ಗದಗ

22ರಿಂದ ಅಂತೂರ-ಬೆಂತೂರಿನಲ್ಲಿ ಕಬಡ್ಡಿ ಪಂದ್ಯಾವಳಿ

Published On :

ಕನ್ನಡಪ್ರಭ ವಾರ್ತೆ, ಮುಳಗುಂದ. ಫೆ. 9
ಸಮೀಪದ ಅಂತೂರ-ಬೆಂತೂರ ಗ್ರಾಮದಲ್ಲಿ ಫೆ. 22 ಹಾಗೂ 23ರಂದು 2 ದಿನಗಳವರೆಗೆ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ. ಇದಕ್ಕಾಗಿ ಗ್ರಾಮದ ಕೃಷ್ಣಗೌಡ ವೆಂಕನಗೌಡ ಪಾಟೀಲ ಸರ್ಕಾರಿ ಪ್ರೌಢ     ಶಾಲಾ ಮೈದಾನದಲ್ಲಿ ಸಕಲ ಸಿದ್ಧತೆಗಳು        ಪೂರ್ಣಗೊಂಡಿವೆ.
ಗ್ರಾಮೀಣ ಕ್ರೀಡೆ ಕಬಡ್ಡಿಗೆ ಹೆಸರುವಾಸಿಯಾಗಿರುವ ಅಂತೂರು-ಬೆಂತೂರ ಗ್ರಾಮ ಇದುವರೆಗೂ ಸ್ಥಳೀಯ ಹಾಗೂ ರಾಜ್ಯ ಮಟ್ಟದ 16ಕ್ಕೂ ಹೆಚ್ಚು ಪಂದ್ಯಾವಳಿಗಳನ್ನು ಆಯೋಜಿಸಿ ಯಶಸ್ವಿಯಾಗಿದೆ. ಈ ಹಿಂದೆ ಕವಿವಿ ಪರವಾಗಿ ಗ್ರಾಮದ ವಿ.ವೈ. ಹರ್ಲಾಪುರ, ಜುಂಜಪ್ಪ ಬಾರಕೇರ, ಎಂ.ಬಿ. ತುಪ್ಪದ, ಎಂ.ಜಿ. ಮಲ್ಲಿಗವಾಡ, ಎಸ್.ಡಿ. ಮಾದರ ಹಾಗೂ ಪ್ರಸಕ್ತ ವರ್ಷದಲ್ಲಿ ಅವಿನಾಶ ಹೆಗ್ಗಣ್ಣವರ, ಗಣೇಶ ಹಡಪದ, ರಾಜು ಹಾದಿಮನಿ ಕವಿವಿ ಪರ ಆಟವಾಡಿ ಅಂತರ ವಿವಿ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ತೀರ್ಪುಗಾರರಾಗಿ ಈ ಗ್ರಾಮದ ಕಬಡ್ಡಿ ಕ್ರೀಡಾಪಟುಗಳಾದ ಎಸ್.ಬಿ. ಆಲೂರ, ಎಸ್.ಡಿ. ಮಾದರ, ಎಸ್.ಸಿ. ಬಾವಿ, ಎಸ್.ಎಸ್. ಸಂದಿಗವಾಡ ಆಯ್ಕೆಯಾಗಿದ್ದು, ಈ ಗ್ರಾಮದ ಕಬಡ್ಡಿ ಇತಿಹಾಸಕ್ಕೆ ಹಿಡಿದ ಕನ್ನಡಿಯಾಗಿದೆ. ಪಂದ್ಯಾವಳಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಕ್ರೀಡಾ ಸಚಿವ ಅಭಯಚಂದ್ರ ಜೈನ ಉದ್ಘಾಟಿಸುವರು. ರಾಜ್ಯ, ರಾಷ್ಟ್ರ ಮಟ್ಟದ ತೀರ್ಪುಗಾರರು ಭಾಗವಹಿಸುವರು. ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನವಾಗಿ ರು. 20 ಸಾವಿರ ಹಾಗೂ ಸೀಲ್ಡ್, ದ್ವಿತೀಯ ರು. 15 ಸಾವಿರ ಹಾಗೂ ಸೀಲ್ಡ್, ತೃತೀಯ ರು. 10 ಸಾವಿರ ಹಾಗೂ ಸೀಲ್ಡ್, ಚತುರ್ಥ ರು. 5 ಸಾವಿರ ಹಾಗೂ ಸೀಲ್ಡ್ ಇನ್ನುಳಿದಂತೆ ಉತ್ತಮ ತಂಡ, ದಾಳಿಗಾರ, ಹಿಡಿತಗಾರ ಹಾಗೂ ಸರ್ವೋತ್ತಮ ಆಟಗಾರರಿಗೆ ವೈಯಕ್ತಿಕ ಬಹುಮಾನ ನೀಡಲಾಗುವುದು. ಭಾಗವಹಿಸಲಿಚ್ಛಿಸುವವರು ಎಂ.ಬಿ. ತುಪ್ಪದ 8105052798, ಎಸ್.ಡಿ. ಮಾದರ 9986381640, ಎಸ್.ಬಿ. ಆಲೂರ 9449122998 ಅವರನ್ನು ಫೆ. 20ರೊಳಗೆ ತಂಡದ ಹೆಸರು ನೋಂದಾಯಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.