ಸರ್ಕಾರಿ ಯೋಜನೆಗಳಿಂದ ಗೋಸಾವಿ ಜನಾಂಗ ವಂಚಿತ: ಉಮಾದೇವಿ ಕಾತರಕಿ
ಗದಗ: ನಗರದ ವಿವೇಕಾನಂದ ಕೊಳಚೆ ಪ್ರದೇಶದ ಪಕ್ಕದಲ್ಲಿರುವ 80 ವರ್ಷಗಳಷ್ಟು ಹಿಂದಿನಿಂದಲೂ ಗುಡಿಸಲು ನಿವಾಸಿಗಳಾಗಿ ಸರ್ಕಾರದ ನಿರ್ಲಕ್ಷ್ಯತೆಯಿಂದ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿರುವ ಗೋಸಾವಿ ಸಮುದಾಯಕ್ಕೆ ಜಾಗೃತಿ ಮೂಡಿಸುವ ಕೆಲಸವನ್ನು ಸ್ಲಂ ಯುವ ಸಮಿತಿ ಮಾಡಬೇಕಾಗಿದೆ ಎಂದು ಸ್ಲಂ ಮಹಿಳಾ ಸಮಿತಿ ಅಧ್ಯಕ್ಷ ಉಮಾದೇವಿ ಕಾತರಕಿ ಹೇಳಿದರು.
ಅವರು ಸೋಮವಾರ ಸ್ಥಳೀಯ ವಿವೇಕಾನಂದ ರಸ್ತೆಯ ಪಕ್ಕದಲ್ಲಿರುವ ಗೋಸಾವಿ ಸ್ಲಂನಲ್ಲಿ ಸ್ಲಂ ಯುವ ಸಮಿತಿಯ ಶಾಖೆ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಸ್ಲಂ ಯುವ ಸಮಿತಿಯು ಇಲ್ಲಿಯ ಯುವಕರಿಗೆ ಸಂಘಟನೆಯ ಜಾಗೃತಿ ಮೂಡಿಸುವ ಮೂಲಕ ಯುವಕರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಬೇಕಾಗಿದೆ ಎಂದರು.
ಸ್ಲಂ ಯುವ ಸಮಿತಿಯ ಅಧ್ಯಕ್ಷ ಶರೀಫ ಬಿಳೆಯಲಿ ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಯಲ್ಲಪ್ಪ ರಾಮಗಿರಿ, ಜಿಲ್ಲಾ ಸಮಿತಿ ಅಧ್ಯಕ್ಷ ಅಶೋಕ ಮ್ಯಾಗೇರಿ, ಉಪಾಧ್ಯಕ್ಷ ಅಶೋಕ ಕುಡತಿನ್ನಿ, ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ, ಮಹಿಳಾ ಸಮಿತಿ ಕಾರ್ಯದರ್ಶಿ ತಿಪ್ಪವ್ವ ಮಯಟಗಾರ, ಅನಿಲ ಕಾಳೆ, ಪರಶು ಕಾಳೆ, ರಾಜು ಕಣಗಿನಹಾಳ, ಬಸವರಾಜ ಬಿಳೆಯಲಿ, ಬಸವರಾಜ ಸಾಲಿ, ಸಲೀಮ ಬಳ್ಳಾರಿ, ಸಂತೋಷ ಬಣಕಾರ ಇದ್ದರು. ಇದೇ ಸಂದರ್ಭದಲ್ಲಿ ಶಾಖೆ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಶಾಖಾ ಸಮಿತಿ ಅಧ್ಯಕ್ಷರಾಗಿ ಉಮೇಶ ಗೋಸಾವಿ, ಉಪಾಧ್ಯಕ್ಷರಾಗಿ ಹುಸೇಸಾಬ ಮುಜಾವರ, ಕಾರ್ಯದರ್ಶಿಯಾಗಿ ಮೌಲಾಸಾಬ ಮುಜಾವರ, ಸಹ ಕಾರ್ಯದರ್ಶಿಯಾಗಿ ರಾಜೇಶ ಗೋಸಾವಿ ಮತ್ತು 12 ಜನರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಳಿಸಲಾಯಿತು.
--
ಬೈಕ್ ಅಪಘಾತ: ಸಾವು
ಗದಗ: ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದ ಬಳಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಮಹಿಳೆಯೋರ್ವಳು ಸಾವನ್ನಪ್ಪಿದ ಘಟನೆ ಮಂಗಳವಾರ ಸಂಜೆ ನಡೆದಿದೆ. ಮೃತ ಮಹಿಳೆಯನ್ನು ಹಜರತ್ಬಿ ಬೋದ್ಲೆಖಾನ್ (55) ಎಂದು ಗುರುತಿಸಲಾಗಿದೆ. ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಚಕ್ರಕ್ಕೆ ಸೀರೆ ಸಿಲುಕಿದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

