ಗದಗ

ನಾಳೆಯಿಂದ ಯುವಜನೋತ್ಸವ

Published On :

ನರೇಗಲ್ಲ: ಸ್ಥಳೀಯ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಸೆ. 27, 28 ರಂದು ಕರ್ನಾಟಕ ವಿಶ್ವವಿದ್ಯಾಲಯದ ಗದಗ ಜಿಲ್ಲಾ ವಲಯಮಟ್ಟದ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ಸಜ್ಜನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸೆ. 27ರ ಬೆಳಗ್ಗೆ 9ಕ್ಕೆ ಕಾರ್ಯಕ್ರಮದ ಉದ್ಘಾಟನೆ ಜರುಗಲಿದೆ. ಸಾನ್ನಿಧ್ಯವನ್ನು ಸಂಸ್ಥೆಯ ಅಧ್ಯಕ್ಷ ಅಭಿನವ ಅನ್ನದಾನ ಶ್ರೀಗಳು ವಹಿಸುವರು. ಡಾ. ಅರವಿಂದ ಸಜ್ಜನ ಅಧ್ಯಕ್ಷತೆ ವಹಿಸುವರು. ಡಾ. ಕೆ.ಬಿ. ದನ್ನೂರ ಉದ್ಘಾಟಿಸುವರು. ಅತಿಥಿಗಳಾಗಿ ಕವಿವಿ ಡಾ. ಜೆ.ಎಂ. ನಾಗಯ್ಯ ಪಾಲ್ಗೊಳ್ಳುವರು. ಸೆ. 28ರಂದು ಮುಕ್ತಾಯ ಸಮಾರಂಭ ಜರುಗಲಿದ್ದು, ಅಭಿನವ ಅನ್ನದಾನ ಶ್ರೀಗಳು ಸಾನ್ನಿಧ್ಯ ವಹಿಸುವರು. ಅಧ್ಯಕ್ಷತೆಯನ್ನು ಪ್ರಾ. ಡಾ. ಅರವಿಂದ ಸಜ್ಜನ ವಹಿಸುವರು. ಮಂಜುನಾಥ ಅಬ್ಬಿಗೇರಿ ಆಗಮಿಸುವರು. ಸಿ.ಜಿ. ಹುಡೇದಗಡ್ಡಿ ಪಾರಿತೋಷಕ ವಿತರಿಸುವರು. ಎಸ್.ಎಸ್. ಕಂಠಿ, ಸಿ.ಜಿ. ಹುಡೇದಗಡ್ಡಿ, ಎಂ.ಎಸ್. ಕುಲಕರ್ಣಿ, ಡಾ. ಎ.ಬಿ. ಮಂಗಳೂರ ಉಪಸ್ಥಿತರಿದ್ದರು.
ಇಂದು ಪುಣ್ಯಸ್ಮರಣೆ
ಹೊಳೆಆಲೂರು: ಸ್ಥಳೀಯ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ದಿ. ಸಂಗನಗೌಡ್ರ ಪಾಟೀಲ ಅವರ 25ನೇ ಪುಣ್ಯಸ್ಮರಣೆ ಸೆ. 26ರಂದು ಬೆಳಗ್ಗೆ 11.30ಕ್ಕೆ ಸಂಸ್ಥೆಯ ರಜತ ಮಹೋತ್ಸವ ಭವನದಲ್ಲಿ ಜರುಗಲಿದೆ. ಸದಾಶಿವ ಮಹಾಂತ ಶಿವಾಚಾರ್ಯ ಸಾನ್ನಿಧ್ಯ ವಹಿಸುವರು. ಸಂಸ್ಥೆಯ ಅಧ್ಯಕ್ಷ ಚನ್ನಪ್ಪ ಬೀರನೂರ ಅಧ್ಯಕ್ಷತೆ ವಹಿಸುವರು. ಅತಿಥಿಯಾಗಿ ನಾಗರಾಜ ಹುಣಶಿಕಟ್ಟಿ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಶ್ರೀದೇವಿ ಅಂಗಡಿ ನಿಧನ
ಮುಂಡರಗಿ: ಸ್ಥಳೀಯ ವಿವೇಕ ಜಾಗೃತ ಬಳಗದ ಕಾರ್ಯದರ್ಶಿ ಡಾ. ಶ್ರೀದೇವಿ ಅಂಗಡಿ (29) ಬುಧವಾರ ನಿಧನರಾದರು. ಮೃತರಿಗೆ ತಂದೆ-ತಾಯಿ, ಅಕ್ಕ, ತಮ್ಮ, ಅಪಾರ ಬಂಧು ಬಳಗ ಇದ್ದರು.ಡಾ. ಅನ್ನದಾನೀಶ್ವರ ಶ್ರೀ, ಶಾಸಕ ರಾಮಕೃಷ್ಣ ದೊಡ್ಡಮನಿ, ಕರಬಸಪ್ಪ ಹಂಚಿನಾಳ, ಗುಂಡಪ್ಪ ಅಂಗಡಿ, ಎ.ಕೆ. ಬೆಲ್ಲದ, ಶಿವಲಿಂಗಪ್ಪ ಡಂಬಳ, ಈಶ್ವರಪ್ಪ ಹಂಚಿನಾಳ, ಶಿವಮೂರ್ತಿಸ್ವಾಮಿ ಅಳವಂಡಿ, ವೈ.ಎನ್. ಗೌಡರ, ಧ್ರುವಕುಮಾರ ಹೊಸಮನಿ, ಎಸ್.ಬಿ. ಹಿರೇಮಠ, ಕೊಟ್ರೇಶ ಅಂಗಡಿ, ಬಿ.ಎಸ್. ಹಿರೇಗೌಡ್ರ, ಡಾ. ಪಿ.ಬಿ. ಹಿರೇಗೌಡ್ರ, ಡಾ. ಅನ್ನದಾನಿ ಮೇಟಿ, ಕಾಂತರಾಜ ಹಿರೇಮಠ, ಸಿ.ಎಸ್. ಅರಸನಾಳ, ಎನ್.ಎಫ್. ಅಕ್ಕೂರ, ಎ.ವಿ. ಹಳ್ಳಿಕೇರಿ, ಎಸ್.ಎಂ. ಹೊಸಮಠ ಸಂತಾಪ ಸೂಚಿಸಿದ್ದಾರೆ.
ಶಿವಮ್ಮ ಲಿಂಗಶೆಟ್ಟಿ ನಿಧನ
ರೋಣ: ಪಟ್ಟಣದ ಹವಳಪ್ಪನವರ ಓಣಿಯ ನಿವಾಸಿ ಶಿವಮ್ಮ ಲಿಂಗಶೆಟ್ಟಿ (84) ಮಂಗಳವಾರ ರಾತ್ರಿ ನಿಧನರಾದರು. ಮೃತರಿಗೆ ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗ ಇದ್ದರು. ನರಗುಂದ ತಾಲೂಕಿನ ಬೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀ, ನಿಂಬಣ್ಣ ಗಾಣಿಗೇರ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.