ಸಂಘಟಿತ ಹೋರಾಟ: ಶಿಕ್ಷಕರಿಗೆ ಕರೆ
ಶಿರಹಟ್ಟಿ: ಶಿಕ್ಷಕರು ಮಕ್ಕಳ ಏಳ್ಗೆ ಬಯಸುವುದರೊಂದಿಗೆ ಸೌಲಭ್ಯಗಳನ್ನು ಪಡೆಯಲು ಸಂಘಟಿತ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ತಾಲೂಕು ಮಾಧ್ಯಮಿಕ ಶಾಲಾ ನೌಕರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಹೇಳಿದರು.
ಅವರು ಶನಿವಾರ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಜಗದ್ಗುರು ಫಕೀರ ಚನ್ನವೀರೇಶ್ವರ ಪ್ರೌಢಶಾಲೆಯಲ್ಲಿ ಕರೆಯಲಾಗಿದ್ದ ಸಂಘದ ಕಾರ್ಯಕಾರಿ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಕರು ಸೌಲಭ್ಯಗಳ ಮಾಹಿತಿಯನ್ನು ಅರಿತುಕೊಳ್ಳಬೇಕು. ಅದಕ್ಕಾಗಿ ಸದಾಕಾಲ ಸಂಘಗಳ ಜತೆ ಸಂಪರ್ಕದಲ್ಲಿರಬೇಕು. ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಹಲವಾರು ಹೋರಾಟಗಳಾಗಿದ್ದು, ಅವರ ಹೋರಾಟ ಇಂದು ಶಿಕ್ಷಕರ ನೆಮ್ಮದಿಯ ಬಾಳಿಗೆ ಕಾರಣವಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕರಿಗೆ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಲು ಸಲಹೆ ನೀಡಲಾಯಿತು. ಸರ್ಕಾರಿ ಶಾಲೆಗಳಲ್ಲಿ 8ನೇ ತರಗತಿ ಉನ್ನತೀಕರಿಸುವ ಕ್ರಮವನ್ನು ಕೈ ಬಿಡಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ವಿಷಯವಾರು ಕಾರ್ಯಾಗಾರ ಏರ್ಪಡಿಸಿ ಅನುಭವಿ ಶಿಕ್ಷಕರಿಂದ ಬೋಧನೆ ಮಾಡುವುದು, ಇಲಾಖೆಯಿಂದ ನಡೆಯುವ ಎಲ್ಲ ತರಬೇತಿಗಳಿಗೆ ಸರ್ಕಾರಿ, ಅನುದಾನಿತ ಶಿಕ್ಷರೆಂದು ಬೇರೆ ಬೇರೆ ಏರ್ಪಡಿಸದೇ ಎಲ್ಲರಿಗೂ ಸಮಾನವಾಗಿ ತರಬೇತಿ ನೀಡಬೇಕು ಎಂದು ಇಲಾಖೆಗೆ ಒತ್ತಾಯ ಮಾಡಲಾಯಿತು. ಆರ್.ಎಂ. ನವಲೆ, ಎನ್.ಎನ್. ನೆಗಳೂರ ಮಾತನಾಡಿದರು. ಎಸ್.ಎಲ್. ಮುಳಗುಂದ, ಎಂ.ಸಿ. ಜಕ್ಕಲಿ, ಎನ್.ಎಚ್. ದೊಡ್ಡಮನಿ, ಎನ್.ಬಿ. ನಿಚ್ಚಳದ, ಕೆ. ರವಿ, ಎಸ್.ಎಸ್. ಕಾಶಿಮಠ, ಎಸ್.ಬಿ. ಬೆಟಗೇರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

