ಗದಗ

ಪಡಿತರ ವಿತರಣೆಯಲ್ಲಿ ತಾರತಮ್ಯ: ದೂರು

Published On :

ಕನ್ನಡಪ್ರಭ ವಾರ್ತೆ, ರೋಣ, ಸೆ. 29
ಪಟ್ಟಣದ ನ್ಯಾಯಬೆಲೆ ಅಂಗಡಿ ಸಂಖ್ಯೆ 79 ಇದರ ವಿತರಕರು ದಲಿತರಿಗೆ, ಕೂಲಿ ಕಾರ್ಮಿಕರಿಗೆ, ಬಡವರಿಗೆ ಪಡಿತರ ಆಹಾರ ಧಾನ್ಯಗಳನ್ನು ಹಂಚುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಶನಿವಾರ ತಾಪಂ ಸಭಾಭನದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಆಗಮಿಸಿದ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳಿಗೆ ತಾಲೂಕು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ದೂರು ಸಲ್ಲಿಸಿದರು.  
2009-2010ರಲ್ಲಿ ಪಡೆದ ಪಡಿತರ ಚೀಟಿಗಳು ನವೀಕರಣವಾಗಲು ಬಯೋವುಟ್ರಿಕ್ ಕಡ್ಡಾಯವಿದ್ದರಿಂದ ಕಾರ್ಡ್‌ದಾರರು ಬಯೋವುಟ್ರಿಕ್ ನೀಡಿದ್ದಾರೆ. ಆದರೂ ರೇಷನ್ ವಿತರಕರು ನೀವು ಬಯೋವುಟ್ರಿಕ್ ನೀಡಿರುವುದಿಲ್ಲ. ಅದಕ್ಕೆ ರೇಷನ್ ಕೊಡಲಾಗುತ್ತಿಲ್ಲ ಎಂದು ನೆಪ ಹೇಳಿ ರೇಷನ್ ನೀಡುತ್ತಿಲ್ಲ. ದಲಿತರಿಗೆ ಈ ರೀತಿ ಅನ್ಯಾಯವಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನ್ಯಾಯಬೆಲೆ ಅಂಗಡಿ ಸಂಖ್ಯೆ 79 ಇದರ ವಿತರಕರ ಮೇಲೆ ಸೂಕ್ತ ಕ್ರ ಜರುಗಿಸಬೇಕು ಎಂದು ಸಮಿತಿ ಪದಾಧಿಕಾರಿಗಳಾದ ಪ್ರಕಾಶ ಹೊಸಳ್ಳಿ, ಮಲ್ಲು ಮಾದರ, ಮಜುರಪ್ಪ ಶಾಂತಗೇರಿ, ಮೌನೇಸ ಹಾದಿಮನಿ ಆಗ್ರಹಿಸಿದರು.
ತಾಲೂಕಿನ ಕುರಹಟ್ಟಿ ಗ್ರಾಪಂನಲ್ಲಿ 2009-2012 ರಲ್ಲಿನ ಆಶ್ರಯ ಮನೆ ಮತ್ತು ವಸತಿ ಯೋಜನೆಯಲ್ಲಿ ಅವ್ಯವಹಾರ ನಡೆದಿದ್ದು, ಇದರಿಂದ ಅರ್ಹ ಫಲಾನುಭವಿಗಳಿಗೆ ತೀವ್ರ ಅನ್ಯಾಯವಾಗಿದೆ. ಇದಕ್ಕೆ ಸಂಬಂಧಿಸಿದ ಗ್ರಾಪಂ ಅಧಿಕಾರಿ ಮತ್ತು ತಾಪಂ ಇಒ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕುರಹಟ್ಟಿ ಗ್ರಾಮದ ಮಜುರಪ್ಪ ಶಾಂತಗೇರಿ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದರು.  ಇವುಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಲೋಕಾಯುಕ್ತ ಅಧಿಕಾರಿ ಸಂಗನಗೌಡ್ರ ತಿಳಿಸಿದರು. ಸಿಬ್ಬಂದಿ ನಾರಾಯಣ ಚೂರಿ, ನಾರಾಯಣ ತಾಯಣ್ಣವರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.