ಶರಣೆಯರ ವಚನಗಳಲ್ಲಿ ಸಾಮಾಜಿಕ ಕಳಕಳಿ
ಗದಗ: ವಚನಗಾರ್ತಿಯರ ಅಭಿವ್ಯಕ್ತಿಯಲ್ಲಿ ಸಾಹಿತ್ಯಿಕ, ವೈಚಾರಿಕ, ವಿಡಂಭನಾತ್ಮಕ, ಸಾಮಾಜಿಕ ಕಳಕಳಿ ಮತ್ತು ಸಾಂಸ್ಕೃತಿಕ ಮೌಲ್ಯಗಳು ಒಡಮೂಡಿ ಬಂದಿವೆ. ಅವರ ಅಭಿವ್ಯಕ್ತಿಯ ಉದ್ದೇಶ ಆತ್ಮೋದ್ಧಾರದ ಜತೆಗೆ ಜನಸಾಮಾನ್ಯರೊಂದಿಗೆ ಸಂಹವನೆಯ ಸಂಕಲ್ಪ ಹೊಂದಿರುವುದು ಇಲ್ಲಿ ಪಾಂಡಿತ್ಯ ಪ್ರದರ್ಶನಕ್ಕಿಂತ ನೇರ, ಸರಳ, ಸಹಜ ಮತ್ತು ದಿಟ್ಟ ನುಡಿಗಳೇ ವಚನಗಳ ಸಾರಗಳಾಗಿವೆ ಎಂದು ಮುಂಡರಗಿಯ ಸಾಹಿತಿ ಭಾಗ್ಯಲಕ್ಷ್ಮೀ ಬಿಳಿಮಗ್ಗದ ಹೇಳಿದರು.
ಅವರು ಶನಿವಾರ ನಗರದ ಅಕ್ಕನ ಬಳಗದಲ್ಲಿ ಅಕ್ಕನ ಜಯಂತಿ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ವಚನ ಸಾಹಿತ್ಯಕ್ಕೆ ಶಿವಶರಣೆಯರ ಕೊಡುಗೆ ವಿಷಯವಾಗಿ ಮಾತನಾಡಿದರು. ನಂಬಿದ ಮೌಲ್ಯಗಳನ್ನು ತಮ್ಮ ಜೀವನಾನುಭವ ಶೃದ್ಧೆ, ಭಕ್ತಿ, ನುಡಿ, ಆಚರಣೆಗಳ ಮೂಲಕ ಮನಗಂಡ ವಿಚಾರಗಳನ್ನು ನಿರ್ಭೀತವಾಗಿ ವಚನಗಾರ್ತಿಯರು ತಮ್ಮ ವಚನಗಳಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಗೊಳಿಸಿದ್ದಾರೆ. ತಮ್ಮ ಸುತ್ತಮುತ್ತಲಿನ ದಿನಬಳಕೆಯ ವಾಸ್ತವಿಕ ಅನುಭವಗಳನ್ನೇ ಬಳಸಿಕೊಂಡಿರುವುದು ವಚನಗಳಲ್ಲಿ ಕಂಡು ಬರುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಅಕ್ಕನ ಬಳಗದ ಅಧ್ಯಕ್ಷೆ ಕಸ್ತೂರಿ ಹಿರೇಗೌಡ್ರ ಮಾತನಾಡಿದರು. ನಗರಸಭೆಯ ನೂತನ ಅಧ್ಯಕ್ಷೆ ರುದ್ರಮ್ಮ ಕೆರಕಲಮಟ್ಟಿ ಅವರನ್ನು ಸನ್ಮಾನಿಸಲಾಯಿತು. ಕಸ್ತೂರಿ ಹಿರೇಗೌಡ್ರ, ಸುವರ್ಣ ಹೊಸಂಗಡಿ, ನಾಗರತ್ನಾ ಮಾರನಬಸರಿ, ಅನ್ನಪೂರ್ಣ ಮಾಳೆಕೊಪ್ಪಮಠ, ನಾಗರತ್ನ ಹುಬಳಿಮಠ, ರೇಣುಕಾ ಅಮಾತ್ಯೆ, ಲಲಿತಾ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ವಿಜಯಲಕ್ಷ್ಮೀ ಹಿರೇಮಠ ಪ್ರಾರ್ಥಿಸಿದರು. ಕಸ್ತೂರಿ ಹಿರೇಗೌಡ್ರ ಸ್ವಾಗತಿಸಿದರು.
ವಿದ್ಯಾ ಹುಲಬನ್ನಿ ಹಾಗೂ ಶಿವಲೀಲಾ ಕುರಡಗಿ ಪರಿಚಯಿಸಿದರು. ಸುವರ್ಣಾ ಹೊಸಂಗಡಿ ನಿರೂಪಿಸಿದರು. ಕಾರ್ಯದರ್ಶಿ ಮೀನಾಕ್ಷಿ ಸಜ್ಜನರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

