ಮನುಕುಲದ ಉನ್ನತಿಗೆ ಯೋಗ ಅವಶ್ಯ
ಗದಗ: ಸಂಸ್ಕಾರ, ಸಂಘಟನೆ ಹಾಗೂ ಸೇವಾ ಮನೋಭಾವದ ಮೂಲಕ ಯೋಗಬದುಕು ಕಟ್ಟಲು ಶ್ರಮಿಸುತ್ತಿರುವ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಾರ್ಯ ಪ್ರಶಂಸನೀಯವಾಗಿದ್ದು, ಮನುಕುಲದ ಉನ್ನತಿಗೆ ಯೋಗದ ಅತ್ಯವಶ್ಯಕತೆಯನ್ನು ಸಮಾಜ ಮನಗಾಣಬೇಕಾಗಿದೆ ಎಂದು ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಹೇಳಿದರು.
ಅವರು ಭಾನುವಾರ ನಗರದ ಜ. ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಗದಗ ಶಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಪ್ರಾಥಮಿಕ ಪ್ರ-ಶಿಕ್ಷಣ ಶಿಬಿರ-2013 ರ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಾನವನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಯೋಗದ ಪಾತ್ರ ಮಹತ್ವವಾಗಿದ್ದು, ಯೋಗದಿಂದ ಮಾನಸಿಕ ನೆಮ್ಮದಿ ಸಾಧ್ಯವಾಗಲಿದೆ. ಭಾರತೀಯ ಇತಿಹಾಸದಲ್ಲಿ ಪುರಾತನ ಕಾಲದಿಂದಲೂ ತನ್ನದೇಯಾದ ಮಹತ್ವ ಹೊಂದಿದ ಯೋಗ ಬದುಕು ನಾಡಿನ ಸಮೃದ್ಧತೆಗೆ ಮತ್ತು ಭಾರತೀಯರ ಶ್ರೇಷ್ಠತೆಗೆ ಕಾರಣವಾಗಲಿದೆ ಎಂದರು.
ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪ್ರಾಂತ ಸಂಘಟನಾ ಕಾರ್ಯದರ್ಶಿ ಕೆ.ನಾಗರಾಜ ಮಾತನಾಡಿ, ದೇಶದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಮಹಿಳಾ ದೌರ್ಜನ್ಯಗಳಿಂದ ಮಾನವನಲ್ಲಿ ಪಶುತ್ವ ಗುಣಗಳು ಅನಾವರಣ ಹೊರ ಹೊಮ್ಮುತ್ತಿದೆ. ನಿರಂತರ ಯೋಗ ಅಭ್ಯಾಸದಿಂದ ಭಗವಂತನ ಸಾಕ್ಷಾತ್ಕಾರವಾಗಲಿದ್ದು, ಈ ಹಿನ್ನೆಲೆಯಲ್ಲಿ ಸಮಾಜದಲ್ಲಿ ಮತ್ತೆ ಮನುಷ್ಯತ್ವದ ಮರುಹುಟ್ಟಿಗಾಗಿ ಯೋಗವನ್ನು ಬಿತ್ತರಿಸುವ ಕಾರ್ಯ ಸಂಘಟನೆಗಳಿಂದ ನಿರಂತರವಾಗಿ ಜರುಗಬೇಕಿದೆ. ಶಿಬಿರದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು ಯೋಗ ಮಹತ್ವ ಸಾರುವ ಕಾರ್ಯಕ್ಕೆ ಪ್ರಮುಖ ಆದ್ಯತೆ ನೀಡಬೇಕಿದೆ ಎಂದರು.
4 ದಿನಗಳಿಂದ ಜರುಗಿದ ಶಿಬಿರದಲ್ಲಿ ಬೆಂಗಳೂರು, ಮಂಗಳೂರು, ರಾಯಚೂರು, ಶಕ್ತಿನಗರ, ಹುಬ್ಬಳ್ಳಿ ಮುಂತಾದ ಪ್ರದೇಶಗಳಿಂದ ಆಗಮಿಸಿದ 80ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತ ಖಟವಟೆ, ನಗರಸಭೆ ಸದಸ್ಯ ಎಲ್.ಡಿ. ಚಂದಾವರಿ, ಗದಗ-ಬೆಟಗೇರಿ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷೆ ಡಾ. ಮಲ್ಲಮ್ಮ ಗೊಜನೂರ, ಡಾ. ಅನಂತ ಶಿವಪುರ, ಚಂದ್ರು ಬಾಳಿಹಳ್ಳಿಮಠ, ಮೋಹನ ಕಬಾಡಿ, ರವಿ ಪೂಜಾರ, ಕೆ.ಆರ್. ಗುಡಿಹಾಳ, ಶಿವಯ್ಯ ಹಿರೇಮಠ ಮುಂತಾದವರು ಪಾಲ್ಗೊಂಡಿದ್ದರು. ಗಿರಿಜಾ ಮುತ್ತಿನಪೆಂಡಿಮಠ ಪ್ರಾರ್ಥಿಸಿದರು. ಗೌರಕ್ಕ ಪಾಟೀಲ ಸ್ವಾಗತಿಸಿದರು. ಸುದರ್ಶನ ಹಾನಗಲ್ಲ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

