ಗದಗ

ಕಾಂಗ್ರೆಸ್ ಸರ್ಕಾರವೇ ಇಲ್ಲ

Published On :

ನರಗುಂದ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 10 ತಿಂಗಳು ಗತಿಸಿದರೂ ರಾಜ್ಯದ ಜನತೆಗೆ ಯಾವ ಸರ್ಕಾರ ಆಡಳಿತ ಮಾಡುತ್ತಿದೆ ಎಂಬುದೇ ತಿಳಿಯದಾಗಿದೆ ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಆರೋಪಿಸಿದರು.
ಅವರು ಬುಧವಾರ ತಾಲೂಕಿನ ಚಿಕ್ಕನರಗುಂದ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ನಂತರ ಚಿಕ್ಕನರಗುಂದ, ಅರಿಷಣಗೋಡೆ, ಬೆನಕನಕೊಪ್ಪ, ಹಿರೇಕೊಪ್ಪ ಗ್ರಾಮಗಳಲ್ಲಿ ಮತ ಯಾಚನೆಯ ಪಾದಯಾತ್ರೆ ಸಭೆಯಲ್ಲಿ ಮಾತನಾಡಿದರು. ಯುಪಿಎ ಸರ್ಕಾರ ಕೇಂದ್ರದಲ್ಲಿ ಸಾವಿರಾರು ಕೋಟಿ ರು. ಗಳ ಭ್ರಷ್ಟಾಚಾರ ಮಾಡಿ ದೇಶದ ಅಭಿವೃದ್ಧಿಯನ್ನೇ ಹಾಳು ಮಾಡಿದೆ. ಈ ಬಾರಿ ಕಾಂಗ್ರೆಸ್ ಮುಕ್ತ ಭಾರತ ಮಾಡಿ ದೇಶದಲ್ಲಿ ನರೇಂದ್ರ ಮೋದಿ ಪ್ರಧಾನಿಯಾಗಲು ಪ್ರತಿ ಮತದಾರರು ಬಿಜೆಪಿ ಬೆಂಬಲಿಸಿ ಪಿ.ಸಿ. ಗದ್ದಿಗೌಡರಗೆ ಮತ ನೀಡಬೇಕು ಎಂದರು. ಜಿಪಂ ಸದಸ್ಯ ಎಂ.ಎಸ್. ಪಾಟೀಲ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಬಿ.ಬಿ. ಐನಾಪುರ, ಎಸ್.ಬಿ. ಕರಿಗೌಡ್ರ, ಚಂದ್ರ ದಂಡಿನ, ಬಸವಂತಪ್ಪ ತಳವಾರ, ರಾಜು ಪಾಟೀಲ, ಟಿ.ಎಸ್. ಚನ್ನಪ್ಪಗೌಡ್ರ, ಅಶೋಕ ಜ್ಞಾನೋಪಂತ, ಅಶೋಕ ಸಾಲೂಟಗಿ, ಶಿವಪ್ಪ ಗಣೇಶ, ಸುರೇಶ ಭೂಮಣ್ಣವರ, ಈರಣ್ಣ ಹೊಂಗಲ, ಸುರೇಶ ಸಾತಣ್ಣವರ, ಶಂಕ್ರಗೌಡ ಪಾಟೀಲ, ಎನ್.ವಿ. ಮೇಟಿ, ಕುಮಾರ ಮೇಟಿ, ಶಂಭು ದರಕುರ, ಟಿ.ಎಸ್. ಪಾಟೀಲ, ಸಂಗನಗೌಡ್ರ ಹಾಲಗೌಡ್ರ, ರಾಮಣ್ಣ ಭೂಮಣ್ಣವರ, ಮಾದೇವಪ್ಪ ಭೂಮಣ್ಣವರ, ಸೋಮಲಿಂಗಪ್ಪ ಮರ್ಚಕ್ಕನವರ, ಮಲ್ಲಪ್ಪ ಪೂಜಾರ, ಮುತ್ತಪ್ಪ ಲಿಂಗದಾಳ, ಶಿವಪ್ಪ ಅಂಗಡಿ, ಫಕೀರಪ್ಪ ಬಡನ್ನವರ, ಶಿವಪ್ಪ, ಚಂದ್ರು, ಅಜ್ಜು ಪಾಟೀಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.