ಸೂರಿಗೆ ಪೌರಕಾರ್ಮಿಕರ ಆಗ್ರಹ
ಕನ್ನಡಪ್ರಭ ವಾರ್ತೆ, ಗದಗ, ಸೆ. 23
ಗದಗ -ಬೆಟಗೇರಿ ಅವಳಿ ನಗರದಲ್ಲಿ ಸ್ವಚ್ಛತೆ ಕೆಲಸಕ್ಕಾಗಿ ಹಗಲಿರುಳು ದುಡಿಯುತ್ತಿರುವ ಪೌರ ಕಾರ್ಮಿಕರ ಪರಿವಾರಕ್ಕೆ ಸೂರು ಕಲ್ಪಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಪೌರಾಯುಕ್ತರಿಗೆ ಪೌರಕಾರ್ಮಿಕರು ಮನವಿ ಸಲ್ಲಿಸಿದರು.
ಇದುವರೆಗೂ ಸರ್ಕಾರದಿಂದ ಸಂಬಳವನ್ನು ಬಿಟ್ಟು ಬೇರೆ ಯಾವುದೇ ಸವಲತ್ತು ಕೊಟ್ಟಿರುವುದಿಲ್ಲ. ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕ್ವಾಟರ್ಸ್ ನಿರ್ಮಿಸಿಕೊಟ್ಟಿರುತ್ತಾರೆ ಹಾಗೂ ಈ ಮನೆ ಕಟ್ಟಲಿಕ್ಕೆ 5 ಲಕ್ಷ ಸಾಲದ ಸೌಲಭ್ಯ ಕಲ್ಪಿಸಿರುತ್ತಾರೆ. ಆದರೆ ಗದಗದಲ್ಲಿ ದುಡಿಯುತ್ತಿರುವ ಪೌರಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡಿರುವುದಿಲ್ಲ.
ಆದ್ದರಿಂದ ತಾವು ಪೌರ ಕಾರ್ಮಿಕರ ದಿನಾಚರಣೆಯ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಸರ್ಕಾರದಿಂದ ಹುಬ್ಬಳ್ಳಿ-ಧಾರವಾಡ ಮಾದರಿಯಲ್ಲಿ ಸೌಲಭ್ಯ ಕಲ್ಪಿಸಬೇಕೆಂದು ಜೈ ಭೀಮ ಸೇನೆ ಗದಗ ಜಿಲ್ಲಾ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಅಧ್ಯಕ್ಷ ಗಣೇಶ ಹುಬ್ಬಳ್ಳಿ, ಕಾರ್ಯದರ್ಶಿ ರಾಘವೇಂದ್ರ ಪರಾಪುರ, ಮಾರೆಪ್ಪ ಬಿಂಗಿ, ಯಮನಪ್ಪ ಸಂಗಾಪುರ, ಯಲ್ಲಪ್ಪ ಹುಬ್ಬಳ್ಳಿ, ಮಹೇಶ ಐನಾಪುರ, ಮೃತ್ಯುಂಜಯ ದೊಡ್ಡಮನಿ, ಹನಮಂತ ದೊಡ್ಡಮನಿ, ಪಂಚಾಕ್ಷರಿ ದೊಡ್ಡಮನಿ, ಕೆಂಚಪ್ಪ ಪೂಜಾರ, ಚಂದ್ರು ಹಾದಿಮನಿ, ವಾಸಪ್ಪ ಭರಮಣ್ಣವರ, ಸಣ್ಣಪ್ಪ ಬೊಳಮ್ಮನವರ, ಭೀಮಪ್ಪ ಕಲ್ಲೂರ, ವೆಂಕಟೇಶ ಬಳ್ಳಾರಿ, ಯಮನೂರ ಕಟ್ಟಿಮನಿ, ಮಾರುತಿ ಕಟ್ಟಿಮನಿ, ಗುರಪ್ಪ ಯಗ್ಗಪಲ್ಲೆ, ನಾಗವ್ವ ತೌಜಲ್, ಶಾಂತವ್ವ ಬಳ್ಳಾರಿ, ಲಕ್ಷ್ಮವ್ವ ಕಲ್ಮನಿ, ಲಕ್ಷ್ಮೀ ಬಳ್ಳಾರಿ, ಲಲಿತಾ ಬಂಗಿ, ರೇಣವ್ವ ಗುತ್ತಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

