ಸೃಜನಶೀಲತೆ ಶಿಬಿರಗಳು ಅಗತ್ಯ
ಗದಗ: ಮಕ್ಕಳ ಮನಸ್ಸು ಸಂತೋಷವಾಗಿರಲು ಬೇಸಿಗೆ ಶಿಬಿರಗಳು ಸಹಾಯಕಾರಿಯಾಗಿದ್ದು, ಮಕ್ಕಳಲ್ಲಿ ಸೃಜನಶೀಲತೆ ಬೆಳೆದು ಬರಲು ಬೇಸಿಗೆ ಶಿಬಿರಗಳು ಸಹಕಾರಿ ಎಂದು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣ ವರವಿ ಹೇಳಿದರು.
ಅವರು ಶನಿವಾರ ನಗರದ ರಾಜೇಶ್ವರಿ ಕಲಾ ಕುಟೀರದ ಸಹಯೋಗದಲ್ಲಿ ಇನ್ನರ್ ವ್ಹೀಲ್ ಕ್ಲಬ್ 1 ವಾರಗಳ ಕಾಲ ನಡೆಸಿದ ಬೇಸಿಗೆ ಉಚಿತ ಶಿಬಿರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳು ಕಾಗದದಿಂದ ತಯಾರಿಸಿದ ಹಲವು ಪ್ರಾಣಿಗಳ ಮುಖವಾಡ, ಸುಂದರವಾದ ಹೂ ಗುಚ್ಚ್ ಹಾಗೂ ಹಲವಾರು ವಸ್ತುಗಳ ರಚನೆಗಳು ಖುಶಿ ತಂದಿವೆ ಎಂದರು.
ಶಾಂತಾ ನಿಂಬಣ್ಣವರ, ಕವಿತಾ ದಂಡಿನ, ರಾಜೇಶ್ವರಿ ಕಲಾ ಕುಟೀರ ವ್ಯವಸ್ಥಾಪಕ ಗಜಾನನ ವೇರ್ಣೇಕರ ಹಾಗೂ ಮಾಲಾ, ರತ್ನಾ, ಸಂತೋಷ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಂತಾ ಮುಂದಿನಮನಿ, ವಿದ್ಯಾ ಸುಡಿಶೆಟ್ಟರ್ ಮುಂತಾದವರು ಉಪಸ್ಥಿತರಿದ್ದರು. ಸುಮಾ ಪಾಟೀಲ್ ಪ್ರಾರ್ಥಿಸಿದರು. ಸುವರ್ಣ ವಸ್ತ್ರದ ನಿರ್ವಹಿಸಿದರು. ಸುಲೋಚನಾ ಐಹೊಳೆ ವಂದಿಸಿದರು.
ಚಿಣ್ಣರ ಅಂಗಳ: ಇಂದು ಚಿಣ್ಣರೊಂದಿಗೆ ನಾವು
ಗದಗ: ಗದಗ, ಬೆಟಗೇರಿ ಇನ್ನರ್ ವ್ಹೀಲ್ ಕ್ಲಬ್ ಹಾಗೂ ಗದಗ ಬಸವೇಶ್ವರ ನಗರದ ಸರ್ಕಾರಿ ಶಾಲೆ ನಂ. 4ರ ಸಂಯುಕ್ತ ಆಶ್ರಯದಲ್ಲಿ ಏ. 28 ರಂದು ಬೆಳಗ್ಗೆ 11 ಕ್ಕೆ ಶಾಲೆಯ ಆವರಣದಲ್ಲಿ ಚಿಣ್ಣರ ಅಂಗಳ ಕೇಂದ್ರದಲ್ಲಿ ಚಿಣ್ಣರರೊಂದಿಗೆ ನಾವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗದಗ, ಬೆಟಗೇರಿ ಇನ್ನರ್ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಗದಗ ಗ್ರಾಮೀಣ ಸಮೂಹ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವಿ.ವಿ. ನಡುವಿನಮನಿ, ವೈ.ಎ. ಕವಳಿ, ಪಿ.ಎಲ್. ರಾಠೋಡ, ಗದಗ ಶಹರ ಬಿಆರ್ಪಿ ಪಿಡಿ ಮಂಗಳೂರ, ಸಿಆರ್ಪಿ ಜಯಶ್ರೀ ಶ್ರೀಗಿರಿ, ರತ್ನಕ್ಕ ಪಾಟೀಲ್, ಚಿಣ್ಣರ ಅಂಗಳದ ಮೇಲ್ವಿಚಾರಕ ಎಸ್.ಕೆ. ಮಂಗಳಗುಡ್ಡ ಆಗಮಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

