ಚಿತ್ರಕಲಾ ಸ್ಪರ್ಧೆ
ಗದಗ: 2013-14ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆಯನ್ನು ಸೆ. 30ರಂದು ಬೆಳಗ್ಗೆ 10.30ಕ್ಕೆ ನಗರದ ವಿ.ಡಿ.ಎಸ್. ಜಿ.ಎಸ್. ಕಲಾ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದ್ದು, ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ಭಾಗವಹಿಸಲು ಉಪನಿರ್ದೇಶಕರ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಗದಗ ಇವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಇಂದು ಶಂಕುಸ್ಥಾಪನೆ
ಗದಗ: ಜಿಪಂ, ತಾಪಂ, ಸರ್ವ ಶಿಕ್ಷಣ ಅಭಿಯಾನ, ಗ್ರಾಪಂ ಹೊಂಬಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಸುವರ್ಣ ಗ್ರಾಮ ಯೋಜನೆಯಡಿ ಕಟ್ಟುವ ಹೊಂಬಳ ಗ್ರಾಪಂ ಹೊಸ ಕಟ್ಟಡದ ಶಂಕುಸ್ಥಾಪನೆ (ಭೂಮಿ ಪೂಜೆ), ಸಮಾಜ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳ್ಳುವ ಪರಿಶಿಷ್ಟ ಪಂಗಡದ ಕಾಲೋನಿಯಲ್ಲಿ ಸಿ.ಸಿ. ರೋಡ್ ಭೂಮಿ ಪೂಜೆಯನ್ನು, ಸರ್ವ ಶಿಕ್ಷಣ ಅಭಿಯಾನದಡಿ ಕಟ್ಟಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ ಹೊಸ ಕಟ್ಟಡದ ಉದ್ಘಾಟನೆ, ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ 8ನೇ ತರಗತಿಯ ಹೊಸ ಕಟ್ಟಡದ ಉದ್ಘಾಟನೆ ಹಾಗೂ ಕುಡಿವ ನೀರಿನ ಕೆರೆಯ ಅಭಿವೃದ್ಧಿಗೆ ಚಾಲನೆ ಮತ್ತು ವೀಕ್ಷಣೆ ಕಾರ್ಯಕ್ರಮವನ್ನು 28ರಂದು ಮಧ್ಯಾಹ್ನ 1 ಗಂಟೆಗೆ ಹೊಂಬಳದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಉದ್ಘಾಟಿಸುವರು. ಶಾಸಕ ಬಿ.ಆರ್.ಯಾವಗಲ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಸದರು, ಶಾಸಕರು, ಜಿಪಂ ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು, ತಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರು, ಜಿಪಂ ಸಿಇಓ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಕುಷ್ಟಗಿ ಚಾಳ, ಮಾನ್ವಿ ಚಾಳ, ಗುಳರಡ್ಡಿ ವಕೀಲರ ಲೈನ್, ಮಸೂತಿ ಲೈನ್, ರೈಡರ ಲೈನ್, ನವೋದಯ ಆಫೀಸ್ ಲೈನ್, ಹವಳದ ಲೈನ್, ಹೆಲ್ತಕ್ಯಾಂಪ್ ಶಿರಹಟ್ಟಿ ಲೈನ್, ಆಯುರ್ವೇದಿಕ ಲೈನ್, ನರ್ಲೆಕರ ಲೈನ್, ಗಾಂಧಿ ನಗರ, ಸಬ್ಜೈಲ್ ಲೈನ್, ಮುಟಗಾರ ಲೈನ್, ಆಸಂಗಿ ಲೈನ್, ಕಟ್ಟಿಮನಿ ಲೈನ್, ಹನುಮಂತದೇವರ ಲೈನ್, ಶಿಂದಗಿ ಲೈನ್, ಕಟ್ನಳಿ ಲೈನ್, ಹರಣಶಿಕಾರಿ ಲೈನ್, ಹಳ್ಳದ ಲೈನ್, ಕಾನ್ವೆಂಟ್ ರೋಡ್, ಬಟ್ಕೂಳ ಚಾಳ, ಶಾಲೆ ಲೈನ್, ಎಂಪ್ಲಾಯಿಮೆಂಟ್ ರೋಡ್ಯಿಂದ ಮಿಷನ್ ಕಾಂಪೌಂಡ್ 1, 2 ಭಾಗದ ವರಗೆ, ಒಕ್ಕಲಗೇರಿ ಲೈನ್, ಕುಲಕರ್ಣಿ ಗಲ್ಲಿ, ಕಿಲ್ಲಾ, ಗಾರ್ಗಿಪೇಟೆ, ರೊಟ್ಟಿ ಲೈನ್, ಅಂಬಾಭವಾನಿಗುಡಿ ಲೈನ್, ಸರ್ಕಲ್ ಲೈನ್, ಜೂಜಗಾರ ಲೈನ್, ರೇವಿಂಗ್ಟನ್ ರೋಡ್, ವಿದ್ಯಾರಣ್ಯರೋಡ್ನ ಭಾಗ 1, ವಿಜ್ಜು ಕಬಾಡಿ ರೋಡ್ನಿಂದ ಹೊಸಪೇಟ ಚೌಕ್ ವರಗೆ, ಜವಳಹಳ್ಳ ಕೆಲವು ಭಾಗಗಳಲ್ಲಿ ಶನಿವಾರ ನೀರು ಪೂರೈಕೆ ಮಾಡಲಾಗುವುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

