11ಕ್ಕೆ ಗಾಯತ್ರಿ ಮೂರ್ತಿ ಪ್ರತಿಷ್ಠಾಪನೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಫೆ. 3
ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ತಡಸ ಕ್ರಾಸ್ನಲ್ಲಿರುವ ಶ್ರೀ ಗಾಯತ್ರಿ ತಪೋಭೂಮಿಯಲ್ಲಿ ಶ್ರೀ ಗಾಯತ್ರಿ ಮೂರ್ತಿ ಪ್ರತಿಷ್ಠಾಪನೆಯ 14ನೇ ವಾರ್ಷಿಕೋತ್ಸವ ಸಮಾರಂಭ ಫೆ. 11 ಮತ್ತು 12ರಂದು ನಡೆಯಲಿದೆ.
ಫೆ. 11ರಂದು ಬೆಳಗಿನಜಾವ 4ಕ್ಕೆ ಮಹಾಪೂಜಾ ಮತ್ತು ಕಾಕಡಾರತಿ, 8ಕ್ಕೆ ಗಣ ಹೋಮ, ಗಾಯತ್ರಿ ಹೋಮ, ಸುಬ್ರಹ್ಮಣ್ಯ ಹೋಮ, ಅನ್ನಪೂರ್ಣ ಹೋಮಗಳ ಪ್ರಾರಂಭ, ಮಧ್ಯಾಹ್ನ 12ಕ್ಕೆ ವಿಶೇಷ ಅಭಿಷೇಕ, ಮಹಾ ನೈವೇದ್ಯ ಮತ್ತು ಆರತಿ, ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ವಿತರಣೆ ನಡೆಯುವುದು.
ಮಧ್ಯಾಹ್ನ 3ಕ್ಕೆ ಉಪನ್ಯಾಸ, 4ಗಂಟೆಗೆ ವಿವಿಧ ಸ್ವಾಮೀಜಿಗಳಿಂದ ಸತ್ಸಂಗ, ನಂತರ ದೀಪೋತ್ಸವ, ಪಾಲಕಿ ಸೇವೆ, ಅಷ್ಟಾವಧಾನ, ಸಂಗೀತ ಸೇವೆ ಜರುಗುವುದು.
ಫೆ. 12ರಂದು ಬೆಳಗಿನಜಾವ 4.30ಕ್ಕೆ ಉಷಃಕಾಲ ಪೂಜೆ, ಬೆಳಗಿನ ಆರತಿ, 7.30ಕ್ಕೆ ಶ್ರೀ ಬಾಲಕೃಷ್ಣಾನಂದ ಸರಸ್ವತಿ ಯತಿಗಳಿಂದ ವಿಶೇಷ ಅಭಿಷೇಕ, 10.30ಕ್ಕೆ ಹವನಗಳ ಪೂರ್ಣಾಹುತಿ ಹಾಗೂ ಪಾದ ಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪ್ರಸಾದ ವಿತರಣೆ ನಡೆಯುವುದು.
ಜಗದ್ಗುರು ಶ್ರೀ ಕೂಡಲಿ ಶೃಂಗೇರಿ ಮಹಾಸ್ವಾಮೀಜಿ ವಿಶೇಷ ಸಾನ್ನಿಧ್ಯ ವಹಿಸುವರು. ಶಿರಹಟ್ಟಿ ಸಂಸ್ಥಾನ ಮಠದ ಜಗದ್ಗುರು ಶ್ರೀ ಫಕೀರ ಸಿದ್ಧರಾಮ ಸ್ವಾಮೀಜಿ, ಹಿಮಾಲಯದ ಶ್ರೇಷ್ಠ ಸಂತರಾದ ಋಷಿಕೇಷದ ಓಂಕಾರನಂದ ಮಠದ ಅಧ್ಯಕ್ಷ ಶ್ರೀ ವಿಶ್ವೇಶ್ವರಾನಂದ ಸ್ವಾಮೀಜಿ, ಉತ್ತರ ಕಾಶಿಯ ಗಣೇಶಪುರದ ಶಿವಾನಂದ ಆಶ್ರಮದ ಶ್ರೀ ಪ್ರೇಮಾನಂದ ಸರಸ್ವತಿ ಮಹಾರಾಜರು, ಶ್ರೀ ರಾಮಸ್ವರೂಪಾನಂದ ಮಹಾರಾಜರು, ಶ್ರೀ ಗಂಭೀರಾನಂದ ಸರಸ್ವತಿ ಸ್ವಾಮೀಜಿ, ಬದರಿ ಧಾಮದ ಶ್ರೀ ಧರಣಿದಾಸ ಮಹಾರಾಜರು, ಋಷಿಕೇಶದ ನಾರಾಯಣಾನಂದ ಸ್ವಾಮೀಜಿ, ಹುಬ್ಬಳ್ಳಿ ಪದ್ಮರಾಜನಗರದ ಅದ್ವೈತ ಆಶ್ರಮದ ಶ್ರೀ ಪ್ರಣವಾನಂದ ತೀರ್ಥ ಮಹಾರಾಜರು ಉಪಸ್ಥಿತರಿರುವರು.
ಗಾಯತ್ರಿ ತಪೋಭೂಮಿಯ ಶ್ರೀ ಗಾಯತ್ರಿ ಉಚಿತ ಆರೋಗ್ಯ ಕೇಂದ್ರದಲ್ಲಿ ಪ್ರತಿದಿನ ನೂರಾರು ರೋಗಿಗಳಿಗೆ ಉಚಿತ ತಪಾಸಣೆ ಹಾಗೂ ಔಷಧಿ ವಿತರಣೆ ನಡೆಯುತ್ತಿದೆ ವಾರ್ಷಿಕೋತ್ಸವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಫೆ. 9ರಂದು ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಫೆ. 10ರಂದು ಸಂಜೆ 5ಕ್ಕೆ ಕೊಳಲು ವಾದಕ ಪಂಡಿತ ಪ್ರವೀಣ ಗೋಡಖಿಂಡಿಯವರ ಕಾರ್ಯಕ್ರಮ, ಸಂಜೆ 6ಕ್ಕೆ ಸ್ಥಳ ಶುದ್ಧಿ, ಜಲ ಶುದ್ಧಿಗಾಗಿ ಉದಕ ಶಾಂತಿ ಮಂತ್ರ ಪಠಣ, ಸಂಜೆ 7ಕ್ಕೆ ಬೆಂಗಳೂರಿನ ವೇದಾಂತ ವಾರಿಧಿ ಕೆ.ಜಿ. ಸುಬ್ಬರಾಯಶರ್ಮಾರಿಂದ ಉಪನ್ಯಾಸ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

