ಇಂದು ಉದಾಸಿ ಸಂವಾದ
ಗದಗ: ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹಾಗೂ ಸಮಾಜದ ಹಿರಿಯ ಗಣ್ಯ ವ್ಯಕ್ತಿಗಳ ಜೊತೆಗೆ ಏ. 8ರಂದು ಬೆಳಗ್ಗೆ 9ಕ್ಕೆ ನಗರದ ಹಳೆ ಸರಾಫ್ ಬಜಾರ್ದಲ್ಲಿರುವ ಜಗದಾಂಬ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಶಿವಕುಮಾರ ಉದಾಸಿ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಲಂಡನ್ನ ಮಾಜಿ ಮೇಯರ್ ಡಾ. ನೀರಜ್ ಪಾಟೀಲ ಹಾಗೂ ಬಿಜೆಪಿ ರಾಜ್ಯ ಸಂಪರ್ಕ ಸಮನ್ವಯ ಪ್ರಮುಖ ಚನ್ನಮಲ್ಲಿಕಾರ್ಜುನ ಪಾಟೀಲ ಭಾಗವಹಿಸುವರು. ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಉಪಸ್ಥಿತರಿರುವರು. ಜಿಲ್ಲಾಧ್ಯಕ್ಷ ಕಳಕಪ್ಪ ಬಂಡಿ ಸಭೆಯ ಅಧ್ಯಕ್ಷತೆವಹಿಸುವರು ಜಿಲ್ಲಾ ಬಿಜೆಪಿ ಸಂಘಟನಾ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ, ಎಸ್.ವಿ. ಸಂಕನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ಸಂಸ್ಥಾಪನಾ ದಿನಾಚರಣೆ
ಗದಗ: ಬಿಜೆಪಿ 34ನೇ ಸಂಸ್ಥಾಪನಾ ದಿನವನ್ನು ಬೆಟಗೇರಿ ರಂಗಾವದೂತ ನಗರದಲ್ಲಿ ಭಾನುವಾರ ಆಚರಿಸಲಾಯಿತು. ನಗರಸಭೆ ಸದಸ್ಯ ಶ್ರೀನಿವಾಸ ಕರಿ ನೇತೃತ್ವದಲ್ಲಿ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಬಿಜೆಪಿ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ಸಿಹಿ ವಿತರಿಸಿ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಪಿ.ಬಿ. ಬಣ್ಣದ, ರವಿ ಕೊಕ್ತಿ, ಬಸಣ್ಣ ಇಂಡಿ, ಶ್ರೀನಿವಾಸ ಹುಬ್ಬಳ್ಳಿ, ಚನ್ನಪ್ಪ ನೆಗಳೂರು, ಮುಕ್ಕಣ್ಣ ಕಣಕಿ, ನಾರಾಯಣಪ್ಪ ಕ್ವಾಣಿ, ಪ್ರಭು ಮಾದಗುಂಡಿ, ಸುರೇಶ ಜೀರಕಾಳಿ, ರಾಜು ಬಂಡಾ, ಸತ್ಯಪ್ಪ ಗಡಗಿ, ಭರಮಪ್ಪ ಚಾವಿ, ವಿಜಯಲಕ್ಷ್ಮಿ ಮ್ಯಾಳ, ಪರಶುರಾಮ ಕರಿಯಣ್ಣವರ, ಪರಶುರಾಮ ಇಂಡಿ, ಪರಮೇಶ ಇಚಿಡಿ, ನಾರಾಯಣ ಕೆಂಚಗುಂಡಿ, ಬಸವರಾಜ ಕುಣಗೆರಿ, ನಾಗರಾಜ ಕಣಕಿ, ಸಿದ್ದಮ್ಮ ಕಳ್ಯಾಳ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

