ಗದಗ

ರಾಮಕರುಣಾನಂದ ಸಪ್ತಾಹ

Published On :

ಗದಗ: ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಮೇ 10ರಿಂದ 8ರ ವರೆಗೆ ಬೆಳಗ್ಗೆ 8ರಿಂದ ಸದ್ಗುರು ರಾಮಕರುಣಾನಂದರ 57ನೇ ವರ್ಷದ ಪುಣ್ಯ ತಿಥಿ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೇ 8ರಂದು ಬೆಳಗ್ಗೆ 10ಕ್ಕೆ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯುವುದು. ನಂತರ 12ಕ್ಕೆ ಅನ್ನ ಸಂತರ್ಪಣೆ ಜರುಗುವುದು ಮತ್ತು ಸಂಜೆ 6ಕ್ಕೆ ಸದ್ಗುರು ರಾಮಕರುಣಾನಂದರ ರಥೋತ್ಸವವು ಜರುಗುವುದು. ಈ ಸಂದರ್ಭ ಪರಮೇಶ್ವರ ಶ್ರೀಗಳು ಹಾಗೂ ಯರ್ರಿತಾತ ಶ್ರೀಗಳು ಮುಂತಾದವರು ಉಪಸ್ಥಿತರಿರುವರು ಎಂದು ಕಾರ್ಯನಿರ್ವಾಹ ಸಂಚಾಲಕ ಆರ್.ಆರ್. ಕೆಂಚನಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳಿಗೆ ಸಂಸ್ಕಾರ ನೀಡಿ
ಲಕ್ಷ್ಮೇಶ್ವರ: ಮಕ್ಕಳಿಗೆ ಬಾಲ್ಯದಲ್ಲಿ ಉತ್ತಮ ಸಂಸ್ಕಾರ ನೀಡುವ ಮಹತ್ತರ ಕಾರ್ಯವನ್ನು ಪ್ರತಿಯೊಬ್ಬ ತಂದೆ ತಾಯಿಗಳು ಮಾಡಬೇಕಾಗಿದೆ. ಮಕ್ಕಳಿಗೆ ಸಮಾಜದ ಬಗ್ಗೆ ಉತ್ತಮ ತಿಳಿವಳಿಕೆ ಮೂಡಿಸುವ ಗುರುತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಜಮಖಂಡಿಯ ಓಲೆಮಠದ ಚನ್ನಬಸವ ಸ್ವಾಮಿಗಳು ಹೇಳಿದರು.
ಸಮೀಪದ ಬಾಲೆಹೊಸೂರಿನಲ್ಲಿ ಜರುಗುತ್ತಿರುವ ಶರಣಾಮೃತ ಚರಿತೆ ಪ್ರವಚನ ಕಾರ್ಯಕ್ರಮದಲ್ಲಿ 'ಕೋಳೂರ ಕೊಡಗೂಸು' ಕುರಿತು ಪ್ರವಚನ ನೀಡಿದರು. ಮಕ್ಕಳಿಗೆ ಬಾಲ್ಯದಲ್ಲಿ ನಮ್ಮ ಸಂಸ್ಕೃತಿ ಬಗ್ಗೆ ತಿಳುವಳಿಕೆ ನೀಡುವುದು ಮತ್ತು ಧಾರ್ಮಿಕ ಭಾವನೆಗಳನ್ನು ಬೆಳೆಸುವ ಕಾರ್ಯವನ್ನು ಪೋಷಕರು ಮಾಡಬೇಕು. ಕೋಳೂರ ಕೊಡಗೂಸು ತನ್ನ ತಾಯಿ ದೇವರಿಗೆ ನಿತ್ಯವು ಪ್ರಸಾದ ನೀಡುತ್ತಾಳೆ. ಅದನ್ನು ದೇವರು ಸ್ವೀಕರಿಸುತ್ತಾನೆ ಎನ್ನುವ ಅಚಲವಾದ ವಿಶ್ವಾಸ ಕೂಸಿನಲ್ಲಿ ಮೂಡಿತ್ತು, ಒಂದು ದಿನ ತಾನು ನೀಡಿದ ನೈವೇದ್ಯ ದೇವರು ಸ್ವೀಕರಿಸದಿದ್ದಾಗ ಕೂಸಿಗೆ ತಾಯಿ ನೀಡಿದ ಸಂಸ್ಕಾರದ ಬಲದಿಂದ ದೇವರು ಪ್ರಸಾದ ಸ್ವೀಕರಿಸುವಂತೆ ಮಾಡುತ್ತಾಳೆ. ಇದು ದೇವರಲ್ಲಿನ ಅಚಲವಾದ ವಿಶ್ವಾಸ, ಭಕ್ತಿ ತೋರಿಸುತ್ತದೆ ಎಂದರು. ತಿಪ್ಪಾಯಿಕೊಪ್ಪದ ವಿರುಪಾಕ್ಷ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಹೋತನಹಳ್ಳಿಯ ಸಿದ್ಧಾರೂಢ ಮಠದ ಶಂಭುಲಿಂಗ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಬಾಲೆಹೊಸೂರಿನ ಕುಮಾರ ದೇವರು ಕಾರ್ಯಕ್ರಮ ನಿರೂಪಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.