ಗದಗ

ಪಾರದರ್ಶಕ ಆಡಳಿತವೇ ಎಎಪಿ ಧ್ಯೇಯ: ಬೂದಿಹಾಳ

Published On :

ರೋಣ: ಪಾರರ್ದಶಕ ಆಡಳಿತ ನಡೆಸುವುದೇ ಆಮ್ ಆದ್ಮಿ ಪಕ್ಷದ ಮುಖ್ಯ ಧ್ಯೇಯವಾಗಿದೆ ಎಂದು ಎಎಪಿ ತಾಲೂಕು ಪ್ರಮುಖ ಅಮರೇಶ್ವರ ಬೂದಿಹಾಳ ಹೇಳಿದರು.
ಅವರು ಶನಿವಾರ ಪಟ್ಟಣದ ಶಿವಪೇಟೆ 8ನೇ ಕ್ರಾಸ್ನ ಅಮರೇಶ್ವರ ಆಯಲ್ ಮಿಲ್ ಆವರಣದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಾಲಯ ಉದ್ಘಾಟನೆ, ಉಚಿತ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆಗಾಗಿ ಜರುಗಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಎಎಪಿ ಜಿಲ್ಲಾ ಪ್ರಮುಖ ಮೋಹನ ಮುದೋಳ ಮಾತನಾಡಿ, ಬಂಡವಾಳ ಶಾಹಿಗಳ ಕಪಿಮುಷ್ಟಿಯಿಂದ ದೇಶ ಮುಕ್ತವಾಗಬೇಕು ಎಂಬ ಉದ್ದೇಶ ಪಕ್ಷ ಹೊಂದಿದೆ ಎಂದರು.
ಎಎಪಿ ಜಿಲ್ಲಾ ಪ್ರಮುಖ ವಿಜಯ ಕಲಕೇರಿ ಮುಂತಾದವರು ಮಾತನಾಡಿದರು. ಈ ವೇಳೆ ತಾಲೂಕಿನ ಹೊನ್ನಿಗನೂರ, ತಳ್ಳಿಹಾಳ, ಜಕ್ಕಲಿ, ಜಿಗಳೂರ, ಮುದೇನಗುಡಿ, ಹುನಗುಂಡಿ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಜನತೆ ಆಮ್ ಆದ್ಮಿ ಪಕ್ಷಕ್ಕೆ ಹೆಸರು ನೋಂದಾಯಿಸಿದರು. ಮುಖಂಡರಾದ ಕೃಷ್ಣಾಜಿ ಸುರಕೋಡ, ವಿಶ್ವನಾಥ ಶಿರಿ, ಮಹಾದೇವ ಕಲಬುರ್ಗಿ, ವರದರಾಜ ಪತ್ತೇಪುರ, ಎಸ್.ವಿ. ನೇಗಲಿ, ಎಸ್.ಎಚ್. ಬಾವಳ್ಳಿ, ಲಕ್ಷ್ಮಣ ಹಳ್ಳಿಕೇರಿ, ಶ್ರೀಶೈಲ ಲಮಾಣಿ, ಡಾ. ಚಂದ್ರಶೇಖರ ಮುಸಿಗೇರಿ, ಬಸನಗೌಡ ಜಕ್ಕನಗೌಡ್ರ, ಉಷಾದೇವಿ ಶಾಂತಸ್ವಾಮಿಮಠ, ಯಲ್ಲವ್ವಗೌಡಶ್ಯಾನಿ ಪಾಟೀಲ, ಸಂಗಪ್ಪ ಗುಡೂರ, ರಾಮಣ್ಣ ತಟ್ಟಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.