ಗದಗ

ಗದಗ-ಬೆಟಗೇರಿಯಲ್ಲಿ ಬಿಜೆಪಿ ಅಲೆ

Published On :

ಗದಗ: ವಿಧಾನಸಭಾ ಚುನಾವಣೆ ನಂತರ ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಿಜೆಪಿಯ ಪರವಾಗಿ ಮರಳಿ ಅಲೆ ಎದ್ದಿದೆ ಎಂದು ಶಹರ ಬಿಜೆಪಿ ಅಧ್ಯಕ್ಷ ಈಶಣ್ಣ ಮುನವಳ್ಳಿ ಹೇಳಿದರು.
ಅವರು ಮಂಗಳವಾರ ನಗರದ ಬಸವೇಶ್ವರ ರಸ್ತೆಯ ಜವುಳಗಲ್ಲಿ, ಬೇವಿನಕಟ್ಟಿ ಲೈನ್ ಸೇರಿದಂತೆ ಹಲವು ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಪರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಎಂ.ಎಂ. ಹಿರೇಮಠ ಮಾತನಾಡಿ, ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಏನೂ ಅಭಿವೃದ್ಧಿ ಕೆಲಸ ಕೈಗೊಳ್ಳದೇ ಸುಳ್ಳು ಆಶ್ವಾಸನೆ ನೀಡಿ ಜನರನ್ನು ವಂಚಿಸುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸುಶೀಲಾ ಬದಿ ಯುಗಾದಿ ಹಬ್ಬದ ಪ್ರಯುಕ್ತ ಕಾರ್ಯಕರ್ತರಿಗೆ ಬೇವು-ಬೆಲ್ಲ ವಿತರಿಸಿ ಶಿವಕುಮಾರ ಉದಾಸಿ ಅವರ ಗೆಲುವಿಗೆ ಎಲ್ಲ ಕಾರ್ಯಕರ್ತರು ಸಮಯೋಚಿತವಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಜಿಲ್ಲಾ ಉಪಾಧ್ಯಕ್ಷ ತೋಟೋಸಾ ಬಾಂಡಗೆ ಹಾಗೂ ಮಹಿಳಾ ಮೋರ್ಚಾ ಅಧ್ಯಕ್ಷ ಜಯಶ್ರೀ ಉಗಲಾಟದ, ರವೀಂದ್ರ ಲಕ್ಕುಂಡಿ, ಬಸವರಾಜ ಶೀರಿ, ಸುರೇಶ ಪರ್ವತಗೌಡ್ರ, ಸಣ್ಣಪ್ಪ ಕಮಡೊಳ್ಳಿ, ಮಾಂಡ್ರೆ, ಪ್ರಸನ್ನ ಕಬಾಡಿ, ವಿನಾಯಕ ಪೂಜಾರಿ, ಕಾವ್ಯ ಬಾಕಳೆ, ಮಹಾದೇವಿ ಭರಮಗೌಡ್ರ, ಬೇವಿನಕಟ್ಟಿ, ಉತ್ತಮ ಪೂರೆ, ಹನುಮಂತ ಮಾಂಡ್ರೆ, ಶಂಕರ ಪೂಜಾರ, ಶ್ರೀರಂಗಸಾ ಕಬಾಡಿ, ಲಕ್ಷ್ಮಣ ಗುಜ್ಜಲ, ಗೂಳಪ್ಪ ಅಗಸಿಮನಿ, ರುದ್ರಪ್ಪ, ಲಕ್ಷ್ಮಿ ಕಬಾಡಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.