ಗದಗ

ನಮೋ ಬ್ರಿಗೇಡ್ ನರಗುಂದ ಬ್ರಾಂಚ್ ಉದ್ಘಾಟನೆ

Published On :

ನರಗುಂದ: ಯುಪಿಎ ಸರ್ಕಾರ ಅವಧಿಯಲ್ಲಿ ರು. 50 ಖರ್ಚು ಮಾಡಿದರೂ ಹೊಟ್ಟೆ ತುಂಬದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಗುರುವಾರ ಪಟ್ಟಣದ ಗಾಂಧಿಚೌಕ್‌ದಲ್ಲಿ 272ನೇ ನಮೋ ಬ್ರಿಗೇಡ್ ನರಗುಂದ ಬ್ರಾಂಚ್ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದೂಗಳನ್ನು ತುಳಿಯುತ್ತಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಡಾ. ಕೆ.ಎಲ್. ಶಾಸ್ತ್ರಿ ಮಾತನಾಡಿದರು. ಸಂಸದ ಪಿ.ಸಿ. ಗದ್ದಿಗೌಡ್ರ, ಮಾಜಿ ಸಚಿವ ಸಿ.ಸಿ. ಪಾಟೀಲ, ಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಚಂದ್ರು ದಂಡಿನ, ಬಸು ಪಾಟೀಲ, ವಾಸು ಜೋಗಣ್ಣವರ, ರಾಜುಗೌಡ ಪಾಟೀಲ, ಎಸ್.ಬಿ. ಕರಿಗೌಡರ, ಪ್ರಕಾಶ ಪಟ್ಟಣಶೆಟ್ಟಿ, ಉಮೇಶ ಯಳ್ಳೂರ, ಹನುಮಂತಗೌಡ ಹೆಬ್ಬಳ್ಳಿ, ಜಿ.ಬಿ. ಕುಲಕರ್ಣಿ, ಎಸ್.ವೈ. ಹುಂಬಿ, ಎಂ.ಬಿ. ಕುಲಕರ್ಣಿ, ಕೃಷ್ಣ ಇದ್ದರು.

ಇಂದು ಎನ್‌ಎಸ್‌ಎಸ್ ವಿಶೇಷ ಶಿಬಿರದಲ್ಲಿ ಉಪನ್ಯಾಸ
ಗಜೇಂದ್ರಗಡ: ಸ್ಥಳೀಯ ಎಸ್.ಎಂ. ಭೂಮರಡ್ಡಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ದತ್ತು ಗ್ರಾಮ ಲಕ್ಕಲಕಟ್ಟಿಯಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರ ಫೆ. 7ರಂದು ಸಂಜೆ 6ಕ್ಕೆ ನಡೆಯಲಿದೆ. ಆಧುನಿಕ ಭಾರತದಲ್ಲಿ ಇಂಗ್ಲಿಷ್ ಭಾಷೆಯ ಪ್ರಭಾವ ಹಾಗೂ ಗ್ರಾಮಗಳ ಅಭಿವೃದ್ಧಿ ಕುರಿತು ವೈ.ಕೆ ಕಟ್ಟಿ, ವೈ.ಎಫ್. ಗೌಡರ ಉಪನ್ಯಾಸ ನೀಡುವರು. ತಾಪಂ ಸದಸ್ಯ ಆರ್.ಕೆ. ಚವ್ಹಾಣ ಅಧ್ಯಕ್ಷತೆ ವಹಿಸುವರು. ಎಸ್.ಬಿ. ಹಿರೇಮಠ, ಶರಣಪ್ಪ ಬೆನಕನವಾರಿ, ಬಸಯ್ಯ ಹಿರೇಮಠ, ಹೇಮಂತ ಬಡಿಗೇರ, ನಾಗಪ್ಪ ಕೊಪ್ಪದ, ಮಲ್ಲಪ್ಪ ಬೆನಕನವಾರಿ, ಪ್ರೇಮಾ ಭಗವತಿ ಪಾಲ್ಗೊಳ್ಳುವರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಪ್ರಕಟಣೆ ತಿಳಿಸಿದೆ.
ಇಂದು ಎನ್‌ಎಸ್‌ಎಸ್ ವಿಶೇಷ ಶಿಬಿರ
ಗಜೇಂದ್ರಗಡ: ಸ್ಥಳೀಯ ಬಿಎಸ್‌ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ದತ್ತು ಗ್ರಾಮ ಕುಂಟೋಜಿಯಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರ ಫೆ. 7ರಂದು ಸಂಜೆ 6ಕ್ಕೆ ಕೃಷ್ಣಾ ವೇದಿಕೆಯಲ್ಲಿ ನಡೆಯಲಿದೆ.
ಶೂನ್ಯ ಬಂಡವಾಳದ ಕೃಷಿ, ಸಾವಯುವ ಕೃಷಿಯ ಮಹತ್ವ ಕುರಿತು ಉಪನ್ಯಾಸಕ ಬಿ.ಎ. ಕೆಂಚರಡ್ಡಿ, ಬಿ.ವಿ. ಮುನವಳ್ಳಿ ಉಪನ್ಯಾಸ ನೀಡುವರು. ಗ್ರಾಪಂ ಮಾಜಿ ಅಧ್ಯಕ್ಷ ಮುದಿಯಪ್ಪ ಕರಡಿ ಅಧ್ಯಕ್ಷತೆ ವಹಿಸುವರು. ವೀರೇಶ ಅಬ್ಬಿಗೇರಿ, ಪರಶುರಾಮ ಗುಗಲೋತ್ತರ, ಎಂ.ಎಸ್.ದೊಡ್ಡಮನಿ, ಶೈಲಜಾ ಅಂಗಡಿ, ಎಸ್.ಎಂ. ಶಿವರುದ್ರಮ್ಮ, ಐ.ಎಸ್. ಕುಷ್ಟಗಿ ಪಾಲ್ಗೊಳ್ಳುವರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ವಿ.ಪಿ. ಹಿತ್ತಲಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.