ಪುಟ್ಟರಾಜರಿಂದ ಅಂಧರ ಬಾಳಲ್ಲಿ ಬೆಳಕು
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಸೆ. 20
ಪಂ. ಪುಟ್ಟರಾಜ ಕವಿ ಗವಾಯಿಗಳವರು ಅಂಧ, ಅನಾಥ ಮಕ್ಕಳಿಗೆ ಬದುಕಿನ ಭರವಸೆ ನೀಡಿ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿದವರು ಎಂದು ಅಂಗೂರೇಶ್ವರ ಮಠದ ಶಿವಯೋಗೀಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.
ಅವರು ಈಚೆಗೆ ತಾಲೂಕಿನ ಸಾಸರವಾಡ ಗ್ರಾಮದಲ್ಲಿ ಪಂ. ಪುಟ್ಟರಾಜ ಗವಾಯಿಗಳ ತೃತೀಯ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಂದಿನ ಸಮಾಜದಲ್ಲಿ ಅಂಧ, ಅನಾಥ ಮಕ್ಕಳನ್ನು ನಿರ್ಲಕ್ಷಿಸುವವರೇ ಹೆಚ್ಚು. ಅಂತವರನ್ನೆಲ್ಲ ಕರೆತಂದು ವಿದ್ಯಾದಾನ, ಅನ್ನದಾನ, ಆಶ್ರಯ ನೀಡಿ ಬದುಕಿನಲ್ಲಿ ಬೆಳಕು ತಂದವರು. ಭಿಕ್ಷೆ ಬೇಡುವ ಕೈಗಳಿಗೆ ಅಕ್ಷಯ ಪಾತ್ರೆ ನೀಡಿದವರು ಎಂದರು. ಸಾಹಿತಿ ಎನ್.ಸಿ. ಪಾಟೀಲ, ಕರವೇ ತಾಲೂಕು ಘಟಕದ ಅಧ್ಯಕ್ಷ ನೀಲನಗೌಡ ಪಾಟೀಲ ಮಾತನಾಡಿ, ಪುಟ್ಟರಾಜರನ್ನು ಸ್ಮರಿಸಿಕೊಳ್ಳುವುದೇ ಭಾಗ್ಯ. ಅಂತವರು ನಡೆದಾಡಿದ ನೆಲದಲ್ಲಿ ನಾವೆಲ್ಲ ಹುಟ್ಟಿದ್ದು ಪುಣ್ಯ. ಪುಟ್ಟರಾಜರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ವ್ಯವಸ್ಥೆಯನ್ನು ಸರ್ಕಾರ ವಿವಿಧ ಹಂತದಲ್ಲಿ ಮಾಡಬೇಕಿದೆ. ಎಲ್ಲ ಸಂಗತಿಗಳನ್ನು ಸಂಗ್ರಹಿಸಿ ನಿತ್ಯ ಸ್ಮರಿಸುವಂತೆ ಮಾಡುವುದು ಅವಶ್ಯವಿದೆ. ಗವಾಯಿಗಳು ಭೂಮಿಯ ಮೇಲೆ ಇಲ್ಲದಿದ್ದರೂ ಜನರ ಹೃದಯದಲ್ಲಿದ್ದಾರೆ ಎಂದರು. ರಾಜೇಂದ್ರಸ್ವಾಮಿ ದಿವಾನ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಲ್ಲನಗೌಡ ಪಾಟೀಲ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಾಮದೇವ ಸ್ವಾಮಿ, ರವೀಂದ್ರಸ್ವಾಮಿ ಕುಲಕರ್ಣಿ, ಶಾಂತಪ್ಪ ಬಳ್ಳಾರಿ, ಶಂಕ್ರಪ್ಪ ಕಮ್ಮಾರ, ಮುದಕಣ್ಣ ಕಾಟ್ರಳ್ಳಿ, ಈರಣ್ಣ ಬಂಡಿ, ಕುಮಾರಸ್ವಾಮಿ ಹಿರೇಮಠ, ಹಾಲೇಶ ಬಂಡಿ, ಶರಣು ದುರ್ಗದ, ಮಂಜುನಾಥ ನಾವಿ, ಈರಣ್ಣ ಬಳ್ಳಾರಿ, ಹನಮಂತ ಛಬ್ಬಿ ಮುಂತಾದವರು ಉಪಸ್ಥಿತರಿದ್ದರು. ಗುಡ್ಡಪ್ಪ ಬಾರಕೇರ ಸ್ವಾಗತಿಸಿ, ನಿರೂಪಿಸಿದರು. ಷಡಕ್ಷರಸ್ವಾಮಿ ಮುದಗಲ್ಮಠ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

