ಗದಗ

ವೀರಭದ್ರೇಶ್ವರ ಅಗ್ನಿ ಮಹೋತ್ಸವ

Published On :

ಶಿರಹಟ್ಟಿ: ಹರಿವ ಹಾವಿನ ಗಂದ. ಉರಿವ ಕಿಚ್ಚಿನ ಗಂದ. ಕದನ ಪ್ರಚಂಡ. ಮೂರು ಲೋಕದ ಗಂದ ಶ್ರೀ ವೀರಭದ್ರೇಶ್ವರನೇ ಬಹುಪರಾಕ್. ಹೀಗೆ ಇನ್ನೂ ಅನೇಕ ವೀರಭದ್ರೇಶ್ವರನ ಪರಾಕುಗಳನ್ನು ಹೇಳುತ್ತಾ ನೆರೆದಿದ್ದ ಅಸಂಖ್ಯಾತ ಭಕ್ತರು ಭಕ್ತಿಯ ಪರವಶದಲ್ಲಿ ತಮ್ನನ್ನೇ ತಾವು ಮರೆತು ಪರಮಾತ್ಮನ ಸಾಕ್ಷಾತ್ಕಾರಕ್ಕೆ ಸಾಕ್ಷಿಯಾದರು.
ಶನಿವಾರ ಮಾಗಡಿ ಗ್ರಾಮದಲ್ಲಿ ಜರುಗಿದ ವೀರಭದ್ರೇಶ್ವರ ಅಗ್ನಿ ಮಹೋತ್ಸವ ಸಡಗರ, ಸಂಭ್ರಮದ ನಡುವೆ ಹರಹರ ಮಹಾದೇವ ಎಂಬ ಜಯಘೋಷಣೆ ಮುಗಿಲು ಮುಟ್ಟುವ ಹಾಗೆ ಭಕ್ತರ ಹರ್ಷೋದ್ಗಾರದ ನಡುವೆ ವೀರ ಪುರವಂತರು ಮತ್ತು ಭಕ್ತರು ಅಗ್ನಿ ಹಾಯುವ ಮೂಲಕ ವೀರಭದ್ರೇಶ್ವರನ ಕೃಪೆಗೆ ಪಾತ್ರರಾದರು. ಇದಕ್ಕೂ ಮೊದಲು ಬೆಳಗ್ಗೆ 5 ಗಂಟೆಗೆ ದೇವರಿಗೆ ರುದ್ರಾಭಿಷೇಕ. ಆನಂತರ ವೀರಗಾಸೆ. ಪೂಜೆ ಕಟ್ಟುವ ಕಾರ್ಯ ನಡೆಯಿತು. 8-30ಕ್ಕೆ ಅಗ್ನಿ ಕುಂಡಕ್ಕೆ ಎಡೆ ತಂದು ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿಯ ಮೆರವಣಿಗೆಯೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಇದರಲ್ಲಿ ವಿಶೇಷ ಅಲಂಕೃತಗೊಂಡಿದ್ದ ಪರಮಾತ್ಮ. ವೀರಭದ್ರ. ದಕ್ಷಭ್ರಹ್ಮ, ನಾರದ, ನಂದಿ ಮೊದಲಾದವರು ಪ್ರಮುಖ ಆಕರ್ಷಣೆಗಳಾಗಿದ್ದರು.
ಪುರವಂತರು ವೀರಭದ್ರನ ಜನನ ಮತ್ತು ದಕ್ಷಬಹ್ರ್ಮನನ್ನು ಸಂಹಾರ ಮಾಡಿದ ಸನ್ನಿವೇಶವನ್ನು ವಚನಗಳ ಮೂಲಕ ನೆರೆದ ಭಕ್ತ ಸಮೂಹಕ್ಕೆ ತಮ್ಮದೇ ಆದ ವೀರತೆಯ ಪ್ರತೀಕದಿಂದ ಯುದ್ಧ ಸನ್ನಿವೇಶಗಳಲ್ಲಿ ವೀರಭದ್ರನ ಆರ್ಭಟವನ್ನು ನಾಟ್ಯಗಳ ಮೂಲಕ  ತೋರಿಸಿದರು. ಅನೇಕ ಶಸ್ತ್ರ ಪವಾಡಗಳು ನಡೆದವು. ಇದರ ಜತೆ ಸಮ್ಮಾಳಗಳ ನೀನಾದ, ನಂದಿ ಧ್ವಜ ಕುಣಿತ ಮನಸೂರೆಗೊಂಡವು. ನಂತರ ಅನ್ನ ಸಂತರ್ಪಣೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.