ಗದಗ

ವಿಶಾಲ ಮನೋಭಾವದಿಂದ ಅಭಿವೃದ್ಧಿ

Published On :

ಮುಂಡರಗಿ: ಮನುಷ್ಯ ಮನುಷ್ಯರಲ್ಲಿ ವಿಶಾಲ ಮನೋಭಾವ ತಾಳಿದಾಗ ಮಾತ್ರ ಸಮಾಜ ಮತ್ತು ಸಂಘಟನೆಯು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಅನ್ನದಾನ ಭಾರತಿ ಅಪ್ಪಣ್ಣ ಶ್ರೀಗಳು ಹೇಳಿದರು.
ಅವರು ಈಚೆಗೆ ತಾಲೂಕಿನ ಡೋಣಿ ಗ್ರಾಮದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಗದಗ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಾಗೃತಿ ಸಭೆಯಲ್ಲಿ ಮಾತನಾಡಿದರು. ನಮ್ಮ ಹಕ್ಕುಗಳಿಗಾಗಿ ರಾಜ್ಯ ಮಟ್ಟ, ಜಿಲ್ಲಾ ಮಟ್ಟದಲ್ಲಿ ಸರ್ಕಾರದ ವಿರುದ್ಧ ಹೋರಾಟ ಧ್ವನಿ ಅನಿವಾರ್ಯವಾಗಿ ಮಾಡಬೇಕಾಗಿದೆ. ಈ ನೆಲದಲ್ಲಿ ಹುಟ್ಟಿ ಬೆಳೆದ ನಮ್ಮ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ ಯಾಕೆ? ಕೆಟ್ಟ ಮತ್ತು ಭ್ರಷ್ಟ ರಾಜಕೀಯವೇ ಕಾರಣ. ನಿಮ್ಮ ಮಕ್ಕಳಿಗೆ ಶ್ರೇಷ್ಠ ಶಿಕ್ಷಣ, ಉತ್ತಮ ಸಂಸ್ಕಾರ ನೀಡಬೇಕು. ಸಮಾಜದ ಪ್ರಗತಿಗಾಗಿ ಪ್ರತಿಯೊಬ್ಬರೂ ಕಂಕಣಬದ್ಧರಾಗಿ ಸೇವಾ ಮನೋಭಾವದಿಂದ ದುಡಿಯಬೇಕು ಎಂದರು.
ಡೋಣಿಯ ನಂದಿವೇರಿ ಮಠದ ಶಿವುಕುಮಾರ ಶ್ರೀಗಳು ಮಾತನಾಡಿ, ಹಡಪದ ಅಪ್ಪಣ್ಣನವರು ವಚನ ಸಾಹಿತ್ಯಕ್ಕೆ ಬೆಲೆ ಕಟ್ಟಲಾರದ 280ಕ್ಕೂ ಹೆಚ್ಚು ವಚನಗಳನ್ನು ನೀಡಿ ಶ್ರೀಮಂತಗೊಳಿಸಿದ್ದಾರೆ. ಬಸವಣ್ಣನ ಆಪ್ತ ಕಾರ್ಯದರ್ಶಿಯಾಗಿ ಬಹಳ ನಿಷ್ಠೆ, ಪ್ರಾಮಾಣಿಕರಾಗಿ ಸೇವೆ ಮಾಡಿದ್ದಾರೆ. ಹಡಪದ ಸಮಾಜದವರು ತಮ್ಮ ಕೀಳರಿಮೆ ಬದಿಗೊತ್ತಿ ಸಮಾಜದಲ್ಲಿ ಎತ್ತರದ ಸ್ಥಾನಗಳನ್ನು ಗಳಿಸಿದಾಗ ಸಮಾಜ ತಾನಾಗಿಯೇ ಗೌರವಿಸುತ್ತದೆ. ಜಾತಿಯಿಂದ ಮನುಷ್ಯನನ್ನು ಅಳೆಯಲು ಸಾಧ್ಯವಿಲ್ಲ. ಸಾಧಿಸುವ ಗುರಿಯಿಂದ ಏನನ್ನಾದರೂ ಸಾಧಿಸಬಹುದು ಎಂದರು. ತಾಲೂಕು ಅಧ್ಯಕ್ಷ ದೇವು  ಹಡಪದ, ಸಂಘದ ಜಿಲ್ಲಾ ಅಧ್ಯಕ್ಷ ವಿ.ಬಿ. ಕೊಣ್ಣೂರು ಮಾತನಾಡಿ, ಸಮಾಜದ ಪ್ರಗತಿಗಾಗಿ ನಾನು ಸದಾ ಸಿದ್ಧ ನಿಮ್ಮ ಸಹಾಯ ಸಹಕಾರ ನಿರೀಕ್ಷಿಸುತ್ತೇನೆ ಎಂದರು. ಕಾರ್ಯದರ್ಶಿ ಎ.ವಿ. ಪ್ರಭು ಮಾತನಾಡಿದರು. ಶ್ರೀನಿವಾಸ ಹಡಪದ, ಕಲ್ಲೇಶಪ್ಪ ಕೂಡಗುಂಟಿ, ನಾಗರಾಜ ಡಂಬಳ, ಪರಶುರಾಮ ಹಡಪದ, ಮಂಜುನಾಥ ಹಡಪದ, ಶೇಖರಪ್ಪ ಹಡಪದ, ಸೋಮಣ್ಣ ಹಡಪದ, ವೀರಣ್ಣ ಹಡಪದ, ಮಲ್ಲಿಕಾರ್ಜುನ ಹಡಪದ, ಬಸವರಾಜ ಹಡಪದ, ಡಿ.ಬಿ. ಹಳ್ಳಿಕೇರಿ, ಬಸನಗೌಡ ಪಾಟೀಲ, ಶಿವಮೂರ್ತಿ ಹಡಪದ, ವೀರಣ್ಣಯ್ಯ ಯಳವತ್ತಿ, ಎಸ್.ಪಿ. ಡೋಣಗಿರಿ, ಶಾಂತವೀರನಗೌಡ ಹೊಸಮನಿ, ಮಾಳಪ್ಪ ಜೋಡಿ, ರಾಚಪ್ಪ ಗಾಳಪ್ಪನವರ, ಹಾಲಪ್ಪ ಓಲೆ, ಹಾವೇರಿ ಜಿಲ್ಲಾಧ್ಯಕ್ಷ ಬಸವರಾಜ ದೊಡ್ಡಮನಿ, ಕರ್ಜಗಿ ಗ್ರಾಪಂ ಅಧ್ಯಕ್ಷ ಶಿವುಕುಮಾರ ಕಾಯಕದ, ಶಿವಾನಂದ ಹಡಪದ ಇದ್ದರು. ಸಂಗೀತಾ ಹಡಪದ ಪ್ರಾರ್ಥಿಸಿದರು. ಶೇಖಪ್ಪ ಮುಂಡವಾಡ ಸ್ವಾಗತಿಸಿದರು. ಗೌರಿ ಹಡಪದ ನಿರೂಪಿಸಿದರು. ಕಲ್ಲಪ್ಪ ಹಡಪದ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.