ಗದಗ

ಇಂದು ಶರಣ ಸಂಗಮ ಕಾರ್ಯಕ್ರಮ

Published On :

ಗದಗ: ನಗರದ ಶಿವಾನಂದ ನಗರದ ಬಸವ ಮಂಟಪದಲ್ಲಿ ಬಸವದಳದ 1058ನೇ ಶರಣ ಸಂಗಮದಲ್ಲಿ ವಚನಗಳ ಹಿರಿಮೆ ಕುರಿತು ಉಪನ್ಯಾಸ ಕಾರ್ಯಕ್ರಮ ಫೆ. 9ರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ. ಎಂ.ಬಿ. ಲಿಂಗದಾಳ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕರಾಗಿ ಗಿರಿಜಕ್ಕ ಧರ್ಮರಡ್ಡಿ ಆಗಮಿಸುವರು. ಬಸವದಳದ ಸದಸ್ಯರು, ಶರಣ ಸಾಹಿತ್ಯಾಭಿಮಾನಿಗಳು ಹಾಗೂ ಆಸಕ್ತರು ಭಾಗವಹಿಸಬೇಕೆಂದು ಪ್ರಕಟಣೆ ತಿಳಿಸಿದೆ.
ಇಂದು ಯುವ ಶಕ್ತಿ ಕುರಿತು ಉಪನ್ಯಾಸ
ನರಗುಂದ: ತಾಲೂಕಿನ ಕಣಕಿಕೊಪ್ಪ ಗ್ರಾಮದಲ್ಲಿ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಸಕ್ತ ಸಾಲಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ಕಾರ್ಯಕ್ರಮದ ಅಂಗವಾಗಿ ಫೆ. 9ರ ಸಂಜೆ 5.30ಕ್ಕೆ ಗ್ರಾಮದ ಶಾಲೆಯ ಆವರಣದಲ್ಲಿ ಯುವಶಕ್ತಿ ದೇಶದ ಶಕ್ತಿ ಎನ್ನುವ ಕುರಿತು ಉಪನ್ಯಾಸ ಆಯೋಜಿಸಲಾಗಿದೆ. ಅಜ್ಜಪ್ಪ ಹೌದಕ್ಕನ್ನವರ, ಡಾ. ಎಂ.ಡಿ. ಕಮತಗಿ, ಡಾ. ಮಂಜುಳಾ ಹಂಚಿನಾಳ, ಅನುರಾಧಾ ಪಾಟೀಲ, ಎಂ.ಕೆ. ಮುಲ್ಲಾ, ಗ್ರಾಪಂ ಸದಸ್ಯ ಕಲ್ಲಪ್ಪ ಕೊಳ್ಳಿಯವರು, ಕಲ್ಲಪ್ಪ ಮೆಣಸಿಕಾಯಿ, ಸಂಗಪ್ಪ ನಂದಿ, ಧರ್ಮರಡ್ಡಿ ಹುಲಗೇರಿ, ಶಿವರಡ್ಡಿ ಮೂಗನೂರ, ಮಂಜುಳಾ ಪೇಟೆ, ಗಂಗವ್ವ ಮಾದರ, ಬಸವರಾಜ ಗೌಜಗೇರಿ, ಶಿದ್ದಪ್ಪ ಕಾರತಾಳ, ಡಾ. ಬಸವರಾಜ ಸವದಿ ಮುಂತಾದವರು ಭಾಗವಹಿಸುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ನಾಳೆ ವಾರ್ಷಿಕ ಸಭೆ
ನರಗುಂದ: ಪಟ್ಟಣದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಸಭೆ ಫೆ. 10ರ ಸಂಜೆ 6ಕ್ಕೆ ಆಯೋಜಿಸಲಾಗಿದೆ. ಲಯನ್ಸ್ ಕ್ಲಬ್‌ನ ಜಿಲ್ಲಾ ಗವರ್ನರ್ ಲ. ಗಣಪತಿ ನಾಯಕ, ಮಾಜಿ ಸಚಿವ ಸಿ.ಸಿ. ಪಾಟೀಲ ಮುಂತಾದವರು ಆಗಮಿಸುತ್ತಾರೆಂದು ಪ್ರಕಟಣೆ ತಿಳಿಸಿದೆ.
ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿಪೂಜೆ
ಗಜೇಂದ್ರಗಡ: ಗ್ರಾಮೀಣ ಜನತೆಯ ಬದುಕು ಹಸನಾಗಿಸಲು ಸರ್ಕಾರ ನೀಡುವ ಅನುದಾನ ಅರ್ಹ ಫಲಾನುಭವಿಗಳಿಗೆ ತಲುಪಿಸಿ ಸರ್ಕಾರ ಕನಸು ಸಾಕಾರಗೊಳಿಸಲು ಅಧಿಕಾರಿಗಳು ಮುಂದಾಗಿ ಎಂದು ಗ್ರಾಪಂ ಅಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು. ಸಮೀಪದ ರಾಜೂರು ಗ್ರಾಮದ ಗ್ರಾಪಂನ 13ನೇ ಹಣಕಾಸು ಯೋಜನೆ ಅಡಿಯಲ್ಲಿ ರು. 1.29 ಲಕ್ಷ ವೆಚ್ಚದ ಅನುದಾನದಲ್ಲಿ ಸರ್ಕಾರಿ ಮೆಟ್ರಿಕ್ ಪೂರ್ವ ಹಾಸ್ಟೆಲ್ ಬಳಿ ರಸ್ತೆಗೆ ಸಿಮೆಂಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಉದ್ಯೋಗ ಖಾತ್ರಿ ಮೂಲ ಯೋಜನೆ ಜೊತೆ ಗ್ರಾಮೀಣ ಕ್ರೀಡಾಂಗಣ, ನಮ್ಮ ಹೊಲ-ನಮ್ಮ ರಸ್ತೆ, ಸಣ್ಣ ಮತ್ತು ಅತಿಸಣ್ಣ ರೈತರಿಗೆ ಬದು ನಿರ್ಮಾಣ, ಕೃಷಿ ಹೊಂಡ, ಒಳಗಟ್ಟಿ, ತಡೆಗೋಡೆ, ದನದ ಕೊಟ್ಟಿಗೆ, ಕುರಿದೊಡ್ಡಿ, ಕೆರೆ ನಿರ್ಮಾಣ, ಸೇರಿ ಹೆಚ್ಚುವರಿಯಾಗಿ 15 ಕಾಮಗಾರಿಗಳನ್ನು ಸೇರ್ಪಡೆಗೊಳಿಸಿ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ. ಈ ನಿಟ್ಟಿನಲ್ಲಿ ಗ್ರಾಮೀಣರು ಯೋಜನೆಯ ಲಾಭ ಪಡೆದು ಸ್ವಾವಲಂಬನೆ ಬದುಕು ಸಾಗಿಸಿ ಎಂದರು. ಗ್ರಾಪಂ ಸದಸ್ಯ ಶಿವಕುಮಾರ ಜಾಧವ ಮಾತನಾಡಿದರು. ಶಂಕ್ರಪ್ಪ ಹಾದಿಮನಿ, ಪರಶುರಾಮ ಚಿಲಝರಿ, ಯಲ್ಲಪ್ಪ ಶಂಕ್ರಿ, ಮುರ್ತುಸಾಬ್ ಮುಜಾವರ, ಹುಚ್ಚಪ್ಪ ಗುಳಗುಳಿ, ಶಿವಕುಮಾರ ಭೂಮದ, ಯಲ್ಲಪ್ಪ ಭೂಮದ, ಯಮನೂರಸಾಬ್ ಮುಜಾವರ, ಶರಣಪ್ಪ ಜಿಗಳೂರ, ದಾವಲಸಾಬ್ ಮುಜಾವರ, ಮಹಮ್ಮದಅಲಿ ಚೋರಗಸ್ತಿ ಇದ್ದರು.
ಇಂದು ದಿ. ಕೆ.ಎಚ್. ಪಾಟೀಲ ಪುಣ್ಯಸ್ಮರಣೆ
ಗದಗ: ಸಹಕಾರಿ ರಂಗದ ಭೀಷ್ಮ, ದಿ. ಕೆ.ಎಚ್. ಪಾಟೀಲರ ಪುಣ್ಯಸ್ಮರಣೆಯ ಅಂಗವಾಗಿ ಫೆ. 9ರ ಬೆಳಗ್ಗೆ 9ಕ್ಕೆ ಸ್ಥಳೀಯ ಕಾಟನ್ ಸೇಲ್ ಸೊಸೈಟಿಯ ಆವರಣದಲ್ಲಿ ಪ್ರಾರ್ಥನಾ ಸಭೆ ಏರ್ಪಡಿಸಲಾಗಿದೆ. ಅವರ ಅಭಿಮಾನಿಗಳು ಹೆಚ್ಚಿನ      ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.
ಇಂದು ಸಮಾರೋಪ
ಗಜೇಂದ್ರಗಡ: ಸ್ಥಳೀಯ ಎಸ್.ಎಂ. ಭೂಮರಡ್ಡಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಗ್ರಾಮ ಲಕ್ಕಲಕಟ್ಟಿಯಲ್ಲಿ ಎನ್‌ಎಸ್‌ಎಸ್ ಶಿಬಿರದ ಸಮಾರೋಪ ಸಮಾರಂಭ ಫೆ. 9ರ ಬೆಳಗ್ಗೆ 10ಕ್ಕೆ ನಡೆಯಲಿದೆ. ಪ್ರಾ. ಉಮೇಶ ಶಿರೋಳ ಅಧ್ಯಕ್ಷತೆ ವಹಿಸುವರು. ಬಸವರಾಜ ಹಾಳಕೇರಿ, ಗುರುಸಿದ್ದಪ್ಪ ಮಾರನಬಸರಿ, ವೈ.ವಿ. ಹುನಗುಂದ, ಎಸ್.ಆರ್. ವೀರಕ್ತಮಠ, ಎಸ್.ಕೆ. ಹಿರೇಮಠ, ಎಂ.ಸಿ. ಮುಚಖಂಡಿ, ಶಿವಪುತ್ರಪ್ಪ ನಾಯಕ, ಎಸ್.ಬಿ. ಹಿರೇಮಠ, ಶರಣಪ್ಪ ಬೆನಕನವಾರಿ, ಎಸ್.ಎಸ್. ಚುಂಚಾ, ಎಲ್.ಕೆ. ವದ್ನಾಳ, ಟಿ.ಟಿ. ಗೋಂಧಳೆ, ಜಗದೀಶ ದುದ್ಗಿ, ಉಮೇಶ ಶೀಲವಂತರ ಪಾಲ್ಗೊಳ್ಳುವರು.
ಇಂದು ಪ್ರಾಣ ಪ್ರತಿಷ್ಠಾಪನೆ
ಗಜೇಂದ್ರಗಡ: ಪಟ್ಟಣದ ಅದಿ ದೇವತೆ ಹಿರೇ ದುರ್ಗಾದೇವಿ ನೂತನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಫೆ. 9ರಂದು ಬೆಳಗ್ಗೆ 9ಕ್ಕೆ ನಡೆಯಲಿದೆ. ರಾಜ ವಂಶಸ್ಥ ಪಿ.ಬಿ. ಘೋರ್ಪಡೆ ವಂಶಜರಿಂದ ಪ್ರತಿಷ್ಠಾಪಿಸಲ್ಪಟ್ಟ ಹಿರೇ ದುರ್ಗಾದೇವಿ ಮೂರ್ತಿ ಪ್ರತಿಷ್ಠಾಪನೆಯಾಗಿ ನೂರುವರ್ಷ ಕಂಡ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಘೋರ್ಪಡೆ ಮನೆತನದವರಿಂದ ಮೂರ್ತಿ ಪ್ರತಿಷ್ಠಾಪನೆ ಆಯೋಜಿಸಲಾಗಿದೆ. ಬೆಳಗ್ಗೆ 5ಕ್ಕೆ ದುರ್ಗಾದೇವಿಗೆ ವಿಶೇಷ ಹೋಮ, ಹವನ ಪೂಜಾ ಕೈಂಕರ್ಯಗಳು ಜರುಗಲಿವೆ.
11ರಂದು ಕೆಡಿಪಿ ಸಭೆ
ಗದಗ: ಜಿಲ್ಲಾ ಪಂಚಾಯಿತಿ ಮಾಸಿಕ ಕೆಡಿಪಿ ಸಭೆಯನ್ನು ಜಿಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ  ಫೆ. 11ರ ಬೆಳಗ್ಗೆ 11ಕ್ಕೆ ಜಿಪಂ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂ ದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರಣ್ಣ ತುರಮರಿ ತಿಳಿಸಿದ್ದಾರೆ.
ನಿಯಮ ಬದಲಾವಣೆ
ಗದಗ: ಕೃಷಿ ಇಲಾಖೆಯ ವಿವಿಧ ಯೋಜನೆಗಳಡಿ ರು. 5 ಸಾವಿರಕ್ಕಿಂತಲೂ ಹೆಚ್ಚಿಗೆ ಸಹಾಯಧನ ಲಭ್ಯವಿರುವ ಉಪಕರಣಗಳ ಸೌಲಭ್ಯ ಪಡೆಯುವಲ್ಲಿ ಸರ್ಕಾರದ ಮಾರ್ಗಸೂಚಿಗಳಲ್ಲಿ ಬದಲಾವಣೆಗಳಾಗಿರುತ್ತವೆ. ರು. 5 ಸಾವಿರಕ್ಕಿಂತಲೂ ಹೆಚ್ಚಿನ ಮೊತ್ತದ ಸಹಾಯಧನವನ್ನು ರೈತರ ಖಾತೆಗೆ ನೇರವಾಗಿ ಅನುದಾನದ ಲಭ್ಯತೆ ಆಧಾರದ ಮೇಲೆ ಜಮಾ ಮಾಡಲಾಗುವುದು. ಬದಲಾವಣೆಯಾದ ನಿಯಮಗಳಿಗೆ ಅನುಸಾರವಾಗಿ ಉಪಕರಣಗಳ ಸೌಲಭ್ಯ ಪಡೆಯುವಲ್ಲಿ ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆಯಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಇಂದು ಮೈಲಾರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ
ಲಕ್ಷ್ಮೇಶ್ವರ: ಸಮಿಪದ ಗೊಜನೂರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮೈಲಾರಲಿಂಗೇಶ್ವರ ದೇವಸ್ಥಾನ ಉದ್ಘಾಟನೆ ಹಾಗೂ ಮೈಲಾರಲಿಂಗೇಶ್ವರ ಸ್ವಾಮಿ ಹಾಗೂ ಗಂಗ ಮಾಳವ್ವ ದೇವರುಗಳ ಪ್ರಾಣ ಪ್ರತಿಷ್ಠಾಪನೆ ಫೆ. 9ರ ಬೆಳಗ್ಗೆ 7ಕ್ಕೆ ನಡೆಯಲಿದೆ. ಬನ್ನಿಕೊಪ್ಪದ ಡಾ. ಸುಜ್ಞಾನದೇವ ಸ್ವಾಮಿಗಳು ನೆರವೇರಿಸುವರು. ದೇವಸ್ಥಾನದ ಗೋಪುರದ ಕಳಸಾರೋಹಣವನ್ನು ಶಿರಹಟ್ಟಿಯ ಜಗದ್ಗುರು ಫಕ್ಕೀರ ಸಿದ್ಧರಾಮ ಸ್ವಾಮಿಗಳು ಮಾಡಲಿದ್ದಾರೆ. ಗ್ರಾಮದ ಭಕ್ತರು ದೀವಟಿಗೆ ಸೇವೆ ಮಾಡಲಿದ್ದಾರೆ ಎಂದು ಗೊಜನೂರ ಗ್ರಾಮದ ಸದ್ಭಕ್ತ ಮಂಡಳಿ ಪ್ರಕಟಣೆ ತಿಳಿಸಿದೆ.
ಇಂದು ಸಮಾರೋಪ ಸಮಾರಂಭ
ಗಜೇಂದ್ರಗಡ: ಸ್ಥಳೀಯ ಬಿಎಸ್‌ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ದತ್ತು ಗ್ರಾಮ ಕುಂಟೋಜಿಯಲ್ಲಿ ಎನ್‌ಎಸ್‌ಎಸ್ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಫೆ. 9ರ ಬೆಳಗ್ಗೆ 10ಕ್ಕೆ ವರದಾ ವೇದಿಕೆಯಲ್ಲಿ ನಡೆಯಲಿದೆ. ಪ್ರಾಚಾರ್ಯ ಪಿ.ಎಚ್. ಕ್ಯಾರೇಕೊಪ್ಪ ಅಧ್ಯಕ್ಷತೆ ವಹಿಸುವರು. ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಐ. ಅಸುಂಡಿ, ಗಜೇಂದ್ರಗಡ ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಗ್ರಾಪಂ ಅಧ್ಯಕ್ಷೆ ಶಾಂತವ್ವ ಮಾಳೋತ್ತರ, ಪ್ರಧಾನ ಗುರುಮಾತೆ ಬಿ.ಟಿ. ಹೊಸಮನಿ, ಪ್ರಭಯ್ಯ ಕಾರಡಗಿಮಠ, ಭೀಮಪ್ಪ ಅಬ್ಬಿಗೇರಿ, ಇತರರು ಪಾಲ್ಗೊಳ್ಳುವರೆಂದು ಎನ್‌ಎಸ್‌ಎಸ್ ಅಧಿಕಾರಿ ವಿ.ಪಿ. ಹಿತ್ತಲಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.