ಮೋದಿಯಿಂದ ದೇಶದ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ, ರೋಣ, ಏ. 1
ದೇಶದ ಸುಭದ್ರತೆ, ಅಭಿವೃದ್ಧಿ ನರೇಂದ್ರ ಮೋದಿಯವರಿಂದ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಅವರು ಭಾನುವಾರ ರಾತ್ರಿ ಪಟ್ಟಣದ ಹೊಸ ಸಂತೆ ಬಜಾರ ಆವರಣದಲ್ಲಿ ಹಮ್ಮಿಕೊಂಡ ಭಾರತ ಗೆಲ್ಲಿಸಿ ಬೃಹತ್ ಸಾರ್ವಜನಿಕರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಹಲವಾರು ಅಭಿವೃದ್ಧಿಪರ ಕಾರ್ಯಕ್ರಮಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಏನು ಮಾಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಜನತೆಯ ಮುಂದೆ ನಿಲ್ಲು ನೈತಿಕತೆ ಕಳೆದುಕೊಂಡಿದ್ದಾರೆ. ಇಂತಹವರಿಗೆ ಜನತೆಯೇ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಹಾವೇರಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಮಾತನಾಡಿ, ಕೇಂದ್ರದಲ್ಲಿ ಕಾಂಗ್ರೆಸ್ ರು. 5.5 ಲಕ್ಷ ಕೋಟಿ ಅವ್ಯವಹಾರ ಮಾಡಿದೆ ಎಂಬುದರ ಕುರಿತು ಸಂಸ್ಥೆಯೊಂದು ವರದಿ ನೀಡಿದೆ. ಕಾಂಗ್ರೆಸ್ ಪಾಠ ಕಲಿಸಿ, ಬಿಜೆಪಿ ಬೆಂಬಲಿಸಿ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಕಳಕಪ್ಪ ಬಂಡಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ನೇರವಾಗಿ ರೋಣ ಪಟ್ಟಣದ ಜನತೆಯೇ ಕೊಡುಗೆ ಅಪಾರ. ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡು ಅಮೂಲಾಗ್ರ ಬದಲಾವಣೆ ತಂದಿದ್ದೇನೆ. ದುರಂತ ಸಂಗತಿಯಂದರೆ ಹಾಲಿ ಶಾಸಕ ಜಿ.ಎಸ್. ಪಾಟೀಲರು ನಾನು ಜಾರಿಗೆ ತಂದಿರುವ ಯೋಜನೆಗಳಿಗೆ ಇಂದು ಉದ್ಘಾಟನೆ ಮಾಡುತ್ತಿದ್ದಾರೆ. ನನ್ನ ಅವಧಿಯಲ್ಲಿ ಜಿಗಳೂರ ಹತ್ತಿರದ 340 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದ್ದ ಬೃಹತ್ ಕೆರೆಯ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಶ್ರೀರಾಮುಲು, ಎಂ.ಎಸ್. ಕರಿಗೌಡ್ರ, ಎಚ್.ಎಸ್. ಸೋಂಪುರ, ರಫೀಕ ಪಿರ್ಜಾದಿ ಮಾತನಾಡಿದರು. ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಅಶೋಕ ನವಲಗುಂದ, ಗುರುರಾಜ ಕುಲಕರ್ಣಿ, ಬಿಜೆಪಿ ಎಸ್.ಟಿ. ಮೋರ್ಚಾ ಜಿಲ್ಲಾಧ್ಯಕ್ಷ ಬಸವಂತಪ್ಪ ತಳವಾರ, ಪಿ.ಸಿ. ಪೊಲೀಸ್‌ಪಾಟೀಲ, ಸಿದ್ದಣ್ಣ ಬಂಡಿ, ಅರ್ಜುನ ಕೊಪ್ಪಳ, ಪುರಸಭೆ ವಿರೋಧ ಪಕ್ಷದ ನಾಯಕ ಬಸನಗೌಡ ಪಾಟೀಲ, ಚನ್ನಯ್ಯ ಸೋಮನಕಟ್ಟಿಮಠ, ಮುತ್ತಣ್ಣ ಲಿಂಗನಗೌಡ್ರ, ಶಬ್ಬೀರ ಖಾಜಿ, ಶ್ರೀಧರ ದಲಭಂಜನ, ಶಿವಣ್ಣ ಪಲ್ಲೇದ ಸೇರಿದಂತೆ ಮುಂತಾದವರು ಇದ್ದರು. ಶರಣಪ್ಪ ಕಂಬಳಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

