ಗದಗ

ಸಂದರ್ಶನಕ್ಕಾಗಿ ಆಗಮಿಸಿ ಕಾದು ಸುಸ್ತಾಗಿ ಹೋದರು!

Published On :

ಗದಗ: ಸ್ವಯಂ ಉದ್ಯೋಗ ಪ್ರಾರಂಭಕ್ಕಾಗಿ ಸ್ವಯಂ ಉದ್ಯೋಗ ಸಾಲ ಯೋಜನೆಯ ಅಡಿಯಲ್ಲಿ ತಾಲೂಕಿನ ಮಹಿಳೆಯರು ಮಹಿಳಾ ಅಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದ ಅರ್ಜಿದಾರರ ಸಂದರ್ಶನವನ್ನು ನಗರದ ಕಾಟನ್‌ಸೇಲ್ ಸೊಸೈಟಿಯ ಆವರಣದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಡಿಯಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು.
ಸಂದರ್ಶನಕ್ಕೆ ಬೆಳಗ್ಗೆಯಿಂದಲೇ ಆಗಮಿಸಿದ್ದ ನೂರಾರು ಸಂಖ್ಯೆಯ ಮಹಿಳೆಯರು ಹಲವಾರು ಗಂಟೆಗಳ ಕಾಲ ಕಾಯುವಂತಾಯಿತು. ಈ ಸಂದರ್ಶನದಲ್ಲಿ 800ಕ್ಕೂ ಹೆಚ್ಚು ಮಹಿಳೆಯರು ಭಾಗಿಯಾಗಿದ್ದರು. ಸರತಿ ಸಾಲಿನಲ್ಲಿ ನಿಂತು ಸುಸ್ತು ಹೊಡೆದ ಮಹಿಳೆಯರು ನೆಲದ ಮೇಲೆಯೇ ಕುಳಿತುಕೊಂಡು ಸರತಿ ಸಾಲಿನಲ್ಲಿ ಸಾಗುವ ದೃಶ್ಯ ಸಾಮಾನ್ಯವಾಗಿತ್ತು. ಇನ್ನೂ ಕೆಲವು ಮಹಿಳೆಯರು ತಮ್ಮ ಹಸುಗೂಸುಗಳನ್ನು ಜತೆಗೆ ಕರೆತಂದಿದ್ದರಿಂದ ಸರತಿ ಸಾಲಿನಲ್ಲಿ ತೀವ್ರ ತೊಂದರೆಗೊಳಗಾಗಿರುವುದು, ಬಂದಂತಹ ಎಲ್ಲ ಅರ್ಜಿಗಳಿಗೂ ಒಂದೇ ದಿನ ಸಂದರ್ಶನ ನಡೆಸಿದ್ದರಿಂದ ಮಹಿಳೆಯರು ಸಂದರ್ಶನಕ್ಕಾಗಿ ಸಂಜೆಯವರೆಗೂ ಕಾಯ್ದ ಪ್ರಸಂಗ ನಡೆಯಿತು. ಮಹಿಳೆಯರ ಸ್ವಯಂ ಉದ್ಯೋಗ ಸಾಲಯೋಜನೆಯಡಿ 55 ಸಾವಿರಗಳಿಂದ ಒಂದು ಲಕ್ಷ ರುಪಾಯಿಗಳವರೆಗೆ ಸಾಲ ದೊರೆಯುತ್ತದೆ. ಸಾಮಾನ್ಯ ವರ್ಗದ ಮಹಿಳೆಯರಿಗೆ ರು. 7500 ಹಾಗೂ ಎಸ್.ಸಿ. ಮತ್ತು ಎಸ್.ಟಿ. ವರ್ಗದ ಮಹಿಳೆಯರಿಗೆ ರು. 14000 ಸರ್ಕಾರದ ಸಬ್ಸಿಡಿ ದೊರೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.