ಗದಗ

ಸಂಗನಗೌಡ್ರ ಪಾಟೀಲ ಪುಣ್ಯಸ್ಮರಣೆ

Published On :

ಹೊಳೆಆಲೂರು: ಸ್ಥಳೀಯ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿ ಸಂಸ್ಥಾಪಕ ದಿ. ಸಂಗನಗೌಡ್ರ ಪಾಟೀಲ ಅವರ 25ನೇ ಪುಣ್ಯಸ್ಮರಣೆಯನ್ನು ಗುರುವಾರ ಸಂಸ್ಥೆಯ ರಜತಮಹೋತ್ಸವ ಭವನದಲ್ಲಿ ಸದಾಶಿವ ಮಹಾಂತ ಶಿವಾಚಾರ್ಯ ಹಿರೇಮಠ ಬೇನಹಾಳರ ಸಾನ್ನಿಧ್ಯದಲ್ಲಿ ನೆರವೇರಿಸಲಾಯಿತು.
ಪ್ರೊ. ಹುಣಶೀಕಟ್ಟಿ ಮಾತನಾಡಿ, ಸಂಗನಗೌಡರ ವ್ಯಕ್ತಿತ್ವ ಮತ್ತು ಅವರ ಶಿಕ್ಷಣ ಪ್ರೇಮದ ಕುರಿತು ಹೇಳಿದರು. ಕೋಳೇರಿಯವರು 1942 ರಲ್ಲೇ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಹೊಳೆಆಲೂರಲ್ಲಿ ಶೈಕ್ಷಣಕ ಕ್ರಾಂತಿಗೆ ಕಾರಣರಾದ ಬಗ್ಗೆ ಅಂದಿನ ದಿನಮಾನಗಳನ್ನು ಸ್ಮರಿಸಿಕೊಂಡರು. ಸಂಸ್ಥೆಯ ಉಪಾಧ್ಯಕ್ಷ ಎಂ.ಬಿ. ಕೋಳೇರಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪ್ರೊ. ನಾಗರಾಜ ಹುಣಶೀಕಟ್ಟಿ, ಸಂಗೀತ ಶಿಕ್ಷಕ ಎಚ್.ವಿ. ಮಳಲಿ, ಪ್ರೊ. ಎಚ್.ಎನ್. ಕಾಳೆ, ಕಾರ್ಯದರ್ಶಿ ಡಿ.ಎಸ್. ಶೆಲ್ಲಿಕೇರಿ, ಎಂ.ಎನ್. ತೇಜಿಗೌಡ್ರ ಹಾಗೂ ಸಂಗನಗೌಡರ ಕುಟುಂಬದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ಸಂಸ್ಥೆಯ ಆವರಣದಲ್ಲಿರುವ ಸಂಗನಗೌಡ್ರ ಶಿಲಾಮೂರ್ತಿಗೆ ಶ್ರೀಗಳ ಸಮ್ಮುಖದಲ್ಲಿ ಮಾಲಾರ್ಪಣೆ ಮಾಡಲಾಯಿತು. ಪ್ರೊ. ವಿ.ಬಿ. ಉಗಲಾಟ ಸ್ವಾಗತಿಸಿದರು. ಎಚ್.ಎನ್. ಕಾಳೆ ನಿರೂಪಿಸಿದರು. ಜಿ.ಸಿ. ಮಹಾಕಾಶಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.