ದೇಶದ ಅಭಿವೃದ್ಧಿ ಕೇವಲ ವಿಜ್ಞಾನಿ, ತಂತ್ರಜ್ಞರಿಂದ ಆಗಲ್ಲ
ಮುಂಡರಗಿ: ದೇಶದ ಅಭಿವೃದ್ಧಿ ಕೇವಲ ವಿಜ್ಞಾನಿ ಮತ್ತು ತಂತ್ರಜ್ಞರಿಂದ ಆಗುವುದಿಲ್ಲ. ಅದಕ್ಕೆ ಅರ್ಥಶಾಸ್ತ್ರಜ್ಞರು, ರಾಜಕೀಯ ತಜ್ಞರು ಮುಂತಾದ ಮೇದಾವಿಗಳ ಅವಶ್ಯಕತೆ ಇದೆ ಎಂದು ರಾಜ್ಯ ವಿಜ್ಞಾನ ಪರಿಷತ್ತು ಅಧ್ಯಕ್ಷ ಎಸ್.ವಿ. ಸಂಕನೂರ ಹೇಳಿದರು.
ಅವರು ಜಗದ್ಗುರು ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ವಾರ್ಷಿಕೋತ್ಸವ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯಾವುದೇ ಕೋರ್ಸ್ಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಅದು ಹೆಚ್ಚು, ಇದು ಹೆಚ್ಚು ಎಂಬ ಕೀಳರಿಮೆ ಹೊಂದದೆ ಆಸಕ್ತಿಯಿಂದ ಓದಿ ಪ್ರತಿಭಾನ್ವಿತರಾಗಬೇಕು ಎಂದರು. ಎಂ.ಬಿ. ಗದಗ ಹಾಗೂ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾ. ಎಸ್.ಜಿ. ಕಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಪರಿಪೂರ್ಣವಾಗಿ ಬೆಳೆಯಬೇಕಾದರೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಕಾಲೇಜು ವಾರ್ಷಿಕೋತ್ಸವವು ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಹಾಕಲು ವೇದಿಕೆಯಾಗಿದೆ ಎಂದರು. ಕಾಲೇಜು ಮೇಲುಸ್ತುವಾರಿ ಕಮಿಟಿಯ ಬಿ.ವಿ. ಮುದ್ದಿ, ಶಾಂತಾ ಕಲ್ಲಕುಟಗರ, ಕೃಷ್ಣಾ ಸಾಹುಕಾರ, ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಸಂಚಾಲಕ ಡಾ. ರಿಯಾಜ್ ಪಾಷಾ, ಶಿವು ಮುದಿಯಜ್ಜನವರ, ಕೇಮಪ್ಪ ದೇವರಮನಿ, ಶ್ರೀಕಾಂತ ಶಿರಹಟ್ಟಿ, ಮುತ್ತು ಬನ್ನಿಕೊಪ್ಪ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು. ಡಾ. ವಾದಿರಾಜ ತಂಗೋಡ ಸ್ವಾಗತಿಸಿದರು. ಪ್ರೊ. ಮಲ್ಲವ್ವ ಜಲರಡ್ಡಿ ವರದಿ ಸಾದರಪಡಿಸಿದರು. ಅಂದಾನಗೌಡ ಗೌಡರ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

