ಗದಗ

ಕಾರ್ಮಿಕರ ಕಲ್ಯಾಣಕ್ಕೆ ಕಾಂಗ್ರೆಸ್ ಬೆಂಬಲಿಸಿ

Published On :

ಗದಗ: ಕಾರ್ಮಿಕರು ಅಸಂಘಟಿತ ಕೂಲಿ ಕಾರ್ಮಿಕರ ಕಲ್ಯಾಣಕ್ಕೆ ಬದ್ಧವಾದ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ರನ್ನು ವಿಶೇಷವಾಗಿ ಜಿಲ್ಲೆಯ ಶ್ರಮಿಕ ವರ್ಗ ಬೆಂಬಲಿಸಿ ಆಶೀರ್ವದಿಸಬೇಕು ಎಂದು ರಾಜ್ಯ ಹಮಾಲರ ಒಕ್ಕೂಟದ ಅಧ್ಯಕ್ಷ ಅಯ್ಯಪ್ಪ ನಾಯ್ಕರ ಕರೆ ನೀಡಿದರು.
ಅವರು ಭಾನುವಾರ ನಗರದ 11ನೇ ವಾರ್ಡ್ನ ಹಮಾಲರ ಪ್ಲಾಟ್ ಪ್ರದೇಶದಲ್ಲಿ ರೇಲ್ವೆ ಹೋರಾಟ ಸಮಿತಿಯ ನಿಸ್ಸಾರ್ ಅಹ್ಮದ್ ಖಾಜಿ ಹಾಗೂ ಸಂಗಡಿಗರ ನೇತೃತ್ವದಲ್ಲಿ ಸಲೀಂ ಅಹ್ಮದ್ ಪರ ಮನೆಮನೆಗೆ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ರೇಲ್ವೆ ಬ್ರಾಡ್ಗೇಜ್ ಹೋರಾಟ ಸಮಿತಿ ಮುಖ್ಯಸ್ಥ ನಿಸ್ಸಾರ್ ಅಹ್ಮದ್ ಖಾಜಿ ಮಾತನಾಡಿ, ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರದ ಯುಪಿಎ ಸರ್ಕಾರ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕ ಸಚಿವರಿದ್ದಾಗ ರು. 1800 ಕೋಟಿ ವೆಚ್ಚದಲ್ಲಿ 60 ವರ್ಷ ದಾಟಿದ ಶ್ರಮಿಕರಿಗಾಗಿ ರಾಷ್ಟ್ರೀಯ ಪಿಂಚಣಿ ಯೋಜನೆ ಜಾರಿಗೆ ತರಲಾಗಿದೆ. ಕಾರ್ಮಿಕರ ಕುಟುಂಬಕ್ಕೆ ಇಎಸ್ಐ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಸಿದ್ದಪ್ಪ ನಾಗನೂರ, ಎನ್.ಕೆ. ಕೊರ್ಲಹಳ್ಳಿ, ಶಾಬುದ್ದೀನ್ ನದಾಫ್, ಫಕೀರಪ್ಪ ಕಲ್ಯಾಣಿ, ಇಮಾಮ್ಹುಸೇನ್ ರೋಣದ, ಶಿವಪ್ಪ ಕಲಕೇರಿ, ಹನುಮಂತಪ್ಪ ಗುರಿಕಾರ, ಹನುಮಂತಪ್ಪ ಹುಗ್ಗಿ, ಮಾದನಗೌಡ ಬಾವಿ, ನಿಂಗನಗೌಡ ಪಾಟೀಲ, ಮಂಜು ನಾಯ್ಕರ, ಸುಜಾತಾ ನಾಯ್ಕರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.