ಗದಗ

ಸುದ್ದಿ ಸಂಕ್ಷೇಪ

Published On :

ನರಗುಂದ ಪುರಸಭೆ ಅಪಹೃತ ಸದಸ್ಯರು ಮಂಗಳೂರು ಹೋಟೆಲಲ್ಲಿ ಪತ್ತೆ
ಮಂಗಳೂರು: ಗದಗ ಜಿಲ್ಲೆ ನರಗುಂದ ಪುರಸಭೆಯ ಅಧ್ಯಕ್ಷ ಚುನಾವಣೆ ರಾಜಕೀಯ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಇಬ್ಬರು ಸದಸ್ಯರನ್ನು ಕಾಂಗ್ರೆಸ್ ಸದಸ್ಯರು ಅಪಹರಿಸಿ ಮಂಗಳೂರಿಗೆ ತಂದಿದ್ದು, ನರಗುಂದ ಪೊಲೀಸರು ಅವರನ್ನು ಭಾನುವಾರ ವಾಪಸ್ ಕರೆದೊಯ್ದಿದ್ದಾರೆ. ನರಗುಂದ ಪುರಸಭೆಯಲ್ಲಿ ಬಿಜೆಪಿ 13 ಸದಸ್ಯರನ್ನು ಹೊಂದಿದ್ದು, ಕಾಂಗ್ರೆಸ್‌ಗೆ ಬಹುಮತ ಇರಲಿಲ್ಲ. ಆದ್ದರಿಂದ ಬಿಜೆಪಿಯ ಶಾಂತವ್ವ ಹಾಗೂ ಚಂದ್ರಶೇಖರ್ ಎಂಬ ಸದಸ್ಯರನ್ನು ಅಪಹರಿಸಿ ತಂದ ಕಾಂಗ್ರೆಸ್ ಮುಖಂಡರು ಮಂಗಳೂರಿನ ಪಂಚಮಹಲ್ ಹೋಟೆಲ್‌ನಲ್ಲಿ ಇರಿಸಿದ್ದರು. ಈ ಕುರಿತು ನರಗುಂದ ಪೊಲೀಸರಿಗೆ ಬಿಜೆಪಿ ಸದಸ್ಯರು ದೂರು ನೀಡಿದ್ದರು.
ಅ. 5ರಿಂದ ದಸರಾ ಮಹೋತ್ಸವ
ಗದಗ:  ನಗರದ ಮುಳಗುಂದ ನಾಕಾದಲ್ಲಿರುವ ಅಡವೀಂದ್ರ ಶ್ರೀಗಳ ಮಠದ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ಅ. 5 ರಿಂದ 14ರ ವರೆಗೆ 33ನೇ ವರ್ಷದ ದಸರಾ ಮಹೋತ್ಸವ ಕಾರ್ಯಕ್ರಮಗಳು ಜರುಗಲಿವೆ. ಅ. 5ರಂದು ಸಂಜೆ 7ಕ್ಕೆ ಪ್ರಾರಂಭೋತ್ಸವ ಜರುಗಲಿದ್ದು, ಕುಷ್ಟಗಿಯ ಮುದೇನೂರಿನ ಅಭಿನವ ಅನ್ನದಾನ ಚಂದ್ರಶೇಖರ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಮಹೇಶ್ವರಸ್ವಾಮಿ ಹೊಸಳ್ಳಿಮಠ ನೇತೃತ್ವ ವಹಿಸುವರು. ಲಲಿತಾ ಸಂಕೇಶ್ವರ ಉದ್ಘಾಟಿಸುವರು. ನಂತರ ಗುರು ಶ್ರೀರಕ್ಷೆ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಸೆ. 5ರಿಂದ 14ರ ವರೆಗೆ ಜರುಗುವ ದಸರಾ ಮಹೋತ್ಸವದಲ್ಲಿ ದಸರಾ ಮಹೋತ್ಸವದ ಗೌರವಾಧ್ಯಕ್ಷ ವಿ.ಆರ್. ಬೇಲೂರ, ಶಿವಾನುಭವ ಗೋಷ್ಠಿಯ ಕಾರ್ಯಾಧ್ಯಕ್ಷ ಬಿ.ಬಿ. ಹೂಗಾರ, ಬಸವರಾಜ ಶಾಬಾದಿಮಠ, ಬಿ.ಎನ್.ದಾಯಮ್ಮನವರ, ಬೆಟದಯ್ಯ ಹಿರೇಮಠ, ಅನ್ನದಾನಿ ಹಿರೇಮಠ, ಕೆ.ಎಚ್. ಬೇಲೂರ, ಗಂಗಣ್ಣ ಕೋಟಿ, ಬಿ.ಎಂ. ಬಿಳೆಯಲಿ, ಮೋಹನ ಗ್ವಾರಿ, ಜಿ.ಎಂ. ಯಾಮನಶೆಟ್ಟಿ, ಎ.ಎಂ. ವಿರಕ್ತಮಠ, ಡಾ. ರಾಜೇಂದ್ರ ಗಡಾದ, ಎಚ್.ವಿ. ಹುಲ್ಲತ್ತಿ, ಬಸವರಾಜ ಸಜ್ಜನರ, ಆರ್.ಸಿ. ಅಗಸಿಮನಿ, ಇಕ್ಬಾಲ್ ಹಣಗಿ, ಡಾ. ಎಚ್.ಎಸ್. ಹೊಳೆಯಣ್ಣವರ, ಶರಣಯ್ಯ ಶಾಸ್ತ್ರೀ, ಮಲ್ಲಿಕಾರ್ಜುನ ಸವದತ್ತಿಮಠ, ಕವಿತಾ ದಂಡಿನ, ಬಿ.ಬಿ. ಅಂಗಡಿ, ಆರ್.ಟಿ. ಸಾಲಿಮಠ, ಅಂದಾನಪ್ಪ ವಿಭೂತಿ, ಎಂ.ಎಂ. ಜೋಗಿನ, ರವಿ ಪೂಜಾರ, ಶಶಿಧರ ಹಿರೇವಡೆಯರ, ದತ್ತಪ್ರಸನ್ನ ಪಾಟೀಲ, ಉಳವಪ್ಪ ಹೊಂಬಳ, ವಿ.ಎಂ. ಕೆಂಬಾವಿ, ಅಡಿವೆಪ್ಪ ಸವದತ್ತಿಮಠ  ಪಾಲ್ಗೊಳ್ಳಲಿದ್ದು,   ಸಾರ್ವಜನಿಕರು  ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಶ್ರೀಮಠದ ಪ್ರಕಟಣೆ ತಿಳಿಸಿದೆ.
ವಿಭಾಗ ಮಟ್ಟಕ್ಕೆ ಆಯ್ಕೆ
ನರಗುಂದ  ಚಿಕ್ಕನರಗುಂದ ಗ್ರಾಮದ ಡಿ.ಎಸ್. ಕೆಂಚನಗೌಡ್ರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು 2013-14ನೇ ಸಾಲಿನ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ವಾಲಿಬಾಲ್ ತಂಡ ಪ್ರಥಮ ಸ್ಥಾನ ಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.
ಗ್ರಾಮೀಣ ಪ್ರತಿಭೆಗೆ ಸೂಕ್ತ ತರಬೇತಿ ಅಗತ್ಯ: ಎಚ್ಕೆ
ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶದಲ್ಲಿ ನಿಜವಾದ ಪ್ರತಿಭೆ ಅಡಗಿದ್ದು, ಅದಕ್ಕೆ ಸೂಕ್ತವಾದ ತರಬೇತಿ ಸಿಕ್ಕಲ್ಲಿ ದೇಶವೇ ಗಮನಿಸುವಂತಹ ಸಾಧನೆ ಮಾಡಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ, ಪಂಚಾಯತರಾಜ್ ಸಚಿವ ಎಚ್.ಕೆ.ಪಾಟೀಲ ಹೇಳಿದರು. ಅವರು ಈಚೆಗೆ ಸಮೀಪದ ಗೊಜನೂರಿನ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮಾತನಾಡಿದರು. ಪಿಕಾರ್ಡ್ ಬ್ಯಾಂಕ್‌ನ ಅಧ್ಯಕ್ಷ ಎಸ್.ಪಿ. ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷ ಶಿವನಗೌಡ ಪಾಟೀಲ, ನಾಗಪ್ಪ ವಡಕಣ್ಣವರ ಗ್ರಾಪಂ ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಕೆ.ಪಿ.ಸಿ.ಸಿ. ಸದಸ್ಯ ವಾಸಣ್ಣ ಕುರಡಗಿ, ತಾಪಂ ಸದಸ್ಯ ಚನ್ನಪ್ಪ ಜಗಲಿ, ಭೀಮಸಿಂಗ್ ರಾಠೋಡ, ಶಿವಣ್ಣ ನೆಲವಗಿ, ಡಾ.ವೈ.ಎಫ್. ಹಂಜಿ, ವಿಲಾಸರಾವ್ ಕುಲಕರ್ಣಿ, ಪರಮೇಶ ಲಮಾಣಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.