ಗದಗ

ಶಿರಸಂಗಿ ಲಿಂಗರಾಜರ ತ್ಯಾಗದ ಬದುಕು ಅನುಕರಣೀಯ

Published On :

ಗದಗ: ಕೆಎಲ್ಇ ಸಂಸ್ಥೆ ಹಾಗೂ ವೀರಶೈವ ಮಹಾಸಭೆಗಳು ಹೆಮ್ಮರವಾಗಿ ಬೆಳೆಯಲು ತ್ಯಾಗಮಯಿಯಾಗಿ ಜೀವನ ನಡೆಸಿದ ತ್ಯಾಗವೀರ ಶಿರಸಂಗಿ ಲಿಂಗರಾಜರ ತ್ಯಾಗ ಸ್ಮರಣಾರ್ಹವಾಗಿದೆ ಎಂದು ಮುಂಡರಗಿಯ ಕೆ.ಆರ್. ಬೆಲ್ಲದ ಮಹಾವಿದ್ಯಾಲಯದ ಪ್ರಾಧ್ಯಾಪಕ ಆರ್.ಎಲ್. ಪೊಲೀಸ್ಪಾಟೀಲ ಹೇಳಿದರು.
ಅವರು ನಗರದ ಬಸವೇಶ್ವರ ಮಹಾವಿದ್ಯಾಲಯದಲ್ಲಿ ಗದಗ ಜಿಲ್ಲಾ ಕಸಾಪ ಹಾಗೂ ಗದಗ ತಾಲೂಕು ಕಸಾಪ ಇವುಗಳ ಆಶ್ರಯದಲ್ಲಿ ಶನಿವಾರ ಸಂಜೆ ಜರುಗಿದ ತ್ಯಾಗವೀರ ಶಿರಸಂಗಿ ಲಿಂಗರಾಜರ ಬದುಕು ಮತ್ತು ಶೈಕ್ಷಣಿಕ ಕೊಡುಗೆ ವಿಷಯ ಕುರಿತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶಿರಸಂಗಿ ಲಿಂಗರಾಜರು ತಾವು ಬದುಕುವುದರೊಂದಿಗೆ ಸಮಾಜದಲ್ಲಿರುವ ಹಲವಾರು ಸಂಘ ಸಂಸ್ಥೆಗಳಿಗೆ, ಕಷ್ಟದಲ್ಲಿರುವ ಜನರಿಗೆ ದಾನಿಗಳಾಗಿ ಸಮಾಜಮುಖಿಯಾಗಿ ಬದುಕಿನ ಸಾರ್ಥಕ ಜೀವನ ನಡೆಸಿದವರು. ಶಿರಸಂಗಿ ಲಿಂಗರಾಜರ ಸಂಸ್ಥಾನದ ದೇಸಾಯಿಯವರಾಗಿ ಆಡಳಿತ ನಡೆಸುವುದರ ಜತೆಗೆ ಮಾನವೀಯ ಮೌಲ್ಯಗಳನ್ನು ಹೊಂದಿದ ಸಾಕಾರಮೂರ್ತಿಯಾಗಿದ್ದರು. ಅವರು ತಮ್ಮನ್ನು ದ್ವೇಷಿಸಿದವರನ್ನು ಪ್ರೀತಿಯಿಂದ ಕಾಣುವ ಮನೋಭಾವ ಹೊಂದಿದ್ದರು. ಇವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಆದರ್ಶಪ್ರಾಯವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ದತ್ತಿ ಕಾರ್ಯಕ್ರಮ ಉದ್ಘಾಟಿಸಿದ ಡಯಟ್ನ ವಿಶ್ರಾಂತ ಉಪನ್ಯಾಸಕ ಎಸ್.ಟಿ. ಬ್ಯಾಕೋಡ ಮಾತನಾಡಿ, ಭಾರತದ ಇತಿಹಾಸದಲ್ಲಿ ಹಲವಾರು ಮಹಾನುಭಾವರು ವಿವಿಧ ಕ್ಷೇತ್ರಗಳಲ್ಲಿ ಮಹೋನ್ನತವಾದ ಸಾಧನೆ ಮಾಡಿ ಹೋಗಿದ್ದಾರೆ. ಇಂದಿನ ಸಮಾಜದಲ್ಲಿ ಸಮಾಜಕ್ಕೆ ಕೊಡುಗೆ ನೀಡಿ ಬಾಳಿದ ಮಹಾಪುರುಷರಲ್ಲಿ ತ್ಯಾಗವೀರ ಶಿರಸಂಗಿ ಲಿಂಗರಾಜರ ಸ್ಮರಣೆ ಅಗತ್ಯವಾಗಿದೆ. ಗದಗ ಜಿಲ್ಲಾ ಕಸಾಪ ದತ್ತಿ ಉಪನ್ಯಾಸ, ಜಿಲ್ಲಾ ತಾಲೂಕು ಸಮ್ಮೇಳನ, ಶನಿವಾರ ಸಾಹಿತ್ಯ ಸಂಜೆ, ಕಾಲೇಜು ಸಾಹಿತ್ಯ ಸಿಂಚನದಂತಹ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಜಿಲ್ಲೆಯ ಎಲ್ಲ ಕನ್ನಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ಗದಗ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಜಿಲ್ಲೆಯಲ್ಲಿರುವ ಎಲ್ಲ ಸಂಘ-ಸಂಸ್ಥೆಗಳು ಕಸಾಪ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತಿವೆ. ಬರುವ ಫೆಬ್ರವರಿಯಲ್ಲಿ ರೋಣ ಪಟ್ಟಣದಲ್ಲಿ ಗದಗ ಜಿಲ್ಲಾ 6ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಡಲಾಗುತ್ತದೆ ಎಂದರು.
ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡ್ರ, ಮಲ್ಲೇಶ ಡಿ.ಎಚ್., ಎಸ್.ಎಸ್. ತಳ್ಳಿಹಾಳ, ಎಸ್.ಬಿ. ದೊಡ್ಡಣ್ಣವರ, ಬಸವರಾಜ ಮಡಿಕೇಶ್ವರ, ಈರಣ್ಣ ಕುರಿ, ಬಿ.ಜಿ. ಹಿರೇಮಠ, ಕವಿತಾ ದಂಡಿನ, ಪಿ.ಎಸ್. ನದಾಫ, ಎಸ್.ಎಸ್. ತಳ್ಳಿಹಾಳ, ವೈ.ಎಸ್. ಮತ್ತೂರ, ಸುಮಲತಾ ಸಂಗನಾಳಮಠ, ಮಹಾಲಕ್ಷ್ಮಿ ಹಿರೇಮಠ, ಪ್ರೀತಿ ಕಾಟಿಗಾರ ಮುಂತಾದವರು ಉಪಸ್ಥಿತರಿದ್ದರು. ಪ್ರಾ. ಬಿ.ಬಿ. ಗೌಡರ ಸ್ವಾಗತಿಸಿದರು. ಸಿ.ಎಂ. ಕಾಳಣ್ಣವರ ನಿರೂಪಿಸಿದರು. ಕೆ.ವಿ. ಬಾಗಲಕೋಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.