ತೋಟಗಾರಿಕಾ ಬೆಳೆಗಳಿಗೆ ಸಂಸ್ಕರಣೆ ಕೊರತೆ: ಉದಾಸಿ
ಗದಗ: ತೋಟಗಾರಿಕಾ ಬೆಳೆಗಳು ಇಂದು ಸಂಸ್ಕರಣಾ ಕೊರತೆ ಸಮಸ್ಯೆ ಎದುರಿಸುತ್ತಿದ್ದು, ಇದರಿಂದ ಬೆಳೆಗಾರರಿಗೆ ತೊಂದರೆಯಾಗುತ್ತಿದೆ ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ಹೇಳಿದರು.
ನಗರದ ಡಂಬಳ ನಾಕಾದ ಬಳಿಯಲ್ಲಿರುವ ಜಿಲ್ಲಾ ತೋಟಗಾರಿಕಾ ವ್ಯವಸಾಯ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣಾ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ತರಕಾರಿ ಮತ್ತು ಹಣ್ಣು ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ 2ನೇ ಸ್ಥಾನ ಪಡೆದಿರುವ ನಮ್ಮ ದೇಶದಲ್ಲಿ ಶೇ. 2ರಷ್ಟು ಮಾತ್ರ ಇವುಗಳ ಸಂಸ್ಕರಣೆಗೆ ನಡೆಯುತ್ತಿದೆ. ಶೇ. 98ರಷ್ಟು ಉತ್ಪನ್ನಗಳಿಗೆ ಸಂಸ್ಕರಣ ಇಲ್ಲದೇ ಹಾಳಾಗುತ್ತಿದ್ದು, ಇದರಲ್ಲಿ ಶೇ. 40ರಷ್ಟು ಉತ್ಪಾದಿಸಿರುವ ತರಕಾರಿ ಮತ್ತು ಹಣ್ಣುಗಳು ಕೆಡುತ್ತಿದೆ. ತರಕಾರಿ ಮತ್ತು ಹಣ್ಣು ಬೆಳೆಗಾರರು ಸಹಕಾರ ಸಂಘಗಳ ಮೂಲಕ ಸಂಸ್ಕರಣಾ ಹಾಗೂ ಮಾರಾಟ ಸಂಘಗಳನ್ನು ಕಟ್ಟಿಕೊಂಡು ಲಾಭದಾಯಕವಾಗಿರುವ ಈ ಉತ್ಪನ್ನಗಳ ಮಾರಾಟಕ್ಕೆ ಹಾಗೂ ಸಂಸ್ಕರಣಕ್ಕೆ ವ್ಯವಸ್ಥಿತವಾದ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದರು.
ಆಹಾರ ಧಾನ್ಯದ ಸರಿಯಾದ ಅಂಕಿ ಅಂಶಗಳ ಮಾಹಿತಿ ಕೊರತೆಯಿಂದಾಗಿ ಇಂದು ಆಹಾರ ಭದ್ರತೆಯಲ್ಲಿ ಸಮಸ್ಯೆ ಎದುರಿಸುತ್ತೇವೆ. ಇದರಿಂದಾಗಿ ಬೆಲೆ ಏರಿಕೆ ನಿರಂತರವಾಗಿದೆ. ಕಾಲಕಾಲಕ್ಕೆ ದವಸಧಾನ್ಯಗಳ ಮೇಲೆ ನಿಗಾವಹಿಸಿ ಅಂಕಿ-ಅಂಶದೊಂದಿಗೆ ಕಾರ್ಯಕ್ರಮ ರೂಪಿಸಿದ್ದಲ್ಲಿ ಬೆಲೆ ಏರಿಕೆ ತಗ್ಗಿಸಲು ಸಾಧ್ಯವಿದೆ. ರೈತರು ಸರ್ಕಾರದ ಸೌಲಭ್ಯ ಬಳಸಿಕೊಂಡು ಸಹಕಾರ ಸಂಘಗಳ ಸ್ಥಾಪಿಸಿಕೊಂಡು ತರಕಾರಿ, ಹಣ್ಣು, ಹೂವು ಸೇರಿದಂತೆ ನೀರಾವರಿ ಬೆಳೆಗಳಿಗೆ ಲಾಭ ಪಡೆಯಿರಿ ಎಂದರು.
ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ನಗರಸಭೆ ಸದಸ್ಯ ಸದಾನಂದ ಪಿಳ್ಳೆ, ರೈತ ಈಶ್ವರಪ್ಪ ಹಂಚಿನಾಳ ಮಾತನಾಡಿದರು. ಎಸ್.ಟಿ. ಮೇಲಗಿರಿ, ಮಹೇಶ ಮಾನ್ವಿ, ಮುಲ್ಕಿಪಾಟೀಲ, ಬಸವರಾಜ ಕೊರ್ಲಹಳ್ಳಿ, ಆರ್.ಡಿ. ಕಡ್ಲಿಕೊಪ್ಪ, ಗಂಗಣ್ಣ ಕೋಟಿ ಇದ್ದರು. ಶ್ರೀನಿವಾಸ ಹುಬ್ಬಳ್ಳಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

