ಇತಿಹಾಸ ಸತ್ಯ ಘಟನೆಗಳ ಪ್ರತೀಕ
ರೋಣ: ಇತಿಹಾಸ ಗತ ಕಾಲದ ಸಾಂಸ್ಕೃತಿಕ, ಸಾಹಿತ್ಯಿಕ, ಸಾಮಾಜಿಕ, ಪ್ರಾಚೀನ ಪಾರಂಪರಿಕ ವೈಭವಗಳ ಕುರಿತು ಸತ್ಯ ಘಟನೆಗಳನ್ನು ಅನಾವರಣಗೊಳಿಸುವ ಪ್ರತೀಕವಾಗಿದೆ. ಆದ್ದರಿಂದ ಪ್ರತಿಯೊಬ್ಬರಿಗೆ ಇತಿಹಾಸ ಜ್ಞಾನ ಅತ್ಯಗತ್ಯ ಎಂದು ಇತಿಹಾಸ ಸಂಶೋಧಕ ಡಾ. ಶೀಲಾಕಾಂತ ಪತ್ತಾರ ಹೇಳಿದರು.
ಅವರು ಶನಿವಾರ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಮಹಾವಿದ್ಯಾಲಯ(ಬಿ.ಇಡಿ.)ದಲ್ಲಿ 2013-14ನೇ ಸಾಲಿನ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಇತಿಹಾಸ ಸಂಘದ ಉದ್ಘಾಟಿಸಿ ಮಾತನಾಡಿದರು. ಗತ ಕಾಲದ ವೈಭವವನ್ನು ತಿಳಿಸುವ ಐತಿಹಾಸಿಕ ಸನ್ನಿವೇಶಗಳು ಇಂದು ಸರಿಯಾದ ಸಂರಕ್ಷಣೆ ಇಲ್ಲದೆ ನಶಿಸುತ್ತಿರುವದು ವಿಷಾದನೀಯ ಸಂಗತಿಯಾಗಿದೆ. ಭಾವನಾತ್ಮಕ ಸ್ಪಂದನೆಗೆ ಪೂರಕವಾಗಿರುವ ಪ್ರಾಚ್ಯ ವಸ್ತುಗಳನ್ನು ಸಂಗ್ರಹಿಸಿ, ರಕ್ಷಿಸುವುದು ಪ್ರತಿ ನಾಗರಿಕನ ಕರ್ತವ್ಯವಾಗಿದೆ. ಪ್ರಾಚಿನ ಕಾಲದ ದೇವಾಲಯಗಳು, ವಿಗ್ರಹ, ಕೆತ್ತನೆ ಕಲಾಕೃತಿ ಮತ್ತು ಶಿಲಾಶಾಸನಗಳು ಐತಿಹಾಸಿಕ ಭವ್ಯ ಪರಂಪರೆಯ ಕಥೆಗಳನ್ನು ಹೇಳುವುದಲ್ಲದೆ ಸತ್ಯ ಘಟನೆಗಳ ಕುರಿತು ಬೆಳಕು ಚೆಲ್ಲುತ್ತೇವೆ. ನೈತಿಕ ನೆಲೆಗಟ್ಟಿನ ಮೇಲೆ ನಿರ್ಮಾಣವಾದ ಸ್ಮಾರಕಗಳು, ಸ್ತೂಪಗಳು, ದೇವಾಲಯಗಳು ಇಂದಿಗೂ ಪ್ರಾಚೀನ ಮೂಲ ಸಂಸ್ಕೃತಿ ಬಿಂಬಿಸುತ್ತಿವೆ ಎಂದರು. ಪ್ರಾಚಾರ್ಯ ವೈ.ಎನ್. ಪಾಪನ್ನವರ ಮಾತನಾಡಿ, ಪ್ರಾಚಿನ ಕಾಲದ ಸ್ಮಾರಕಗಳು ನಮ್ಮೆಲ್ಲರ ಆಸ್ತಿಯಾಗಿದ್ದು, ಅದರ ಸಂರಕ್ಷಣೆ ಅತ್ಯಗತ್ಯವಾಗಿದೆ ಎಂದರು. ಡಾ. ಐ.ಬಿ. ಕೊಟ್ಟೂರಶೆಟ್ಟಿ, ಸಂಘದ ಮುಖ್ಯಸ್ಥ ಪಿ.ಸಿದ್ದಪ್ಪ, ಎಸ್.ಆರ್. ಐಹೊಳ್ಳಿ, ಎ.ಟಿ. ನಾಗಾಠಾಣಾ, ಎಂ.ಆರ್. ಹಿರೇಮಠ, ಜಿ.ಎನ್. ನಾಯಕ, ಎಸ್.ಆರ್. ಹಿರೇಮಠ, ಜಿ.ಎ. ವೀರಾಪುರ, ಶರಣು ಗೋದಿ, ಕಂದಗಲ್, ಎಸ್.ಎಫ್. ಗೌಡರ, ಪಿ.ಎಚ್. ತೋಟಗಂಟಿ, ಮೌನೇಶ ಬಡಿಗೇರ, ಜಯಶ್ರೀ ಮಠದ ಇದ್ದರು. ಉಪನ್ಯಾಸಕ ಎಚ್.ಆರ್. ದೊಡ್ಡಮನಿ ಸ್ವಾಗತಿಸಿದರು. ರಜೀಯಾಬೇಗಂ ಸರ್ಕಾವಸ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

