ರಸ್ತೆಯಲ್ಲಿ ಊಟ ಮಾಡಿ ಪ್ರತಿಭಟಿಸಿದ ರೈತರು
ಕನ್ನಡಪ್ರಭ ವಾರ್ತೆ, ನರಗುಂದ, ಫೆ. 3
ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಗೋವಿನ ಜೋಳ ಮಾರಾಟಕ್ಕೆ ತಂದು 10-12 ದಿನಗಳಾದರೂ ತೂಕವಾಗಿ ಅವುಗಳನ್ನು ಸಾಗಾಟ ಮಾಡುತ್ತಿಲ್ಲ. ಇದರಿಂದಾಗಿ ಮಾರಾಟವಾದ ಗೋವಿನಜೋಳದ ಹಣ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಸೋಮವಾರ ರೈತರು ಪಟ್ಟಣದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಟೈರ್ಗೆ ಬೆಂಕಿ ಹಚ್ಚಿ, ರಸ್ತೆಯಲ್ಲಿಯೇ ಊಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ಈ ತಾಲೂಕಿನ ರೈತ 3 ವರ್ಷದಿಂದ ಸರಿಯಾದ ಮಳೆ ಇಲ್ಲದೇ ಇರುವುದರಿಂದ ಇಲ್ಲಿನ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಈಚೆಗೆ ಸುರಿದ ಅಲ್ಪ ಮಳೆಯಿಂದಾಗಿ ರೈತರು ಗೋವಿನಜೋಳದ ಬೆಳೆಯನ್ನು ಬೆಳೆದಿದ್ದು, ಬಂದ ಫಸಲನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಿದ್ದಾರೆ. ಆದರೆ, ಮಾರಾಟ ಮಾಡಿದ ಗೋವಿನಜೋಳದ ಚೀಲಗಳು ಮಾರುಕಟ್ಟೆಯಲ್ಲಿಯೇ ಕೊಳೆಯುತ್ತಾ ಬಿದ್ದಿವೆ. ಈ ಕುರಿತು ಸಂಬಂಧಿಸಿದ ಎಪಿಎಂಸಿ ಅಧಿಕಾರಿಗಳಿಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈಗ ಸದ್ಯ 50 ಲಾರಿ ಲೋಡ್ ಗೋವಿನ ಜೋಳ ಸಾಗಾಣಿಕೆಯಾಗದೆ ಹಾಗೆಯೇ ಇವೆ. ಈ ಬೆಂಬಲ ಬೆಲೆ ಖರೀದಿ ಕೇಂದ್ರ ಪ್ರಾರಂಭವಾದಾಗಿನಿಂದ ಹಲವಾರು ಸಮಸ್ಯೆಗಳು ಇದ್ದರೂ ಇದರ ಬಗ್ಗೆ ಸ್ಥಳೀಯ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು, ಸರ್ಕಾರ ಎಳ್ಳಷ್ಟು ಗಮನ ಹರಸಿಲ್ಲ. ಇದು ರೈತ ವಿರೋಧಿ ಸರ್ಕಾರ ಎಂದು ಆರೋಪಿಸಿದರು.
ಗುರುನಗೌಡ ಪಾಟೀಲ, ಬಸವಣ್ಣೆಪ್ಪ ಸುಂಕದ, ಕಳಕಪ್ಪ ತೇಜಿ, ಪರಮೇಶ ಸಣ್ಣವಾಡಗಿ, ಸಿದ್ದಪ್ಪ ಮುಳಕಿ, ಶಂಕ್ರಪ್ಪ ಮುಳಕಿ, ಪರಮೇಶ ಶಿತೋಳಿ, ವಾಸು ಚವಾಣ, ಎಚ್.ಬಿ. ಜೋಗಿ, ಬಾಬಾ ಜಾಧವ, ಮೋಹನ ಹವಾಲ್ದಾರ್, ಶಂಭು ಚಕ್ರಸಾಲಿ, ಜಿ.ವೈ. ಮುಲ್ಲಾ, ಎಸ್.ಎಸ್. ಮುಲಕಿ, ಎಪಿಎಂಸಿ ಸದಸ್ಯ ಪರಶುರಾಮ ಜಂಬಗಿ, ಆರ್.ಎಸ್. ರಾಚನಗೌಡರ, ಬಸವರಡ್ಡಿ ರಾಯರಡ್ಡಿ, ಶಿವಾಜಿ ಭೋಸ್ಲೆ, ಹನುಮಂತ ಹಳೇಮನಿ, ಚನ್ನ ನಂದಿ, ರುದ್ರಪ್ಪ ಗಾಣಿಗೇರ, ಕಳಸಾ-ಬಂಡೂ ರಿ ಜಿಲ್ಲಾ ಅಧ್ಯಕ್ಷ ಬಸಣ್ಣಯ್ಯ ಹಿರೇಮಠ, ಪಿ.ಎ. ಕಟಿಗಿ, ಸಂಗಪ್ಪ ಕೋರಿ, ವೆಂಕಪ್ಪ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

