ಪ್ರತಿಭಟನೆ ಹಿಂದಕ್ಕೆ
ಗಜೇಂದ್ರಗಡ: ಟ್ರ್ಯಾಕ್ಟರ್, ಟೆಂಪೊ, ಟಂಟಂ ವಾಹನ ಚಾಲಕರು, ಮಾಲೀಕರು ಪೊಲೀಸ್ ದೌರ್ಜನ್ಯ ಖಂಡಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ರ್ಯಾಲಿಯನ್ನು ಸ್ಥಳೀಯ ಪಿಎಸ್‌ಐ ಎಚ್.ಆರ್.ನಡಗಡ್ಡಿ ಮಂಗಳವಾರ ನಡೆಸಿದ ಶಾಂತಿಸಭೆ ಫಲವಾಗಿ ಪ್ರತಿಭಟನೆ ಹಿಂಪಡೆಯಲಾಗಿದೆ. ಈ ಹಿಂದೆ ಇದ್ದ ಅಧಿಕಾರಿ ಎನ್. ವೀರಾರೆಡ್ಡಿಯವರು ಚಾಲಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ರು. 1000-2000 ಕೊಡಬೇಕು. ನಿರಾಕರಿಸಿದರೆ ಮನಬಂದಂತೆ ಥಳಿಸಿದ್ದನ್ನು ಖಂಡಿಸಿ ಟ್ರ್ಯಾಕ್ಟರ್ ಚಾಲಕರು ಪ್ರತಿಭಟನೆಗೆ ಮುಂದಾಗಿದ್ದರು. ಆದರೆ, ನೂತನ ಪಿಎಸ್‌ಐ ಅವರೊಂದಿಗೆ ಶಾಂತಿ ಸಭೆ ನಡೆಸಿದ ಹಿನ್ನೆಲೆಯಲ್ಲಿ ಮಾತುಕತೆ ಫಲಪ್ರದವಾಗಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು. ಚಂಬಣ್ಣ ಚವಡಿ, ಎಚ್.ಎಸ್. ಸೋಂಪುರ, ಬಸವರಾಜ ಬಂಕದ, ಪ್ರಭು ಚವಡಿ, ಯಲ್ಲಪ್ಪ ಬಂಕದ, ಉಮೇಶ ರಾಠೋಡ, ಶಿವಪ್ಪ ಚಲವಾದಿ ಮುಂತಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

