ಕ್ರೂಸರ್ ಅಪಘಾತ: 15 ಜನರಿಗೆ ಗಾಯ
ರೋಣ: ಕ್ರೂಸರ್ ವಾಹನದ ಮುಂದಿನ ಟೈರ್ ಸ್ಫೋಟಗೊಂಡು ಚಾಲಕ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ವಾಹನದಲ್ಲಿದ್ದ 15 ಜನರಿಗೆ ಗಾಯಗಳಾದ ಘಟನೆ ತಾಲೂಕಿನ ಗಜೇಂದ್ರಗಡ ರಸ್ತೆಯ ಕಳಕಾಪುರ ಕ್ರಾಸ್ ಬಳಿ ಸೋಮವಾರ ರಾತ್ರಿ ಸಂಭವಿಸಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಬೊಮ್ಮನಗೊಂಡ ಗ್ರಾಮದವರೆಂದು ತಿಳಿದು ಬಂದಿದೆ. ಬೊಮ್ಮನಗೊಂಡದಿಂದ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡಕ್ಕೆ ದೇವಿ ದರ್ಶನಕ್ಕೆ ಹೊರಟಿದ್ದರು ಎನ್ನಲಾಗಿದೆ.
ರಭಸವಾಗಿ ನೀಲಗಿರಿ ಮರಕ್ಕೆ ಹೊಡೆದ ಪರಿಣಾಮವಾಗಿ ಗಿಡ ಮುರಿದು ವಾಹನದ ಮೇಲೆ ಬಿದ್ದಿದೆ. ವಾಹನದಲ್ಲಿ 6 ವರ್ಷದೊಳಗಿನ ಮಕ್ಕಳು ಸೇರಿ ಒಟ್ಟು 26 ಜನರಿದ್ದರು ಎಂದು ತಿಳಿದು ಬಂದಿದೆ. ಗಾಯಗೊಂಡ 15 ಜನರ ಪೈಕಿ, 6 ಜನರಿಗೆ ತೀವ್ರ ಗಾಯಗಳಾಗಿವೆ.
ಗಾಯಗೊಂಡವರನ್ನು ಮಲ್ಲಮ್ಮ ಕೋಟೆಕಲ್, ಯಲ್ಲಮ್ಮ ಕೋಟೆಕಲ್, ಹನುಮಂತರಾಯ ಕೋಟೆಕಲ್, ಹನುಮೇಶ ಕೋಟೆಕಲ್, ಸಾಯಿಕುಮಾರ ಕೋಟೆಕಲ್, ರಮೇಶ ಕೋಟೆಕಲ್, ಬೋಗಮ್ಮ ಕೋಟೆಕಲ್, ಮಲ್ಲಮ್ಮ ಕೋಟೆಕಲ್, ಮಲ್ಲಯ್ಯ ಕೋಟೆಕಲ್, ಶಿವರಾಜ ಕೋಟೆಕಲ್, ಜಯಮ್ಮ ಕೋಟೆಕಲ್, ಹನುಮಂತಿ ಕೋಟೆಕಲ್, ಶಿವರಾಜ ನಾಯಕ, ಗುಂಡಪ್ಪ ಕೋಟೆಕಲ್ ಎಂದು ಗುರುತಿಸಲಾಗಿದೆ.
ಗಾಯಗೊಂಡವರನ್ನು 108 ರಕ್ಷಾ ವಾಹನದ ಮೂಲಕ ಪಟ್ಟಣದ ಭಾರತರತ್ನ ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಸ್ಥಳಕ್ಕೆ ಗಜೇಂದ್ರಗಡ ಪಿಎಸ್ಐ ಎಚ್.ಆರ್.ನಡುಗಡ್ಡಿ ಭೇಟಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

