ಗದಗ

ಸದ್ಭಾವನಾ ಬೆಳಕು ಇಂದಿನ ಅಗತ್ಯತೆ

Published On :

ಗದಗ: ಸ್ವಾರ್ಥ, ಸಂಕುಚಿತ ಭಾವನೆ, ಜಾತಿ-ಮತ ಭೇದ-ಭಾವಗಳು ಸಮಾಜದಲ್ಲಿ ಅಸಮಾನತೆ-ಅಶಾಂತಿಯನ್ನು ಹರಡುತ್ತಿವೆ. ಇದನ್ನು ಹೋಗಲಾಡಿಸಿ ಸದ್ಭಾವನಾ ಬೆಳಕು ಎಲ್ಲೆಡೆಯೂ ಮೂಡಬೇಕಾದ ಅಗತ್ಯತೆ ಇದೆ ಎಂದು ಚಿತ್ರದುರ್ಗದ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಹೇಳಿದರು. ಈಚೆಗೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗದಗ ಶಾಖೆ ಬಸವೇಶ್ವರ ನಗರದಲ್ಲಿ ಆಯೋಜಿಸಿದ್ದ ಆಧ್ಯಾತ್ಮಿಕತೆಯಿಂದ ಸದ್ಭಾವನಾ ಬೆಳಕು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗುರುಪಾದ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದಲ್ಲಿ ಧರ್ಮ ಬೇರೆ, ಜಾತಿ ಬೇರೆ. ಎಲ್ಲರೂ ದೇವರ ಮಕ್ಕಳು ಎಂಬ ಸಮಾನತೆಯನ್ನು ನಮ್ಮ ಅನುಭಾವಿಗಳು ಸಾರಿದರು. ಬಸವಣ್ಣನವರು ಸರಳವಾಗಿ ಸಾರಿದ ಒಬ್ಬ ದೇವರು ಎಂಬ ಸತ್ಯವನ್ನು ತಿಳಿಯಬೇಕು. ದೇವರ ಬಗ್ಗೆ ಶ್ರದ್ಧೆ ಮತ್ತು ಶುದ್ಧ ಆಚಾರದಿಂದ ಸದ್ಭಾವನೆ ಬೆಳೆಯುತ್ತದೆ ಎಂದರು.
ಅಭಿನವ ಬೂದೀಶ್ವರ ಮಹಾಸ್ವಾಮೀಜಿ ಮಾತನಾಡಿ, ನಮ್ಮ ದೇಶ ಸಾಧು, ಸಂತರ, ಆಧ್ಯಾತ್ಮಿಕ ಪರಂಪರೆಯುಳ್ಳ ಮತ್ತು ಪ್ರಪಂಚವೇ ತಲೆಬಾಗುವ ಪವಿತ್ರ ಸ್ಥಾನ. ಜಗತ್ತಿನ ಕಣ್ಣಿಗೆ ಹೆಣ್ಣು ಭೋಗದ ವಸ್ತುವಾದರೆ, ನಮ್ಮ ಆಧ್ಯಾತ್ಮಿಕ ಪರಂಪರೆಯಲ್ಲಿ ತಾಯಿ, ಸರಸ್ವತಿ, ದೇವತಾ ಸ್ವರೂಪಿ, ಬ್ರಹ್ಮಾಕುಮಾರಿಯರು ಈ ಸತ್ಯವನ್ನು ಪ್ರತ್ಯಕ್ಷಗೊಳಿಸುತ್ತಿದ್ದಾರೆ ಎಂದರು.
ನೀಲಗುಂದದ ಪ್ರಭುಲಿಂಗ ಸ್ವಾಮೀಜಿ, ಸೊರಟೂರಿನ ಫಕೀರೇಶ್ವರ ಮಹಾಸ್ವಾಮೀಜಿ, ಕಪೋತಗಿರಿಯ ಶಿವಕುಮಾರ ಮಹಾಸ್ವಾಮೀಜಿ, ಕೊತಬಾಳದ ಗಂಗಾಧರ ಮಹಾಸ್ವಾಮೀಜಿ, ಅಸುಂಡಿಯ ಪರಮೇಶ್ವರ ಸ್ವಾಮೀಜಿ, ಡಾ. ಬಿ.ಕೆ. ವಾದಿರಾಜ ಭಟ್ ಆಧ್ಯಾತ್ಮ ಜ್ಞಾನದಿಂದ ಸದ್ಭಾವನೆ ಬೆಳಕು ವಿಷಯದ ಕುರಿತು ಪ್ರವಚನ ನೀಡಿದರು.
ಅತಿಥಿಗಳಿಗೆ ಸಂಚಾಲಕಿ ಜಯಂತಿ, ಈಶ್ವರೀಯ ಸಂದೇಶ ಮತ್ತು ಆಧ್ಯಾತ್ಮ ಜ್ಞಾನ, ರಾಜಯೋಗವನ್ನು ಆಧುನಿಕ ತಂತ್ರಜ್ಞಾನದ ಮೂಲಕ ವಿವರಿಸಿದರು. ಸ್ವಾತಿ ಅಕ್ಕನವರು ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.