ದೇಶಾಭಿಮಾನಕ್ಕಿಂತ ದೇಹಾಭಿಮಾನ ಹೆಚ್ಚಾಗುತ್ತಿದೆ: ಪ್ರಕಾಶ ಗಾಣಿಗೇರ
ಕನ್ನಡಪ್ರಭ ವಾರ್ತೆ, ಗದಗ, ಫೆ. 5
ಇಂದಿನ ಯುವಕರು ಸೇರಿದಂತೆ ಜನಸಮುದಾಯದಲ್ಲಿ ಸ್ವಾರ್ಥ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ದೇಶಾಭಿಮಾನ ಕಡಿಮೆಯಾಗಿ ದೇಹಾಭಿಮಾನ ಹೆಚ್ಚುತ್ತಿದೆ ಎಂದು ಶಿಕ್ಷಕ ಪ್ರಕಾಶ ಗಾಣಿಗೇರ ಕಳವಳ ವ್ಯಕ್ತಪಡಿಸಿದರು.
ಅವರು ನಗರದ ಕೆವಿಎಸ್ಆರ್ ಪ್ರೌಢ ಶಾಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ಯಾಕ್ಟ್ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಯುವಕರು ದೇಹ ಭಕ್ತಿಗಿಂದ ದೇಶಭಕ್ತಿ ಕಡೆಗೆ ಹೆಚ್ಚು ಒತ್ತು ನೀಡಬೇಕು. ಅಂದಾಗ ದೇಶದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ. ಇಂದು ಕಾಶ್ಮೀರದಲ್ಲಿ ಹಿಂದೂಗಳ ಸ್ಥಿತಿ ಘೋರವಾಗಿದೆ. ನಿತ್ಯ ಪಂಡಿತರ ಕೊಲೆಯಾಗುತ್ತಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದು, ನಾವೆಲ್ಲ ಬಂಧು ಎಂಬ ಭಾವನೆಯನ್ನು ತಾಳುವ ಮೂಲಕ ಸಂಘಟಿತರಾದಾಗ ಮಾತ್ರ ಸರ್ಕಾರಕ್ಕೆ ಎಚ್ಚರಿಕೆ ಮೂಡಿಸಲು ಸಾಧ್ಯವಾಗುತ್ತದೆ ಎಂದರು.
ಹಿಂದೂ ಜನಜಾಗೃತಿ ಸಮಿತಿಯ ಸಂತೋಷ ಭಟ್ಕಳಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಮ್ಮುದಿಂದ ಹೊರಹಾಕಲ್ಪಟ್ಟ ಹಿಂದೂಗಳು ದಿಲ್ಲಿಯ ಫುಟ್ಪಾತ್ ಮೇಲೆ ಜೀವನ ಸಾಗಿಸುವಂತಹ ಪರಿಸ್ಥಿತಿ ಎದುರಾಗಿದೆ. ಬಾಂಗ್ಲಾ ದೇಶದ ನುಸುಳುಕೋರರು ಭಾರತಕ್ಕೆ ಬಂದಿದ್ದಾರೆ. 25000ಕ್ಕೂ ಹೆಚ್ಚು ಹಿಂದೂಗಳು ಒಂದು ವರ್ಷದಲ್ಲಿ ಮೃತರಾಗಿದ್ದಾರೆ. ಇಷ್ಟಾದರೂ ಧರ್ಮೀಯರ ರಕ್ಷಣೆಯಲ್ಲಿ ಸರ್ಕಾರ ಆಸಕ್ತಿ ವಹಿಸುತ್ತಿಲ್ಲ. ಈ ನಿಟ್ಟಿನಲ್ಲಿ ಫೆ. 9ರಂದು ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯ ಖಂಡಿಸಿ ಸಮಿತಿ ವತಿಯಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಈ ಮೂಲಕ ಸತ್ಯವನ್ನು ಸಮಾಜಕ್ಕೆ ತೋರಿಸುವ ಕಾರ್ಯವನ್ನು ಸಮಿತಿ ವತಿಯಿಂದ ಮಾಡಲಾಗುತ್ತದೆ. ದೇಶದ ಮೇಲಾಗಿರುವ ಅನ್ಯಾಯ ಹಾಗೂ ಇತಿಹಾಸ ತಿರುಚಿರುವುದನ್ನು ಸಮಾಜಕ್ಕೆ ತೋರಿಸಬೇಕಿದೆ. ಜಮ್ಮು ಕಾಶ್ಮೀರದಲ್ಲಿ ಹಿಂದೂಗಳ ಸ್ಥಿತಿ ಹೃದಯ ವಿದ್ರಾವಕ. ಈ ನಿಟ್ಟಿನಲ್ಲಿ ಸಮಿತಿ ವತಿಯಿಂದ 70 ಬಗೆಯ ಪ್ಯಾಕ್ಟ್ಗಳನ್ನು ಪ್ರದರ್ಶಿಸುವ ಮೂಲಕ ಹಿಂದೂಗಳು ಅನುಭವಿಸುತ್ತಿರುವ ಹಿಂಸೆ, ನೋವು, ಯಾತನೆಯನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು. ದಯಾನಂದ ಹಂಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಸಂಕೇಶ್ವರ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

