ಗದಗ

ರಸ್ತೆಗಳ ದುಸ್ಥಿತಿ ನಿವಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿ: ಅಶ್ವಿನಿ

Published On :

ಗದಗ: ಗದಗ-ಬೆಟಗೇರಿ ನಗರದ ಪ್ರಮುಖ ರಸ್ತೆಗಳ ದುಸ್ಥಿತಿ ಹೇಳತೀರದಾಗಿದೆ. ರಸ್ತೆಗಳ ದುಸ್ಥಿತಿ ನಿವಾರಣೆಗೆ ಹಾಗೂ ರಾಣಿ ಚನ್ನಮ್ಮ ಪಕ್ಷ ಹೋರಾಟ ನಡೆಸುತ್ತಿರುವ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಕ್ರಮ ಜರುಗಿಸಬೇಕೆಂದು ಪಂ. ಪುಟ್ಟರಾಜ ವೃತ್ತಿರಂಗ ಭೂಮಿ ಕಲಾವಿದರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಅಶ್ವಿನಿ ನೇಸರಗಿ (ಹಿರೇಮಠ) ಒತ್ತಾಯಿಸಿದರು.
ಗದಗ-ಬೆಟಗೇರಿ ಅವಳಿನಗರಕ್ಕೆ ಮೂಲಭೂತ ಸೌಲಭ್ಯಕ್ಕಾಗಿ ಒತ್ತಾಯಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಳೆದ ಜ. 29ರಿಂದ ಆರಂಭಿಸಿರುವ ಸರದಿ ಉಪವಾಸ ಧರಣಿ ಹೋರಾಟ ಶಿಬಿರಕ್ಕೆ ಶನಿವಾರ ಭೇಟಿ ನೀಡಿ ಬೆಂಬಲ ಸೂಚಿಸಿ ಮಾತನಾಡಿದರು. ರಾಣಿ ಚನ್ನಮ್ಮ ಪಾರ್ಟಿ (ಆರ್ಸಿಪಿ) ಗದಗ ಬೆಟಗೇರಿ ನಗರದ ಸೇರಿದಂತೆ ಜಿಲ್ಲೆಯ ಅನೇಕ ಜ್ವಲಂತ ಸಮಸ್ಯೆಗಳ  ನಿವಾರಣೆಗೆ ಆಗ್ರಹಿಸಿ ಕೈಗೊಂಡಿರುವ ಹೋರಾಟಕ್ಕೆ ಜನತೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು. ಝಡ್.ಆರ್. ಬೇಲೇರಿ ಮಾತನಾಡಿ, ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ 1999ರಲ್ಲಿ 4667 ಬಡ ಜನತೆ ತುಂಬಿದ ರು. 25 ಲಕ್ಷಕ್ಕೆ ಬಡ್ಡಿ ಇಲ್ಲ. ನಿವೇಶನವೂ ಇಲ್ಲದೆ ಸಮಸ್ಯೆಯಾಗಿದ್ದು, ಸಮಸ್ಯೆಗೆ ತೆರೆ ಎಳೆಯಲು ಲೋಕಾಯುಕ್ತರಿಗೆ ದೂರು ನೀಡಿದರೂ ಜಿಲ್ಲಾಡಳಿತ ಕ್ರಮ ಕೈಗೊಂಡಿಲ್ಲ ಎಂದರು. ಭೀಷ್ಮ ಕೆರ ಹೂಳೆತ್ತಿಸಿ ಅಲ್ಲಿ ನೀರು ನಿಲ್ಲುವ ವ್ಯವಸ್ಥೆ ಮಾಡುವಲ್ಲಿ ಹಾಗೂ ಕೆರೆಯ ಸರ್ವಾಂಗೀಣ ಪ್ರಗತಿಯಾಗಬೇಕು. ಜಿಲ್ಲಾಡಳಿತ ಅನರ್ಹರು ಪಡೆದ ಬಿಪಿಎಲ್ ಕಾರ್ಡ್ ರದ್ದುಪಡಿಸಬೇಕು ಎಂದರು. ಎಂ.ಬಿ. ದೇಸಾಯಿ, ಸಂಗಪ್ಪ ಕೊಟ್ರಶೆಟ್ರ, ಶ್ರೀಕಾಂತ ಮಿಸ್ಕಿನ್, ಪಿ.ಎಸ್. ಖೋಡೆ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.