ಗದಗ

ಅಧ್ಯಯನದಿಂದ ಕವಿಯಾಗಲು ಸಾಧ್ಯ

Published On :

ನರಗುಂದ: ಕಾವ್ಯವೆಂಬುದು ಸಹಜವಾಗಿ ಪ್ರತಿಯೊಬ್ಬರಿಗೂ ಬರುವದಲ್ಲ. ಸತತ ಅಧ್ಯಯನವಿದ್ದರೆ ಮಾತ್ರ ಕವಿಗಳಾಗಲು ಸಾಧ್ಯ ಎಂದು ಧಾರವಾಡದ ಸಾಹಿತಿ ಯಲ್ಲಪ್ಪ ಹಲಕುರ್ಕಿ ಹೇಳಿದರು.
ಅವರು ಈಚೆಗೆ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದ ಸಮುದಾಯ ಭವನದಲ್ಲಿ ಮಿನುಗುತಾರೆ ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಒಂದು ಕವಿ ಸಂಕಲನ ರಚನೆ ಮಾಡಬೇಕೆಂದರೆ ಅದಕ್ಕೆ ಸತತವಾದ ಅಧ್ಯಯನದಿಂದ ಮಾತ್ರ ಕವನ ಸಂಕಲನ ರಚಿಸಿ ಒಬ್ಬ ಯುವ ಕವಿ ಎಂದು ಕರೆಸಿಕೊಳ್ಳಲು ಸಾಧ್ಯ. ಅಂತಹ ಕಾರ್ಯವನ್ನು ಶಿಕ್ಷಕ ಎಂ.ಡಿ. ಮಾದರ ಅವರು ತಮ್ಮ ಸರ್ಕಾರಿ ಸೇವೆ ಜೊತೆಗೆ ಹಲವಾರು ವಿಷಯಗಳಲ್ಲಿ ಅಧ್ಯಯನ ಮಾಡಿ ಇಂದು ಮಿನುಗುತಾರೆ ಎಂಬ ಕವನ ಸಂಕಲನವನ್ನು ಲೊಕಾರ್ಪಣೆ ಮಾಡಿದ್ದು ಸಂತೋಷ ತಂದಿದೆ.
ಇಂದಿನ ಯುವ ಜನಾಂಗ ದೇಶದ ಇತಿಹಾಸದ ವಿಷಯದಲ್ಲಿ ಅಧ್ಯಯನ ಶೀಲರಾಗಿ ಉತ್ತಮ ಗ್ರಂಥ, ಕವನ, ಹಾಡುಗಳನ್ನು ರಚಿಸಲು ಮುಂದಾಗುವುದು ಇಂದಿನ ಸಮಾಜಕ್ಕೆ ಅವಶ್ಯಕವಾಗಿದೆ. ಕಾವ್ಯವೆಂಬುದು ಸಹಜ ಪ್ರಕ್ರಿಯೆ ಅಲ್ಲ, ಅದು ಅನುಭಾವದ ಅಭಿವೃದ್ಧಿ. ಕವಿ ಸತತ ಪರಿಶ್ರಮದಿಂದ ಮತ್ತು ಕವನ ಸಂಕಲನ ಅಧ್ಯಯನ ಮಾಡಿದರೆ ಮಾತ್ರ ಇಂತಹ ಕವನ ಸಂಕಲನ ಗ್ರಂಥ ರಚಿಸಲು ಸಾಧ್ಯ. ಕನ್ನಡ ಶ್ರೀಮಂತ ಭಾಷೆ. ಇಂತಹ ಭಾಷೆಯನ್ನು ಯುವ ಸಮುದಾಯ ಶ್ರೀಮಂತಗೊಳಿಸಿ ಯುವಕರು ಕವಿಗಳು, ಸಾಹಿತಿಗಳು ಯಾವುದೇ ರಾಜಕೀಯಕ್ಕೆ ಅಂಟಿಕೊಳ್ಳದೇ ಸಾಹಿತ್ಯ ಲೋಕಕ್ಕೆ ಬರಬೇಕು ಎಂದರು.
ಕವಿನ ಸಂಕಲನ ರಚಿಸಿದ ಎಂ.ಡಿ. ಮಾದರ, ಡಾ. ವೈ.ಎಂ. ಭಜಂತ್ರಿ, ಸಾಹಿತಿ ರುದ್ರನಾಥ ಕಲ್ಯಾಣಶೆಟ್ಟಿ, ಮಾರುತಿ ಭೂಸ್ಲೆ ಮುಂತಾದವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರೀವನಮಠದ ಗುರು ಸಿದ್ಧವೀರ ಶ್ರೀಗಳು, ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ವೀರೇಶ್ವರ ದೇವರು, ಡಾ. ಜಯದೇವ ಪತ್ತಾರ, ಸಿದ್ದಣ್ಣ ಘಾಟಗೆ, ಸತೀಶ ನಾಸಿ, ಬಸವರಾಜ ಆಡಿನ, ಜಿಪಂ ಸದಸ್ಯ ಎಸ್.ಸಿ. ದಂಡಿನ, ಗ್ರಾಂಪ ಅಧ್ಯಕ್ಷ ಹನುಮವ್ವ ಮಾದರ, ಉಪಾಧ್ಯಕ್ಷ ಪಾರವ್ವ ಐನಾಪುರ, ಸದಸ್ಯ ರೇಣವ್ವ ಮೇಟಿ, ಎಸ್.ಜಿ. ಮಣ್ಣೂರಮಠ, ಶಂಕರ ಕಲ್ಲಿಗನೂರ, ಕೆ.ಬಿ. ಹುಲಗೂರ, ವಿ.ಎಸ್. ಅಣ್ಣಗೇರಿ, ಎಂ.ವಿ. ದೇಮಶೆಟ್ಟಿ, ಪಿ.ಎಸ್. ಅಣ್ಣಗೇರಿ, ಶಿವಾನಂದ ಜೋಗಿ ಮುಂತಾದವರು ಉಪಸ್ಥಿತರಿದ್ದರು. ರಮೇಶ ಐನಾಪುರ ಸ್ವಾಗತಿಸಿದರು. ಶಾಂತಕುಮಾರ ಭಜಂತ್ರಿ ನಿರೂಪಿಸಿದರು. ಆರ್.ಬಿ. ಚಿನವಾಲರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.