ಗದಗ

ಸುದ್ದಿ ಸಂಕ್ಷೇಪ

Published On :

ನಾಳೆ ಜನಜಾಗೃತಿ ಸಮಾವೇಶ
ಮುಂಡರಗಿ: ಗದಗ ಜಿಲ್ಲಾ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಮಾಸಿಕ ಸಭೆ ಹಾಗೂ ಜನಜಾಗೃತಿ ಸಮಾವೇಶವನ್ನು ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಸಿದ್ದಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಏ. 22ರಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ. ಕಪ್ಪತ್ತಗುಡ್ಡದ ನಂದಿವೇರಿ ಮಠದ ಪೂಜ್ಯ ಶಿವಕುಮಾರ ಮಹಾಸ್ವಾಮಿಗಳು ಹಾಗೂ ತಂಗಡಗಿಯ ಹಡಪದ ಅಪ್ಪಣ್ಣ ಸಮಾಜದ ಜಗದ್ಗುರು ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ಗದಗ ಜಿಲ್ಲಾ ಕಮಿಟಿ ಅಧ್ಯಕ್ಷರು, ಕಾರ್ಯದರ್ಶಿಗಳು, ಜಿಲ್ಲೆಯ ಎಲ್ಲಾ ತಾಲೂಕು ಕಮಿಟಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವ ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಾಲೂಕು ಹಡಪದ ಸಮಾಜದ ಅಧ್ಯಕ್ಷ ದೇವು ಹಡಪದ ತಿಳಿಸಿದ್ದಾರೆ.
ಬೇಸಿಗೆ ಶಿಬಿರ ಉದ್ಘಾಟನೆ
ಮುಳಗುಂದ: ಸ್ಥಳೀಯ ಬಿ.ಎ. ಬಾತಾಖಾನಿ ಕೈಗಾರಿಕಾ ಕೇಂದ್ರದಲ್ಲಿ ಬೇಸಿಗೆಯ ಚಿಣ್ಣರ ಶಿಬಿರವನ್ನು ಕಾಲೇಜಿನ ಕಾರ್ಯದರ್ಶಿ ಮಹಾಂತೇಶ ಬಾತಾಖಾನಿ ಉದ್ಘಾಟಿಸಿದರು. ಚಿಣ್ಣರು ಈ ಮೇಳದಲ್ಲಿ ಭಾಗವಹಿಸುವುದರಿಂದ ಅವರ ದೈಹಿಕ ಬೆಳವಣಿಗೆ ಜತೆಗೆ ಶಿಸ್ತು ಕಲಿಯಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಮಂಜುಳಾ ಪಾಟೀಲ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯ ಅನಿಲ ಬಿ.ಕೆ. ಅಧ್ಯಕ್ಷತೆ ವಹಿಸಿದ್ದರು. ವಿರೂಪಾಕ್ಷ ಕಣಾಸೂರ, ರೇಣುಕಾ ಸ್ವಾಮಿ ಇದ್ದರು. ಮೈಲಾರಪ್ಪ ನಾಗರಾಳ ನಿರೂಪಿಸಿ, ವಂದಿಸಿದರು.
ಮದುವೆ ಸಾಮಗ್ರಿ ಭಸ್ಮ
ಗುತ್ತಲ: ಮಗಳ ಮದುವೆ ತಯಾರಿಯಲ್ಲಿದ್ದ ಸಂಭ್ರಮದ ಮದುವೆ ಮನೆ ಆಕಸ್ಮಿಕ ಬೆಂಕಿಗೆ ಆಹುತಿಯಾಗಿ ಎಲ್ಲಾ ಸಾಮಗ್ರಿ ಸುಟ್ಟಿದ್ದರಿಂದ ಕುಟುಂಬದವರಲ್ಲಿ ಸ್ಮಶಾನ ಮೌನ ಆವರಿಸಿದೆ.  ಸಮೀಪದ ಗುಡೂರ ಗ್ರಾಮದಲ್ಲಿ ಮಧ್ಯಾಹ್ನ ಸಂಭವಿಸಿದ ಆಕಸ್ಮಿಕ ಬೆಂಕಿಗೆ ಹೆಗ್ಗಪ್ಪ ನಿಂಗಪ್ಪ ಚೂರಿ ಅವರ ಮನೆ ಆಹುತಿಯಾಗಿದೆ. ಏಕೈಕ ಪುತ್ರಿ ಪುಷ್ಪಾಳ ಮದುವೆಗಾಗಿ ಎಲ್ಲ ಸಿದ್ಧತೆ ಮಾಡಲಾಗಿತ್ತು. ಏ. 25ರಂದು ಮದುವೆ ನಿಶ್ಚಯವಾಗಿತ್ತು. ಮದುವೆಗೆ ತಂದಿಟ್ಟಿದ್ದ ಬಂಗಾರ, ಬಟ್ಟೆ ಬರೆ, ಬಾಂಡೆ ಸಾಮಗ್ರಿಗಳೆಲ್ಲವೂ ಸುಟ್ಟಿವೆ. ಸಾಲಸೂಲ ಮಾಡಿ ತಂದಿದ್ದ 4 ತೊಲ ಬಂಗಾರ, ವರನಿಗೆ ಮತ್ತು ಮದುವಣಗಿತ್ತಿಗೆ ತಂದಿದ್ದ ರು. 20 ಸಾವಿರ ಬಟ್ಟೆ, ಕಿರಾಣಿ ಸಾಮಗ್ರಿ ಎಲ್ಲವೂ ಕರಕಲಾಗಿವೆ. ಸೋಮವಾರದಿಂದ ಮದುವೆಯ ಕಾರ್ಯಕ್ರಮ ಪ್ರಾರಂಭವಾಗುತ್ತಿದ್ದವು. ಆದರೆ, ವಿಧಿಯಾಟದಿಂದ ನಮ್ಮ ಕುಟುಂಬವೇ ಬೀದಿಪಾಲಾಗಿದೆ. ಏನು ಮಾಡಬೇಕಂಬುದೇ ಗೋಚರಿಸುತ್ತಿಲ್ಲ ಎಂದು ನಿಂಗಪ್ಪನ ಪತ್ನಿ ಅಳಲು ತೋಡಿಕೊಂಡರು. ಇದಲ್ಲದೆ, ಸುಮಾರು 70ರ ಆಸುಪಾಸಿನ ಹನುಮವ್ವ ಆನೆಪ್ಪ ಒಬ್ಬಂಟಿಯಾಗಿ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಳು. ಈಕೆ ಸಂಗ್ರಹಿಸಿದ್ದ ಕಾಳು ಕಡಿ, ಜೋಳ ಅಲ್ಪಸ್ವಲ್ಪ ಹಣವೆಲ್ಲ ಬೆಂಕಿಗೆ ಆಹುತಿಯಾಗಿದೆ. ಈಕೆಯ ಮನೆ ಕಳೆದ ವರ್ಷ ಇದೇ ರೀತಿ ಆಕಸ್ಮಿಕ ಬೆಂಕಿ ಅನಾಹುತಕ್ಕೆ  ಬಲಿಯಾಗಿತ್ತು. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.