ಶಿಕ್ಷಣ ಕ್ರಾಂತಿ ಅವಶ್ಯಕ: ಗವಿಸಿದ್ದಯ್ಯ ಹಳ್ಳಿಕೇರಿಮಠ
ಮುಂಡರಗಿ: ಪುಸ್ತಕಗಳು ಮನುಕುಲದ ಸರ್ವತೋಮುಖ ಏಳಿಗೆಯನ್ನು ಬಯಿಸಬಲ್ಲ ಆಯುಧಗಳು. ಗ್ರಾಮ ಸ್ವರಾಜ್ಯವಾಗಬೇಕಾದರೆ ಶಿಕ್ಷಣದ ಕ್ರಾಂತಿ ಅವಶ್ಯಕ ಎಂದು ಯುವಸಾಧಕ ರತ್ನ ಪ್ರಶಸ್ತಿ ವಿಜೇತ ಗವಿಸಿದ್ದಯ್ಯ ಹಳ್ಳಿಕೇರಿಮಠ ಹೇಳಿದರು. ಅವರು ಈಚೆಗೆ ಪಟ್ಟಣದ ಬೃಂದಾವನ ವೃತ್ತದಲ್ಲಿರುವ ನೋಬೆಲ್ ಸ್ಪೋಕನ್ ಇಂಗ್ಲಿಷ್ ಇನ್ಸ್ಸ್ಟಿಟ್ಯೂಟ್ನಲ್ಲಿ ಹಲವು ಸಂಘ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ದಿನಾಚರಣೆ ಪ್ರಯುಕ್ತ ವ್ಯಕ್ತಿತ್ವ ವಿಕಸನ ಹಾಗೂ ಪುಸ್ತಕ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಕರಾಟೆ ತರಬೇತಿದಾರರಾದ ನಿರ್ಮಲಾ ತರವಾಡೆ, ತಾಯಪ್ಪ ತಳವಾರ ಮಾತನಾಡಿದರು. ಚಂದನ ನಗರ ಗ್ರಾಮೀಣ ಶಿಕ್ಷಣ ಅಭಿವೃದ್ಧಿ ಸಂಸ್ಥೆಯ ಯುವರಾಜ ರಾಮೇನಹಳ್ಳಿ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸಿದರು. ಮಂಜುನಾಥ ಅಳವಂಡಿ, ಹುಲಗಪ್ಪ ಸಲಗಾರ, ಬಸಪ್ಪ ರಯಾವಣಕಿ, ಬಸವರಾಜ ಕಲಕೇರಿ, ಶೃತಿ ಬಾರಕೇರ, ಅಶ್ವಿನಿ ಪೂಜಾರ, ಶಿಲ್ಪಾ ಕುರಿ ಇದ್ದರು.
ಎಸ್ಎಫ್ಐ ಕಾರ್ಯಕರ್ತರ ಬಂಧನ ವಿರೋಧಿಸಿ ಧರಣಿ
ಗಜೇಂದ್ರಗಡ: ಬೆಂಗಳೂರು ವಿಶ್ವವಿದ್ಯಾನಿಲಯದ ಹಲವು ಬೇಡಿಕೆ ಈಡೇರಿಕೆಗಾಗಿ ನಡೆಸಿದ ಪ್ರತಿಭಟನಾ ನಿರತ ಎಸ್ಎಫ್ಐ ಕಾರ್ಯಕರ್ತರ ಬಂಧನ ಖಂಡಿಸಿ ಸ್ಥಳೀಯ ಎಸ್ಎಫ್ಐ ಕಾರ್ಯಕರ್ತರು ಶನಿವಾರ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಗರ ಘಟಕಾಧ್ಯಕ್ಷ ಬಾಲಕೃಷ್ಣ ಜಾಡಬಂದಿ ಮಾತನಾಡಿ, ಬೆಂಗಳೂರು ವಿವಿ ಪದವಿ ಮತ್ತು ಉನ್ನತ ಸ್ನಾತಕೋತ್ತರ ಪದವಿ ಓಟಿಸಿ ವಿದ್ಯಾರ್ಥಿಗಳ ಶುಲ್ಕ ರಿಯಾಯತಿ ಹಣ ಕೊಡಬೇಕು ಎಂದು ಸಿಂಡಿಕೇಟ್ ಸಭೆಗೆ ಮುತ್ತಿಗೆ ಹಾಕಿದ ಎಸ್ಎಫ್ಐ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿರುವ ಜತೆ ಬಂಧಿಸಿರುವುದನ್ನು ಎಸ್ಎಫ್ಐ ಖಂಡಿಸುತ್ತಿದೆ. ಎಸ್ಎಫ್ಐ ಕಾರ್ಯಕರ್ತರನ್ನು ಬಿಡುಗಡೆ ಮಾಡಬೇಕು ಎಂದರು. ಮಾನಪ್ಪ ರಾಠೋಡ, ಸಂತೋಷ ಮಾಳೋತ್ತರ, ಮಂಜುನಾಥ ಉಕ್ಕಿಸಲ, ಮಂಜುನಾಥ ಪಮ್ಮಾರ, ಮುತ್ತು ಮುತಾಲಿ, ಚಂದ್ರು ಮಲ್ಲಾಪುರ, ಸುರೇಶ ನಿಲೂಗಲ್ ಇತರರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

