ಗದಗ

ವಿದ್ಯಾದಾನ ಸಮಿತಿಯಿಂದ ಶ್ರೇಷ್ಠಮಟ್ಟದ ಸೇವೆ: ಟಿ.ವಿ. ಮಾಗಳದ

Published On :

ಗದಗ: ವಿದ್ಯೆಯ ದಾನಕ್ಕೆ ಹೆಸರಾಗಿರುವ ವಿದ್ಯಾದಾನ ಸಮಿತಿ ಜ್ಞಾನದಾಸೋಹ ಮಹಾಮನೆಯಾಗಿದ್ದು, ಗುಣಾತ್ಮಕ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಇದೀಗ ಬದಲಾವಣೆಗೆ ಸ್ಪಂದಿಸುತ್ತಾ ಕ್ಲಾಸಿಕ್ ಪ್ರಿ ಪ್ರೈಮರಿ ಸಿಬಿಎಸ್ಸಿ ಶಾಲೆ ಆರಂಭಿಸುವುದರ ಮೂಲಕ ಈ ಭಾಗದಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠಮಟ್ಟದ ಸೇವೆ ನೀಡುತ್ತಾ ಬಂದಿದೆ ಎಂದು ಸಾಹಿತಿ ಟಿ.ವಿ. ಮಾಗಳದ ಹೇಳಿದರು.
ಅವರು ನಗರದ ವಿದ್ಯಾದಾನ ಸಮಿತಿಯ ಶಿಕ್ಷಣ ಬಾಲಕಿಯರ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕ್ಲಾಸಿಕ್ ಸಿಬಿಎಸ್ಸಿ. ಪ್ರಿಪ್ರೈಮಿರಿ ಶಾಲಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ವಿದ್ಯಾದಾನ ಸಮಿತಿಯ ಅಧ್ಯಕ್ಷ ಧೀರೇಂದ್ರ ಹುಯಿಲಗೋಳ ಕಾರ್ಯಕ್ರಮ ಉದ್ಘಾಟಿಸಿದರು. ಲಕ್ಷ್ಮೇಶ್ವರ ಚಂದನ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಟಿ. ಈಶ್ವರ, ಎಸ್.ವೈ. ಚಿಕ್ಕಟ್ಟಿ, ನಗರಸಭೆ ಅಧ್ಯಕ್ಷ ರುದ್ರಮ್ಮ ಕೆರಕಲಮಟ್ಟಿ ಶುಭಲಕ್ಷ್ಮಿ ಹುಯಿಲಗೋಳ, ಆಡಳಿತಾಧಿಕಾರಿ ಎಸ್.ಬಿ. ಜಾಧವ, ನಿವೃತ್ತ ಅಧಿಕಾರಿ ಎಚ್.ವಿ. ಮಾಡಳ್ಳಿ, ನಾಗಾಲ್ಯಾಂಡ್ ಶಿಕ್ಷಕಿ ಅಪಕಲಾ, ಕೆ.ಎಚ್. ಬೇಲೂರ, ವಿದ್ಯಾದಾನ ಸಮಿತಿಯ ಖಜಾಂಚಿ ಎನ್.ಬಿ. ಕಳಸಾಪುರ, ರಾಜಗೋಪಾಲಾಚಾರ್ಯ ಮಳಗಿ, ಅನಿಲ ಇನಾಮದಾರ, ಎಲ್.ಡಿ. ಪಾಟೀಲ್, ಬಿ.ಟಿ. ಕುಲಕರ್ಣಿ ಮುಂತಾದವರು ಇದ್ದರು. ಸಮಿತಿ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ್ ಪರಿಚಯಿಸಿದರು. ನಮ್ರತಾ, ಕುಸುಮಾ ಹಾಗೂ ಬದರಿ ಜೋಶಿ ನಿರ್ವಹಿಸಿದರು. ಡಾ. ಬಿ.ಎಸ್. ರಾಠೋಡ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.