ಗದಗ

ಅಕ್ರಮ ಮರಳು ಸಾಗಾಟ: ಮನವಿ

Published On :

ಮುಂಡರಗಿ: ತಾಲೂಕಿನ ಗಂಗಾಪುರ ಗ್ರಾಮಸ್ಥರು ಶನಿವಾರ ಗ್ರಾಮದ ಸುತ್ತಲೂ ಅಕ್ರಮ ಮರಳು ಸಾಗಾಣಿಕೆ ತಡೆಯಲು ತಾಲೂಕು ಆಡಳಿತ ಮತ್ತು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಕಳೆದ ಅನೇಕ ತಿಂಗಳುಗಳಿಂದ ಗಂಗಾಪುರ ಭಾಗದಲ್ಲಿ ತುಂಗಭದ್ರಾ ನದಿ ತೀರದಿಂದ ನಿರಂತರ ಅಕ್ರಮ ಮರಳು ಸಾಗಾಟ ನಡೆದಿದೆ. ಇದು ಗ್ರಾಮದ ಜನರ ನೆಮ್ಮದಿ ಹಾಳು ಮಾಡಿದೆ. ಇದರಿಂದಾಗಿ ಇಲ್ಲಿಯ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು ಆದ್ದರಿಂದ ಇದಕ್ಕೆ ಅಧಿಕಾರಿಗಳು ಕಡಿವಾಣ ಹಾಕಲು ಮುಂದಾಗುವುದು ಅನಿವಾರ್ಯವಾಗಿದೆ.
ಅಧಿಕಾರಿಗಳು ಭೇಟಿ ಕೊಟ್ಟಾಗ ಮಾತ್ರ ಮರಳು ಸಾಗಾಟ ಸ್ವಲ್ಪದಿನ ನಿಲ್ಲುತ್ತದೆ. ನಂತರ ಯಥಾಪ್ರಕಾರ ನಡೆಯುತ್ತದೆ. ಒಂದುವೇಳೆ ಗ್ರಾಮಸ್ಥರು ಅಕ್ರಮ ಮರಳು ತಡೆಯಲು ಮುಂದಾದಲ್ಲಿ ಗ್ರಾಮಸ್ಥರ ಮೇಲೆ ಹಲ್ಲೆಗೆ ಮುಂದಾಗಿರುವ ಘಟನೆಗಳೂ ಜರುಗಿವೆ. ಹೀಗಾಗಿ ತುರ್ತು ಕ್ರಮ ಜರುಗಿಸದಿದ್ದರೆ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದರು. ತಹಸೀಲ್ದಾರ್ ಮನವಿ ಸ್ವೀಕರಿಸಿ ಕ್ರಮ ಜರುಗಿಸುವ ಭರವಸೆ ನೀಡಿದರು. ರಂಗಪ್ಪ ದಾಸರ, ನಾಗಪ್ಪ ಹಳ್ಳಿಕೇರಿ, ಈಶಪ್ಪ ಕೊರ್ಲಹಳ್ಳಿ, ಸಿಂಗಟಾಲೂರು ಗ್ರಾಪಂ ಸದಸ್ಯ ಶಿವಪ್ಪ ಬಂಡಿ, ವೆಂಕಟೇಶಪ್ಪ ದಾಸರ, ಶಿವಯ್ಯ ಹಿರೇಮಠ, ಹನುಮಪ್ಪ ಹಳ್ಳಿಕೇರಿ, ರುದ್ರಪ್ಪ ಬಂಡಿ ಸೇರಿದಂತೆ ಇತರರು ಇದ್ದರು.


ಇಂದು ಆರೋಗ್ಯ ತಪಾಸಣೆ
ಗದಗ: ನಗರದ ಉಸಗಿನಗಟ್ಟಿಯ ಗಂಜಿ ಬಸವೇಶ್ವರ 52ನೇ ಜಾತ್ರಾ ಮಹೋತ್ಸವ ಏ. 28 ರಿಂದ ಮೇ 3ರ ವರೆಗೆ ಜರುಗಲಿವೆ. ಏ. 28 ರಂದು ಬೆಳಗ್ಗೆ 8.30ಕ್ಕೆ ನಗರಸಭೆಯ ಅಧ್ಯಕ್ಷೆ ರುದ್ರಮ್ಮ ನಂದಿ ಧ್ವಜಾರೋಹಣ ನೆರವೇರಿಸುವರು. ನಂತರ ಶಿದ್ರಾಮಪ್ಪ ಹುಂಬಿ ಮನೆಯಿಂದ ತೇರಿನ ಕಳಸದ ಮೆರವಣಿಗೆ ಸಾಗಿ, ಬಸನಗೌಡ ಪಾಟೀಲ್ ಕಳಸಾರೋಹಣ ನೆರವೇರಿಸುವರು. ನವೀಕೃತಗೊಂಡ ಗಂಜೀ ಬಸವೇಶ್ವರ ದೇವಸ್ಥಾನವನ್ನು ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಉದ್ಘಾಟಿಸುವರು. ನಂತರ ಅನ್ನಸಂತರ್ಪಣೆ ನಡೆಯಲಿದೆ. ಏ. 30ರಂದು ಬೆಳಗ್ಗೆ 10.30ಕ್ಕೆ ಬಸವ ಮಂಟಪದಲ್ಲಿ ಆರೋಗ್ಯ ಉಚಿತ ತಪಾಸಣೆ, ಔಷಧ ವಿತರಣಾ ಶಿಬಿರ ನಡೆಯಲಿದೆ. ಡಾ. ಎಸ್ಆರ್. ಹಿರೇಮಠ, ಡಾ. ಕಲ್ಲೇಶ ಮೂರಶಿಳ್ಳಿನ ತಪಾಸಣೆ ನಡೆಸುವರು. ಬೆಳಗ್ಗೆ 11ರಿಂದ ಸಂಜೆ 5ರ ವರೆಗೆ ಹೊಂಬಳ ರಸ್ತೆ ಬಸವೇಶ್ವರ ದೇವಸ್ಥಾನದ ಹತ್ತಿರ ರೈತ ಬಾಂಧವರಿಂದ ಖಾಲಿ ಗಾಡಾ (ಚಕ್ಕಡಿ) ಓಡಿಸುವ ಸ್ಪರ್ಧೆ ನಡೆಯಲಿದೆ.
ಇಂದು ವಾರ್ಷಿಕೋತ್ಸವ ಸಭೆ
ಗದಗ: ತಾಲೂಕಿನ ಮಲ್ಲಸಮುದ್ರ ಗ್ರಾಮದ ತ್ರಿಮೂರ್ತಿ ಜಿನಮಂದಿರದ ದ್ವಿತೀಯ ವಾರ್ಷಿಕೋತ್ಸವ ಏ. 28 ರಂದು ಬೆಳಗ್ಗೆ 9ಕ್ಕೆ ಜರುಗಲಿದೆ. ನಂತರದ ಧರ್ಮ ಸಭೆಯ ಸಾನ್ನಿಧ್ಯ ಬಾಲಬ್ರಹ್ಮಚಾರಿ ಸೋಮದೇವ ಭಯ್ಯಾಜಿ ವಹಿಸುವರು. ಬಿ.ಎಸ್. ನಾವಳ್ಳಿ, ಜಯಪಾಲ ಕಬಾಡರ, ವೈ.ಬಿ. ಹೊಸೂರ, ವಿಜಯಕುಮಾರ ಅಣ್ಣಿಗೇರಿ, ಅಜಿತ ಪಿಡ್ಡಿ, ರಾಮಚಂದ್ರ ಜೈನರ, ಸಕ್ರಪ್ಪ ಹೊಸೂರ, ರವಿ ಹೊಸೂರ ಆಗಮಿಸುವರು. ಪಿ.ಎನ್. ಅಲ್ಲಯ್ಯನವರ ಉಪನ್ಯಾಸ ನೀಡುವರು. ಪಿ.ಎಸ್. ಧರಣೆಪ್ಪನವರ, ಫಕ್ಕೀರಪ್ಪ ಹಂಸಿ, ನಾಗರತ್ನ ನಾವಳ್ಳಿ, ಡಾ. ಕೆ.ಡಿ. ಪಾಟೀಲ್, ಎನ್.ಡಿ. ಪಾಟೀಲ್ರನ್ನು ಸನ್ಮಾನಿಸಲಾಗುವುದು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.