ಗದಗ

ಇಂದು ಗದ್ದಿಗೌಡ್ರ ಪರ ಸಭೆ

Published On :

ರೋಣ: ಬಾಗಲಕೋಟೆ ಲೋಕಸಭೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡ್ರ ಅವರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಏ. 13ರಂದು ಬೆಳಗ್ಗೆಯಿಂದ ಸಂಜೆವರೆಗೆ ವಿವಿಧ ಗ್ರಾಮಗಳಿಗೆ ತೆರಳಿ ಮತ ಯಾಚನೆ ಮತ್ತು ಪ್ರಚಾರ ಸಭೆ ನಡೆಸುವರು ಎಂದು ಮಾಜಿ ಸಚಿವ ಸಿ.ಸಿ. ಪಾಟೀಲ ಹೇಳಿದರು. ಈ ಕುರಿತು ಪ್ರಕಟಣೆ ನೀಡಿದ ಅವರು, ಪಿ.ಸಿ. ಗದ್ದಿಗೌಡ್ರ ಅವರು ನರಗುಂದ ವಿಧಾನಸಭೆ ವ್ಯಾಪ್ತಿಯ ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಏ. 13ರಂದು ಬೆಳಗ್ಗೆ 9ಕ್ಕೆ, ಬೆಳವಣಕಿ ಗ್ರಾಮದಲ್ಲಿ 10ಕ್ಕೆ, ಅಸೂಟಿ ಗ್ರಾಮದಲ್ಲಿ ಮಧ್ಯಾಹ್ನ 1ಕ್ಕೆ, ಮೆಣಸಗಿ ಗ್ರಾಮದಲ್ಲಿ ಸಂಜೆ 4ಕ್ಕೆ ಮತ್ತು ಹೊಳೆಆಲೂರಿನಲ್ಲಿ ಸಂಜೆ 7.30ಕ್ಕೆ ಚುನಾವಣಾ ಪ್ರಚಾರ ಸಭೆ ನಡೆಸುವರು. ಆದ್ದರಿಂದ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಮತ ಯಾಚನೆ ಮತ್ತು ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿತ್ರಕಲಾ ಪ್ರದರ್ಶನ
ಗದಗ: ಜ. ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ ಹಾಗೂ ಗದಗದ ದೃಶ್ಯ ಕಲಾವಿದರ ಸಂಘ ಇವುಗಳ ಆಶ್ರಯದಲ್ಲಿ ಗದಗ ಜಿಲ್ಲೆಯ ಚಿತ್ರ ಕಲಾವಿದರಿಂದ ಏ. 14ರಿಂದ 16ರ ವರೆಗೆ ತೋಂಟದಾರ್ಯ ಮಠದ ಆವರಣದಲ್ಲಿ ಚಿತ್ರ ಕಲಾಪ್ರದರ್ಶನ ಏರ್ಪಡಿಸಲಾಗಿದೆ. ಆಸಕ್ತ ಕಲಾವಿದರು, ಕಲಾವಿದರಾದ ಎಸ್.ವಿ. ಗುಂಜಾಳ (9986103685), ಶರಣಪ್ಪ ಬಿ.ಎಚ್. (9482901970), ಸಂಗಮೇಶ ಎ.ಎಚ್.(98451 03418), ವಿ.ವೈ. ಸೋಮನಕಟ್ಟಿ (9980428469) ಇವರಲ್ಲಿ ಏ. 14ರಂದು ಬೆಳಗ್ಗೆ 11ರ ಒಳಗಾಗಿ ತಮ್ಮ 2 ಕಲಾಕೃತಿಗಳನ್ನು ನೀಡಲು ಕಲಾವಿದ ಕೆ.ವಿ. ಕುಂದಗೋಳ, ಡಾ. ಬಿ.ಎಲ್. ಚವ್ಹಾಣ, ಪಿ.ಎಸ್. ಹಿರೇಮಠ, ಶ್ರೀಕೃಷ್ಣಾ ಕೆ.ಎಂ., ಶಹಜಹಾನ ಮುದಕವಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.