ಇಂದು ಗದಗ ಜಿಲ್ಲಾ ಮಟ್ಟದ ಪ್ರಾಥಮಿಕ ಶಿಕ್ಷಕರ ಶೈಕ್ಷಣಿಕ ಸಮಾವೇಶ
ಗದಗ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ಜಿಲ್ಲಾ ಘಟಕ ಗದಗ ವತಿಯಿಂದ ಫೆ. 8ರಂದು ಶನಿವಾರ ಬೆಳಗ್ಗೆ 9ಕ್ಕೆ ನಗರದ ತೋಂಟದಾರ್ಯ ಸಿದ್ದಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಸಮಾವೇಶ ಹಾಗೂ ಶೈಕ್ಷಣಿಕ ಚಿಂತನಗೋಷ್ಠಿ ಶಿಕ್ಷಣ ಸಿರಿಗಂಧ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಸಮಾವೇಶ ಉದ್ಘಾಟಿಸುವರು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಕಾರ್ಯಕ್ರಮ ಉದ್ಘಾಟಿಸುವರು. ಗದಗ ಶೈಕ್ಷಣಿಕ ಗೋಷ್ಠಿಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಉದ್ಘಾಟಿಸುವರು. ಶಿಕ್ಷಣ ಸಿರಿಗಂಧ ಪುಸ್ತಕವನ್ನು ಶಾಸಕ ಜಿ.ಎಸ್. ಪಾಟೀಲ ಬಿಡುಗಡೆ ಮಾಡುವರು. ಸಂಘದ ಅಧ್ಯಕ್ಷ ಎಸ್.ಎನ್. ಬಳ್ಳಾರಿ ಅಧ್ಯಕ್ಷತೆ ವಹಿಸುವರು. ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ, ಶಾಸಕ ಬಿ.ಆರ್. ಯಾವಗಲ್, ರಾಮಕೃಷ್ಣ ದೊಡ್ಡಮನಿ, ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಸಿಇಒ ವೀರಣ್ಣ ತುರುಮರಿ, ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ಮತ್ತಿತರರು ಆಗಮಿಸುವರು. ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಅನ್ಯಕಾರ್ಯ ನಿಮಿತ್ತ ರಜೆ (ಒಒಡಿ) ಸೌಲಭ್ಯವಿದ್ದು, ಎಲ್ಲ ಶಿಕ್ಷಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಉಣ್ಣಿಮಠ ತಿಳಿಸಿದ್ದಾರೆ.
ಇಂದು ವಿಶೇಷ ಉಪನ್ಯಾಸ
ಗದಗ: ಫೆ. 8ರ ಶನಿವಾರ ಸಂಜೆ 6ಕ್ಕೆ ತಾಪಂ ಆವರಣದಲ್ಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಾಲಯದಲ್ಲಿ ಶನಿವಾರ ಸಾಹಿತ್ಯ ಸಂಜೆ ಮಾಲಿಕೆ ಕಾರ್ಯಕ್ರಮ ಜರುಗಲಿದ್ದು, ದೆಹಲಿಯ ರಾಷ್ಟ್ರೀಯ ನಾಟಕ ವಿದ್ಯಾಲಯದ ಶಿಕ್ಷಕಿ, ರಂಗಭೂಮಿ ಕಲಾವಿದೆ, ನಿರ್ದೇಶಕಿ ವೀಣಾ ಶರ್ಮಾ ಮಕ್ಕಳ ಶಿಕ್ಷಣದಲ್ಲಿ ರಂಗಕಲೆ ಕುರಿತು ಉಪನ್ಯಾಸ ನೀಡಲಿದ್ದಾರೆ. ಹುಲಕೋಟಿಯ ಯುವ ಕವಿಯತ್ರಿ ವಿದ್ಯಾ ಹೂವಿನಹಳ್ಳಿ ಕವನ ವಾಚಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಅಧ್ಯಕ್ಷತೆ ವಹಿಸುವರು. ಜಿಲ್ಲೆಯ ಕಸಾಪ ಆಜೀವ ಸದಸ್ಯರು, ಸಾಹಿತ್ಯಾಭಿಮಾನಿಗಳು, ಯುವ ಬರಹಗಾರರು, ಮಹಿಳಾ ಸಾಹಿತಿಗಳು, ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು, ಕನ್ನಡಾಭಿಮಾನಿಗಳು, ಶಾಲಾ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಾಕ್ರಮಕ್ಕೆ ಆಗಮಿಸಬೇಕು ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡ್ರ, ಶನಿವಾರ ಸಾಹಿತ್ಯ ಸಂಜೆಯ ಸಂಚಾಲಕ ಮಲ್ಲೇಶ ಡಿ.ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರ್ಷಿಕ ಸ್ನೇಹ ಸಮ್ಮೇಳನ ಇಂದು
ಗದಗ: ನಗರದ ವಿದ್ಯಾದಾನ ಸಮಿತಿಯ ವಿಡಿಎಸ್ ಬಾಲಕರ ಪಪೂ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಫೆ. 8ರಂದು 9.30ಕ್ಕೆ ಕಾಲೇಜಿನ ಕಲಾಭವನದಲ್ಲಿ ಜರುಗಲಿದೆ. ಅತಿಥಿಗಳಾಗಿ ಗದಗ ಶಹರ ಪೊಲೀಸ್ ಠಾಣೆಯ ಪಿಎಸ್ಐ ಕೃಷ್ಣವೇಣಿ ಗುರ್ಲಹೊಸೂರ, ಎಂ.ಟಿ. ಭಟ್ ಹಾಗೂ ವಿದ್ಯಾದಾನ ಸಮತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಆಗಮಿಸುವರು. ವಿದ್ಯಾದಾನ ಸಮಿತಿಯ ಅಧ್ಯಕ್ಷ ಡಿ.ಬಿ. ಹುಯಿಲಗೋಳ ಅಧ್ಯಕ್ಷತೆ ವಹಿಸುವರು. ಪ್ರಾ. ಎಂ.ಸಿ. ಕಟ್ಟಿಮನಿ, ಎ.ಟಿ. ಅಣ್ಣಿಗೇರಿ ಸ್ವಾಗತ ಕೋರಿದ್ದಾರೆ.
ಮಲ್ಲಿಕಾರ್ಜುನ ಕಂಠಿ ನೇಮಕ
ಹೊಳೆಆಲೂರ: ಸ್ಥಳೀಯ ಲಿಂಗಾಯತ ಪಂಚಮಸಾಲಿ ಯುವ ಸಂಘಟನೆಗೆ ಈಚೆಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು. ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಕಂಠಿ, ಉಪಾಧ್ಯಕ್ಷರಾಗಿ ಮಂಜುನಾಥ ಹೊಸಮನಿ, ಪ್ರವೀಣ ಜಡಮಳಿ, ಕಲ್ಲಪ್ಪ ಬೇಲಿ, ಸಂಗಮೇಶ ಬ್ಯಾಡಗಿ ಹಾಗೂ ಸಂಗಮೇಶ ಕಡಬಲಕಟ್ಟಿ ಆಯ್ಕೆಯಾಗಿದ್ದಾರೆ. ಜಿಲ್ಲಾ ಅಧ್ಯಕ್ಷ ಶಶಿಧರ ದಿಂಡೂರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಗೊಳಿಸಲಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಕಾಲೇಶ ಸಂತೋಜಿ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಧರ ರಮಾಣಿ, ಶಿವಣ್ಣ ಕಡಬಿನಕಟ್ಟಿ, ಕಾರ್ಯದರ್ಶಿಗಳಾಗಿ ಬಸವರಾಜ ಮನಗೂಳಿ, ಬಸವರಾಜ ಪಾಟೀಲ, ಮುತ್ತುರಾಜ ಬಿಳೇಕಲ್, ಚಂದ್ರಶೇಖರ ಪಾಟೀಲ, ಯಚ್ಚರಪ್ಪ ಬೆಳವಣಕಿ, ಖಜಾಂಚಿಯಾಗಿ ಶ್ರೀಶೈಲ ಹಿರೇಹಾಳ, ಸಲಹಾ ಮಂಡಳಿ ಸದಸ್ಯರಾಗಿ ಹರೀಶ ಕಂಠಿ, ಮಂಜುನಾಥ ಮಣ್ಣೂರ, ಜಗದೀಶ ಬ್ಯಾಡಗಿ, ಗಿರೀಶ ಕುರಟ್ಟಿ, ಉಮೇಶ ನೀಲಗುಂದ, ಶೇಖಪ್ಪ ಮಾಳವಾಡ ಹಾಗೂ ಮಲ್ಲಿಕಾರ್ಜುನ ಸಂಕನಗೌಡ್ರ ಆಯ್ಕೆಯಾಗಿದ್ದಾರೆ.
ನಾಳೆ ಎಸ್ಎಸ್ಎಲ್ಸಿ ಮಾರ್ಗದರ್ಶಿ ಶಿಬಿರ
ಕನ್ನಡಪ್ರಭ ವಾರ್ತೆ, ಗದಗ, ಫೆ. 7
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಬೆಟಗೇರಿ ಘಟಕದ ವಾರ್ಷಿಕೋತ್ಸವದ ಅಂಗವಾಗಿ ಫೆ. 9ರಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಮಾರ್ಗದರ್ಶಿ ಶಿಬಿರವನ್ನು ಬೆಟಗೇರಿಯ ಬಾಸೆಲ್ಮಿಶನ್ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಪಂಚಮಸಾಲಿ ಟ್ರಸ್ಟ್ ಕಾರ್ಯದರ್ಶಿ ಮಹೇಶ ಕರಿಬಿಷ್ಠಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕಠಿಣವಾದ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ವಿಷಯದಲ್ಲಿ ಪರೀಕ್ಷಾ ಪೂರ್ವ ತರಬೇತಿಯನ್ನು ನುರಿತ ಶಿಕ್ಷಕರಿಂದ ಫೆ. 9ರಂದು ಸರಣಿ ರೂಪದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಟಗೇರಿಯ ಎಲ್ಲ 9 ಪ್ರೌಢಶಾಲೆಯಲ್ಲಿಯ ವಿದ್ಯಾರ್ಥಿಗಳು ಹಾಗೂ ಗದಗದಲ್ಲಿರುವ ಶಾಲೆಗಳ ಆಸಕ್ತ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಶಿಬಿರದಲ್ಲಿ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.
ಫೆ. 9ರಂದು ಬೆಳಗ್ಗೆ 8.30ರಿಂದ 9ರ ವರೆಗೆ ನೋಂದಣಿ ಕಾರ್ಯ ಜರುಗಲಿದೆ. 9ರಿಂದ 11ರ ವರೆಗೆ ಗಣಿತ, 11.30ರಿಂದ 1.30ರ ವರೆಗೆ ವಿಜ್ಞಾನ, ಮಧ್ಯಾಹ್ನ 2ರಿಂದ 4ರ ವರೆಗೆ ಇಂಗ್ಲಿಷ್ ವಿಷಯದ ಕುರಿತು ತರಬೇತಿ ನೀಡಲಾಗುವುದು. ಸಂಜೆ 4.30ಕ್ಕೆ ಜರುಗುವ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಕೂಡಲಸಂಗಮ ಅಖಿಲ ಭಾರತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ವಹಿಸುವರು. ಟ್ರಸ್ಟ್ನ ರಾಷ್ಟ್ರಾಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ, ಬಿಇಒ ಐ.ಬಿ. ಬೆನಕೊಪ್ಪ, ರಾಷ್ಟ್ರಸಂಚಾಲಕ ಎಂ.ಎಸ್. ಮಲ್ಲಾಪುರ, ಜಿಲ್ಲಾಧ್ಯಕ್ಷ ಎಂ. ಬಸಪ್ಪ, ಶಹರ ಅಧ್ಯಕ್ಷ ಎಂ.ಎಸ್. ಪಾಟೀಲ ಪಾಲ್ಗೊಳ್ಳುವರು ಎಂದರು. ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ಅಧ್ಯಕ್ಷ ಕಲ್ಯಾಣಪ್ಪ ಹೋಳಿ, ಉಪಾಧ್ಯಕ್ಷ ಬಸವರಾಜ ಕುಂದಗೋಳ, ಮಲ್ಲೇಶಪ್ಪ ಪಲ್ಲೇದ ಮುಂತಾದವರು ಉಪಸ್ಥಿತರಿದ್ದರು.
ಸಂಗೀತದಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಪ್ರೋತ್ಸಾಹ ನೀಡಿ: ನದಾಫ್
ಮುಳಗುಂದ: ಶಾಸ್ತ್ರಿಯ ಸಂಗೀತ ಇಂದಿನ ದಿನಮಾನಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಮಕ್ಕಳ ಸಂಗೀತ ಕಾರ್ಯಕ್ರಮಗಳು ಮಾಧ್ಯಮದ ಮುಖಾಂತರ ಪ್ರತಿದಿನ ಪ್ರಸಾರವಾಗುತ್ತಿರುವುದೇ ಕಾರಣ ಎಂದು ಶಿಕ್ಷಕ ಎ.ಎಸ್. ನದಾಫ್ ಅಭಿಪ್ರಾಯಪಟ್ಟರು.
ಅವರು ಸಮೀಪದ ಯಳವತ್ತಿ ಗ್ರಾಮದ ಪಂಡಿತ ಪುಟ್ಟರಾಜ ಸಂಗೀತ ಪಾಠಶಾಲೆ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಫಕ್ಕೀರಶೆಟ್ರು ಶಿರಬಡಗಿ ಕಾರ್ಯಕ್ರಮ ಉದ್ಘಾಟಿಸಿದರು.
ಗ್ರಾಪಂ ಅಧ್ಯಕ್ಷ ಬಸವರಾಜ ನೀಲಗುಂದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತಿರುಕಪ್ಪ ಮಾಸ್ತರ ಕಮ್ಮಾರ, ಜಿ.ಎಂ. ಉಪ್ಪಿನ, ರಾಚನಗೌಡ ಅಜ್ಜನಗೌಡ್ರ ಮತ್ತಿತರರು ಇದ್ದರು. ಪಂ.ಪು.ಸ.ಪಾಠ ಶಾಲೆಯ ಮಕ್ಕಳು ಸ್ವಾಗತ ಗೀತೆಯನ್ನು ಪ್ರಸ್ತುತಪಡಿಸಿದರು. ಎಸ್.ಎಫ್. ಹೂಗಾರ ನಿರೂಪಿಸಿದರು. ಗಾಯಕ ಪ್ರಕಾಶ ಪ್ಯಾಟಿ ಹಾಗೂ ಸೋಮು ಭಜಂತ್ರಿ, ಮಂಜುನಾಥ ಪೂಜಾರ ಇವರಿಂದ ಸಂಗೀತ ಕಾರ್ಯಕ್ರಮ ಜರುಗಿದವು.
ಯೋಜನೆ ಸದುಪಯೋಗಪಡಿಸಿಕೊಳ್ಳಿ
ಮುಂಡರಗಿ: ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಮಹಿಳೆಯರು ಸ್ವಾವಲಂಬನೆ ಜೀವನ ನಡೆಸಲು ಮುಂದಾಗಬೇಕು ಎಂದು ಡಂಬಳ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಲ್ಲಣ್ಣ ಯರಾಶಿ ಹೇಳಿದರು. ಈಚೆಗೆ ತಾಲೂಕಿನ ಡಂಬಳ ಗ್ರಾಪಂ ಸಭಾಭವನದಲ್ಲಿ ನಡೆದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮುಂಡರಗಿ, ತಾಲೂಕು ಮಟ್ಟದ ಒಕ್ಕೂಟ ಬಲವರ್ಧನೆ ಹಾಗೂ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳೆಯರು ಸಂಕುಚಿತ ಸ್ವಭಾವದಿಂದ ಹೊರಬಂದು ಗುಡಿ ಕೈಗಾರಿಕೆ ಸೇರಿದಂತೆ ಅನೇಕ ಕೆಲಸಗಳಲ್ಲಿ ತೊಡಗಿ ಆರ್ಥಿಕ ಸಬಲತೆ ಹೊಂದಬೇಕು ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಪಂ ಸದಸ್ಯ ನಿಂಗಬಸಪ್ಪ ಪ್ಯಾಟಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಯೋಜನೆ ಜಾರಿಗೆ ತಂದಿದ್ದು, ಬ್ಯಾಂಕ್ ಹಾಗೂ ಇಲಾಖೆ ನೀಡಿದ ಸಾಲವನ್ನು ಸಮರ್ಪಕವಾಗಿ ಬಳಸಿ, ಸಕಾಲದಲ್ಲಿ ಸಾಲ ಮರು ಪಾವತಿ ಮಾಡಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಲಕ್ಷ್ಮೀ ಬಾಗೇವಾಡಿ, ಎಸ್.ವಿ. ಕವಲೂರು, ಉಮಾ ಸಿರಸಂಗಿ, ಇಲಾಖೆಯ ಯೋಜನೆಗಳ ಮಾಹಿತಿ ನೀಡಿದರು. ಒಕ್ಕೂಟದ ಪದಾಧಿಕಾರಿಗಳಾದ ಹನುಮಮ್ಮ ಕರಿಗಾರ, ಜಯಮ್ಮ ಯಲಭೋವಿ, ಪುಷ್ಪಾ ಓದುಸೋಮಠ, ಹೇಮಾ ನಂದಿಕೋಲ, ಮಂಜುಳಾ ಮುತ್ತಿನ, ಶಿವಮ್ಮ ಮೇಟಿ, ಮತ್ತಿತರರು ಉಪಸ್ಥಿತರಿದ್ದರು.
ಇಂದು ಎನ್ನೆಸ್ಸೆಸ್ ಶಿಬಿರ
ಗಜೇಂದ್ರಗಡ: ಸ್ಥಳೀಯ ಎಸ್.ಎಂ. ಭೂಮರಡ್ಡಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ದತ್ತು ಗ್ರಾಮ ಲಕ್ಕಲಕಟ್ಟಿಯಲ್ಲಿ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಫೆ. 8ರಂದು ಸಂಜೆ 6ಕ್ಕೆ ಜರುಗಲಿದೆ. ವಚನ ಸಾಹಿತ್ಯ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತು ಬಿ.ಕೆ. ಮಾದಿ, ಎಸ್.ಎಚ್. ಮುಚಖಂಡಿ ಉಪನ್ಯಾಸ ನೀಡುವರು. ಎಸ್.ಎಂ. ಬೆನಕನವಾರಿ ಅಧ್ಯಕ್ಷತೆ ವಹಿಸುವರು. ಪ್ರಾ. ಎಚ್.ಎನ್. ಗೌಡರ, ನಭಿಸಾಬ ನದಾಫ್, ಎಚ್.ವೈ. ಎಲಿಗಾರ, ಝಡ್.ಎ. ನದಾಫ್ ಮುಂತಾದವರು ಪಾಲ್ಗೊಳ್ಳುವರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಎನ್ಎಸ್ಎಸ್ ಅಧಿಕಾರಿ ಎಲ್.ಕೆ. ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಜೇಂದ್ರಗಡ: ಇಂದು ಶಿಬಿರ
ಗಜೇಂದ್ರಗಡ: ಸ್ಥಳೀಯ ಬಿಎಸ್ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ದತ್ತು ಗ್ರಾಮ ಕುಂಟೋಜಿಯಲ್ಲಿ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ ಫೆ. 8ರಂದು ಸಂಜೆ 6ಕ್ಕೆ ಘಟಪ್ರಭಾ ವೇದಿಕೆಯಲ್ಲಿ ನಡೆಯಲಿದೆ. ಅಧುನಿಕ ಜೀವನದಲ್ಲಿ ಐತಿಹಾಸಿಕ ಘಟನೆಗಳ ಮಹತ್ವ ಹಾಗೂ ಮಹಿಳೆಯರ ಆರೋಗ್ಯ ಕುರಿತು ಜಾಗೃತಿ ಕುರಿತು ಗಂಗಮ್ಮ ಎಂ. ಹಾಗೂ ವಾಣಿಶ್ರೀ ಜಿ.ಎಂ. ಉಪನ್ಯಾಸ ನೀಡುವರು. ಕಳಕನಗೌಡ ಡೊಳ್ಳಿನ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಎಸ್.ಎಫ್. ಉಪ್ಪಾರ, ಸುನಂದಾ ಪಾಟೀಲ, ಕೀರ್ತಿ, ಮಾಲಿನಿ ಘೋರ್ಪಡೆ, ಹನುಮವ್ವ ತಳವಾರ, ಶಕುಂತಲಾ ಕರಡಗಿಮಠ, ಕರಿಯಪ್ಪ ಚೋಟಿ ಮುಂತಾದವರು ಪಾಲ್ಗೊಳ್ಳುವರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ಎನ್ಎಸ್ಎಸ್ ಅಧಿಕಾರಿ ವಿ.ಪಿ. ಹಿತ್ತಲಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಸ್ನೇಹ ಸಮ್ಮೇಳನ
ನರಗುಂದ: ಪಟ್ಟಣದ ಸರ್.ಎಂ. ವಿಶ್ವೇಶ್ವರಯ್ಯ ಪ್ರಾಥಮಿಕ ಶಾಲೆಯ 2013-14ನೇ ವಾರ್ಷಿಕ ಸ್ನೇಹ ಸಮ್ಮೇಳನ ಶಾಲೆಯ ಆವರಣದಲ್ಲಿ ಫೆ. 8ರಂದು ಮಧ್ಯಾಹ್ನ 1ಕ್ಕೆ ಜರುಗಲಿದ್ದು, ಪತ್ರಿವನ ಮಠದ ಗುರು ಸಿದ್ಧವೀರ ಶ್ರೀಗಳು ಸಾನ್ನಿಧ್ಯ ವಹಿಸುವರು. ಸಂಸ್ಥೆಯ ಅಧ್ಯಕ್ಷ ವೀರನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು. ಮುಖ್ಯೋಪಾಧ್ಯಾಯ ಮಹಾಂತೇಶ ಕ್ಯಾತನಗೌಡ್ರ, ಶಿಕ್ಷಣಾಧಿಕಾರಿ ಸುರೇಶ ಹುಗ್ಗಿ, ಸಮನ್ವಯಾಧಿಕಾರಿ ಪಿ.ಎಫ್. ಸೋಲಾಪುರಿ, ಹೊನ್ನಪ್ಪಗೌಡ ಪಾಟೀಲ, ಈರನಗೌಡ ಪಾಟೀಲ, ಅಜ್ಜನಗೌಡ ಪಾಟೀಲ, ಎಸ್.ಎನ್. ಪೂಜಾರ ಮುಂತಾದವರು ಭಾಗವಹಿಸುವರು.
ನಾಳೆ ಬಹುಮಾನ ವಿತರಣೆ
ನರಗುಂದ: ಪಟ್ಟಣದ ದಂಡಿನ ಗುರಪ್ಪ ಮೆಮೋರಿಯಲ್ ಹಾಲ್ನಲ್ಲಿ ಫೆ. 9ರಂದು ಬೆಳಗ್ಗೆ 10.30ಕ್ಕೆ ಸ್ವಾಮಿ ವಿವೇಕಾನಂದರ 150ನೇ ಜನ್ಮ ವರ್ಷಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಲಿಖಿತ ರಸಪ್ರಶ್ನೆ ಕಾರ್ಯಕ್ರಮದ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದೆ. ಈ ಸಮಾರಂಭದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ತಾಲೂಕು ಎಬಿವಿಪಿಯ ಪ್ರಕಟಣೆ ತಿಳಿಸಿದೆ.
ನಾಳೆ ಪಾಲಕರ ಸಭೆ
ಗದಗ: ಸ್ಥಳೀಯ ಸಿದ್ದಲಿಂಗನಗರದ ಬಸವೇಶ್ವರ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 8 ಹಾಗೂ 9ನೇ ತರಗತಿ ಮಕ್ಕಳ ಪಾಲಕರ ಸಭೆಯನ್ನು ಫೆ. 9ರಂದು ಬೆಳಗ್ಗೆ 8.30ಕ್ಕೆ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಾ. ಕೆ.ಎಚ್. ಬೇಲೂರ, ಜಿ.ಪಿ. ಕಟ್ಟಿಮನಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದಲ್ಲಿ ಮಕ್ಕಳ ಪ್ರಗತಿ ಹಾಗೂ ಪರೀಕ್ಷಾ ತಯಾರಿ ಕುರಿತು ಹಲವಾರು ವಿಷಯಗಳನ್ನು ಚರ್ಚಿಸಲಾಗುವುದು. ಪಾಲಕರು ತಪ್ಪದೇ ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಮುಖ್ಯೋಪಾಧ್ಯಾಯ ಶಿವನಗೌಡ ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ವಿಶೇಷ ಉಪನ್ಯಾಸ
ಗದಗ: ಸ್ಥಳೀಯ ಜಿಲ್ಲಾ ಅಂಚೆ ಕಚೇರಿ ಹತ್ತಿರವಿರುವ ಎಕ್ಸ್ಲೆಂಟ್ ಕೋಚಿಂಗ್ ಸೆಂಟರ್ನಲ್ಲಿ ಫೆ. 9ರಂದು ಬೆಳಗ್ಗೆ 11ಕ್ಕೆ ಕರ್ನಾಟಕ ಇತಿಹಾಸ ಅಕಾಡೆಮಿ ಜಿಲ್ಲಾ ಘಟಕ ಗದಗ ಇದರ ಆಶ್ರಯದಲ್ಲಿ ಪ್ರಾಚೀನ ಕೃಷಿ ಸಂಪ್ರದಾಯಗಳ ಆಚರಣೆ ಹಾಗೂ ವೈಶಿಷ್ಟ್ಯಗಳು ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ. ಹುಲಕೋಟಿಯ ಸಾವಯವ ಕೃಷಿ ತಜ್ಞ ಸುರೇಶಗೌಡ ಪಾಟೀಲ ಉಪನ್ಯಾಸ ನೀಡುವರು. ಜಿಲ್ಲಾ ಘಟಕದ ಅಧ್ಯಕ್ಷ ಡಾ. ವೈ.ಆರ್. ಬೇಲೇರಿ ಅಧ್ಯಕ್ಷತೆ ವಹಿಸುವರು. ರಾಜ್ಯ ಘಟಕದ ಕಾರ್ಯಕಾರಿ ಮಂಡಳಿ ಸದಸ್ಯ ಪ್ರೊ. ಕೆ.ಎಂ. ಗರಗ, ಜಿಲ್ಲಾ ಘಟಕದ ಉಪಾಧ್ಯಕ್ಷ ಡಾ. ವಿ.ಕೆ. ದ್ಯಾಮನಗೌಡರ. ಎಕ್ಸ್ಸ್ಲೆಂಟ್ ಕೋಚಿಂಗ್ ಸೆಂಟರ್ನ ಆಡಳಿತಾಧಿಕಾರಿ ಕೆ.ಟಿ. ವಡ್ಡೀನ ಉಪಸ್ಥಿತರಿರುವರು. ಇತಿಹಾಸ ಅಕಾಡೆಮಿಯ ಜಿಲ್ಲಾ ಸಂಚಾಲಕಿ ಶಕುಂತಲಾ ಸಿಂಧೂರ ಕಾರ್ಯಕ್ರಮ ಪ್ರಾಯೋಜಿಸಿದ್ದಾರೆ. ಜಿಲ್ಲಾ ಘಟಕದ ಸದಸ್ಯರು, ಇತಿಹಾಸ ಉಪನ್ಯಾಸಕರು, ಆಸಕ್ತರು ಆಗಮಿಸಲು ಪ್ರಧಾನ ಕಾರ್ಯದರ್ಶಿ ದತ್ತಪ್ರಸನ್ನ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೆರವಣಿಗೆ
ಗಜೇಂದ್ರಗಡ: ಪಟ್ಟಣದ ಅದಿ ದೇವತೆ ಹಿರೇದುರ್ಗಾದೇವಿ ನೂತನ ಮೂರ್ತಿ ಮೆರವಣಿಗೆ ಗುರುವಾರ ಸಾವಿರಾರು ಭಕ್ತಾದಿಗಳ ಮಧ್ಯೆ ಸಂಭ್ರಮದಿಂದ ಜರುಗಿತು.
ಸ್ಥಳೀಯ ರಾಜ ವಂಶಸ್ಥ ಪಿ.ಬಿ. ಘೋರ್ಪಡೆ ವಂಶಜರಿಂದ ಹಿರೇದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆಯಾಗಿ 100 ವರ್ಷ ಗತಿಸಿದ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಘೋರ್ಪಡೆ ಮನೆತನದವರಿಂದ ಫೆ. 9ರಂದು ನೂತನ ಹಿರೇದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ.
ಈ ಹಿನ್ನೆಲೆಯಲ್ಲಿ ರಾಜ ಮನೆತನದ ಕೀರ್ತಿಮಾಲಿನಿಯವರ ನೇತೃತ್ವದಲ್ಲಿ ರಾಜವಾಡೆಯಿಂದ ಹೊರಟ ಭವ್ಯ ಮೆರವಣಿಗೆಯಲ್ಲಿ ಸುಮಂಗಲಿಯರ ಕಳಸ ಹಾಗೂ ಕುಂಭ ಮೇಳ ಜತೆ ಸಕಲ ಮಂಗಲ ವಾದ್ಯಗಳೊಂದಿಗೆ ಪಟ್ಟಣದ ಹಿರೇಬಜಾರ, ಕೊಳ್ಳಿಯವರ ಕತ್ರಿ, ಭಜರಂಗ ವೃತ್ತ, ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಜೋಡು ರಸ್ತೆ ಹಾಗೂ ಕಾಲಕಾಲೇಶ್ವರ ವೃತ್ತದ ವರೆಗೆ ಸಂಚರಿಸಿ ಬಳಿಕ ಹಿರೇದುರ್ಗಾದೇವಿ ದೇಗುಲ ತಲುಪಿತು.
ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಪುರಸಭೆ ಮಾಜಿ ಸದಸ್ಯ ರಾಜೇಂದ್ರ ಘೋರ್ಪಡೆ, ಹಿರೇದುರ್ಗಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಮುದಿಯಪ್ಪ ಮುಧೋಳ, ಮೂಕಪ್ಪ ನಿಡಗುಂದಿ, ಪುರಸಭೆ ಸದಸ್ಯ ಷಣ್ಮುಕಪ್ಪ ಚಿಲಝರಿ, ತಿರುಪತಿ ಕಲ್ಲೋಡ್ಡರ, ಎಫ್.ಎಸ್. ಕರಿದುರಗನವರ, ಷಣ್ಮುಕಪ್ಪ ನಿಡಗುಂದಿ, ಯಲ್ಲಪ್ಪ ಬಂಕದ, ಗಿಡ್ಡಪ್ಪ ಪೂಜಾರ, ಬಸವರಾಜ ಬಂಕದ, ಹಸನ ತಟಗಾರ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

