ಗದಗ

ಬಾಬಾ ರಾಮದೇವ್ ಮೇಲೆ ಕ್ರಮಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯಿಂದ ತಹಸೀಲ್ದಾರ್ಗೆ ಮನವಿ

Published On :

ರೋಣ: ರಾಹುಲ್ ಗಾಂಧಿ ಅವರು ದಲಿತರ ಮನೆಗೆ ಪಿಕ್ನಿಕ್, ಹನಿಮೂನ್ಗೆ ಹೋಗುತ್ತಾರೆ ಎಂದು ಯೋಗಗುರು ಬಾಬಾ ರಾಮದೇವ್ ಅವರು ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ಮಂಗಳವಾರ ತಾಲೂಕು ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆಗಳು ರಾಮದೇವ್ ಪ್ರತಿಕೃತಿ ದಹಿಸಿ ಪ್ರತಿಭಟಿಸಿದರು.
ದಸಸಂ ಪದಾಧಿಕಾರಿಗಳು ಪಟ್ಟಣದ ಸೂಡಿ ವೃತ್ತದಲ್ಲಿ ರಾಜ್ಯ ಹೆದ್ದಾರಿ ತಡೆದು ಮಾನವ ಸರಪಳಿ ನಿರ್ಮಿಸಿ ರಾಮದೇವ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, ಬಾಬಾರಾಮದೇವ್ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ, ಘೋಷಣೆ ಕೂಗಿದರು. ಬಳಿಕ ಪ್ರತಿಕೃತಿ ಹಾಗೂ ಟೈರ್ಗೆ ಬೆಂಕಿ ಹಚ್ಚಿದರು. ಪ್ರತಿಭಟನೆಯಿಂದಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ದಸಂಸ ಮುಖಂ ಡ ಮೌನೇಶ ಹಾದಿಮನಿ, ಪುರಸಭೆ ಸದಸ್ಯ ಮಂಜುನಾಥ ಹಾಳಕೇರಿ, ದಸಂಸ ಸಂಚಾಲಕ ಪ್ರಕಾಶ ಹೊಸಳ್ಳಿ ಮಾತನಾಡಿ, ದಲಿತ ಸಮುದಾಯವನ್ನು ಅವಮಾನಿಸುವ ಹೇಳಿಕೆ ನೀಡಿದ ರಾಮದೇವ್ನನ್ನು ದೇಶ ಬಿಟ್ಟು ಓಡಿಸಬೇಕು. ಸರ್ಕಾರ ಕಾನೂನಿನಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಹೇಮಂತ ಕಡಿಯವರ, ಪರಸಪ್ಪ ಪೂಜಾರ, ಮಲ್ಲು ಮಾದರ, ದೇವೇಂದ್ರಪ್ಪ ಕೊಳ್ಳಪ್ಪನವರ, ಬಾಲಪ್ಪ ಮಾದರ, ಮಂಜು ದೊಡ್ಡಮನಿ, ಸೋಮನಾಥ ಚಲವಾದಿ, ಸುರೇಶ ನಡುವಿನಮನಿ, ನಿಂಗಪ್ಪ ಮಾದರ, ಮಹಾದೇವ ಮುಂದಿನಮನಿ, ಸಂಜಯ ದೊಡ್ಡಮನಿ, ದುರಗಪ್ಪ ಬಂಡಿವಡ್ಡರ, ಈರಪ್ಪ ಮಾದರ, ಮುತ್ತಪ್ಪ ಜೋಗಣ್ಣವರ, ಹಿರಿಯಪ್ಪ ಹಲಗಿ, ನಿಂಗಪ್ಪ ಮುಂದಿನಮನಿ, ಬಾಳಪ್ಪ ಬುರಡಿ ಇದ್ದರು.



ಪೇಜಾವರ ಶ್ರೀಗಳಿಂದಲೂ ಅವಮಾನ
ಉಡುಪಿ ಶ್ರೀಕೃಷ್ಣ ಮಠದಲ್ಲಿ ಫಂಕ್ತಿ ಭೋಜನಕ್ಕೆ ಬಂಟರ ಸಮುದಾಯದ (ದಲಿತ) ಮಹಿಳೆಗೆ ಅವಕಾಶ ನೀಡದೇ ಅವಮಾನಿಸಿದ ಪೇಜಾವರ ಶ್ರೀಗಳ ವರ್ತನೆ ಖಂಡನಾರ್ಹವಾಗಿದೆ. ದಲಿತರನ್ನು ಅಸ್ಪೃಶ್ಯರಂತೆ ಕಾಣದೇ ಸಮಾನವಾಗಿ ಕಾಣಬೇಕು ಎಂದು ಹೇಳಿತ್ತಿದ್ದವರು ಶ್ರೀಗಳು ಈ ರೀತಿ ಬಂಟರ ಸಮುದಾಯದ ಮಹಿಳೆಯನ್ನು ಸಹಪಂಕ್ತಿ ಭೋಜನಕ್ಕೆ ಕುಳಿತುಕೊಳ್ಳದಂತೆ ತಡೆದು ಅವಮಾನಿಸಿರುವುದರ ಉದ್ದೇಶವಾದರು ಏನು? ಪೇಜಾವರ ಶ್ರೀಗಳ ಈ ವರ್ತನೆಯನ್ನು ತಾಲೂಕು ದಲಿತ ಸಮುದಾಯ ತೀವ್ರವಾಗಿ ಖಂಡಿಸುತ್ತದೆ.
-ಮೌನೇಶ ಹಾದಿಮನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.