಿಗೇರಿ ಮಾರ್ಗಮಧ್ಯೆ ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಮೃತನನ್ನು ಬೆಟಗೇರಿಯ ಸುಭಾಷ ಸಣ್ಣಕ್ಕಿ(35) ಎಂದು ಗುರುತಿಸಲಾಗಿದೆ. ಮೃತನ ಹೆಂಡತಿ ಶಂಕ್ರಮ್ಮಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವಿಶ್ವಕರ್ಮ ಜಯಂತ್ಯುತ್ಸವ
ಹಾವೇರಿ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ವರವಿ ಮೌನೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಶ್ರೀ ವಿಶ್ವಕರ್ಮ ಜಯಂತ್ಯುತ್ಸವ ಅದ್ಧೂರಿಯಾಗಿ ನಡೆಯಿತು. ಶ್ರೀ ವಿರೂಪಾಕ್ಷ ಸ್ವಾಮಿಗಳು ಹಾಗೂ ಕಿರಿಯ ಶ್ರೀಗಳಾದ ಮೌನೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ವೇದಬ್ರಹ್ಮ ಹನುಮಂತಾಚಾರ್ಯ, ಮಹೇಶಾಚಾರ್ಯ ಅವರ ಪೌರೋಹಿತ್ಯದಲ್ಲಿ ಹೋಮ-ಹವನಗಳು ನಡೆದವು. ಗಂಗಪ್ಪ ಮಾನಪ್ಪ ಬಡಿಗೇರ ಉಪಸ್ಥಿತರಿದ್ದರು. ಪೂರ್ಣಾಹುತಿ, ಮಹಾಮಂಗಳಾರತಿ ಹಾಗೂ ಸಾರ್ವಜನಿಕ ಅನ್ನ ಸಂತರ್ಪಣೆ ನೆರವೇರಿದವು .
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

